Advertisement

ವಿಜ್ಞಾನಿಯಾಗಲು ಹೊಸತು ಹುಡುಕುವ ಸ್ವಭಾವ ಇರಲಿ

01:06 PM Feb 17, 2017 | |

ದಾವಣಗೆರೆ: ಇಂದು ಪ್ರತಿಯೊಂದರಲ್ಲೂ ವಿಜ್ಞಾನದ ಅಂಶ ನೋಡಬಹುದು. ವಿಜ್ಞಾನ ಇಲ್ಲದ ನಿತ್ಯ ಜೀವನವೇ ಇಲ್ಲ ಎಂದು ಐಐಎಸ್‌ಸಿ ವಿಜ್ಞಾನಿ ಡಾ| ಹರೀಶ್‌ ಭಟ್‌ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ನಗರದ ಹೊರವಲಯದ ಶಾಮನೂರು ಬಳಿಯ ಜೈನ್‌ ವಿದ್ಯಾಲಯದ ಸಿಬಿಎಸ್‌ಸಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ವಿಜ್ಞಾನ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ವಿಜ್ಞಾನ ಇಲ್ಲದ ವಿಷಯವೇ ಇಲ್ಲದಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದರು. ಮಕ್ಕಳು ಕೌತುಕದಿಂದ ವಿಜ್ಞಾನ ಅಭ್ಯಾಸದಲ್ಲಿ ತೊಡಗಬೇಕು. ಕುತೂಹಲ ಇಲ್ಲದ ವಿಜ್ಞಾನ ಅಭ್ಯಾಸ ಸಾರ್ಥಕವಾಗುವುದಿಲ್ಲ. ವಿಜ್ಞಾನಿಯಾಗಲು ಮುಖ್ಯವಾಗಿ ಹೊಸ ಹೊಸ ವಿಷಯಗಳ ಕುರಿತು ಅಧ್ಯಯನ ಮಾಡುವ, ಹೊಸತನ್ನು ಹುಡುಕುವ ಸ್ವಭಾವ ಇರಬೇಕು ಎಂದರು.

ಕೇವಲ ಇಂಜಿನಿಯರ್‌ ಇಲ್ಲವೆ ಡಾಕ್ಟರ್‌ ಹೊರತಾಗಿಯೂ ಬೇರೆ ಆಯ್ಕೆಗಳಿವೆ ಎಂದಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಮನಗಾಣಬೇಕಿದೆ ಎಂದು ಅವರು ತಿಳಿಸಿದರು. ಅಗಸ್ತ ಅಂತಾರಾಷ್ಟ್ರೀಯ ಫಾಂಡೇಷನ್‌ ವತಿಯಿಂದ ನಡೆದ ಜಿಜ್ಞಾಸ ವಿಜ್ಞಾನ ವಸ್ತು ಪ್ರದರ್ಶನ- 2017ರಲ್ಲಿ ನಿರುಪಯುಕ್ತ ಪ್ಲಾಸ್ಟಿಕ್‌ನಿಂದ ಉಪಯುಕ್ತ ಇಂಧನ ತಯಾರಿಸುವ ಮಾದರಿಗೆ ಪ್ರಥಮ ಬಹುಮಾನ ಗಳಿಸಿದ ಜೈನ್‌ ವಿದ್ಯಾಲಯ ಸಿಬಿಎಸ್‌ಇ ಶಾಲೆಯ ಮಕ್ಕಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ಈ ಪ್ರಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಗಮನ ಸೆಳೆಯಿರಿ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಈ ಪ್ರಯೋಗಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡುವ ಭರವಸೆ ನೀಡಿದರು.

ಸಂವಾದ: ಭೂಮಿ ಬಳಿ ಯಾವುದೇ ಜೈವಿಕ ವಾತಾವರಣ ಇಲ್ಲ. ಆದರೂ ಭೂಮಿ ತಿರುಗುತ್ತದೆ, ಚಲಿಸುತ್ತದೆ. ಇದಕ್ಕೆ ಕಾರಣವಾಗುವ ಶಕ್ತಿ ಯಾವುದು ಎಂದು ಅಮೋಘ ವರ್ಷ ನೃಪತುಂಗ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಹರ್ಷಚಿತ್ತರಾಗಿ ಉತ್ತರಿಸಿದ ಹರೀಶ್‌, ಇಂತಹ ಕೌತುಕಗಳೇ ಸಾಮಾನ್ಯ ವಿದ್ಯಾರ್ಥಿಯನ್ನು ವಿಜ್ಞಾನಿಯನ್ನಾಗಿ ರೂಪುಗೊಳಿಸುವುದು. ಭೂಮಿಗೆ ಚಲನಶಕ್ತಿ ಇದೆ. ನಭೋ ಮಂಡಲದಲ್ಲಿರುವ ಆಕಾಶಕಾಯಗಳ ನಡುವೆ ಗುರುತ್ವಾಕರ್ಷಣೆಯ ಬಲ ಇದೆ.

Advertisement

ಇದೇ ಬಲದ ಚಲನಶಕ್ತಿ ಉತ್ಪತ್ತಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಇನ್ನು ಶಾಲೆಯ ನಿರ್ದೇಶಕಿ ಸಯೀದಾ ಖಾನ್‌, ಹೈಸ್ಕೂಲ್‌ನಲ್ಲಿ ಓದುವ ಮಕ್ಕಳು ವರ್ಷದಿಂದ ವರ್ಷಕ್ಕೆ ತಮ್ಮ ಗುಣ ಸ್ವಭಾವದಲ್ಲಿ ಬದಲಾಗಲು ಕಾರಣ ಏನು? ಎಂಬುದಾಗಿ ಪ್ರಶ್ನಿಸಿದಾಗ, ಅವರಲ್ಲಿ ಆಗುವ ಹಾರ್ಮೋನ್‌ಗಳ ಬದಲಾವಣೆಯೇ ಇದಕ್ಕೆಲ್ಲಾ ಕಾರಣ ಎಂದು ಉತ್ತರಿಸಿದರು. ಸಿಬಿಎಸ್‌ಸಿ ಶಾಲೆಯ  ಪ್ರಾಂಶುಪಾಲರಾದ ಅನಿತ ರಜಪೂತ್‌, ಇನ್ನೋರ್ವ ಪ್ರಾಂಶುಪಾಲ ಪಿ.ಎನ್‌. ಪರಮೇಶ್ವರ, ಚೇತನರಾಂ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next