Advertisement

ನೆರೆಯಿಂದ ಏನೇ ನಷ್ಟವಾದರೂ ಅದಕ್ಕೆ ಸೂಕ್ತ ಪರಿಹಾರ: BSY

05:46 PM Aug 06, 2019 | Team Udayavani |

ಬಳ್ಳಾರಿ: ನೆರೆ ಹಾವಳಿಯಿಂದ ಏನೇ ನಷ್ಟವಾದರೂ ಅದಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಬಿ.ಎಸ್‌ಯಡಿಯೂರಪ್ಪ ಹೇಳಿದರು.
ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸೊಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಆಲಮಟ್ಟಿ ಜಲಾಶಯದಿಂದ 2.11 ಲಕ್ಷ ಕ್ಯೂಸೆಕ್, ನಾರಾಯಣಪುರ ಜಲಾಶಯದಿಂದ 2.9 ಲಕ್ಷ ಕ್ಯೂಸೆಕ್ ಸೇರಿ ಒಟ್ಟು 4 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಎನ್ ಡಿಆರ್ ಎಫ್ ಸಹ ಕಾರ್ಯಾಚರಣೆಗೆ ಇಳಿದಿದೆ. ಕೇಂದ್ರದಿಂದಲೂ ಮಿಲಿಟರಿ ಪಡೆ ಬಂದಿದೆ. ಭಾನುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಹಾಗಾಗಿ ನೆರೆಹಾವಳಿಯಿಂದ ಏನೇ ಸಮಸ್ಯೆ, ನಷ್ಟವಾದರೂ ಯಾವುದೇ ಪರಿಹಾರ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ತಿಳಿಸಿದರು.

ಈ ಹಿಂದೆಯೂ ನಾನು ಮುಖ್ಯಮಂತ್ರಿ ಆಗಿದ್ದಾಗ ನೆರೆಹಾವಳಿ ಸಮಸ್ಯೆಯಾಗಿತ್ತು ಎಂದ ಸಿಎಂ ಯಡಿಯೂರಪ್ಪ, ಆಗ ಇದಕ್ಕಿಂತಲೂ ಹೆಚ್ಚು ಸಮಸ್ಯೆಯಾಗಿತ್ತು. ಅದಕ್ಕೆ ಹೋಲಿಸಿದರೆ ಈಗ ಕಡಿಮೆಯಾಗಿದೆ ಎಂದರು.

ಬಳ್ಳಾರಿಯಲ್ಲಿ ಮಳೆಯಿಲ್ಲ. ಮಲೆನಾಡು ಪ್ರದೇಶವಾದ ಶಿವಮೊಗ್ಗದಲ್ಲೂ ಮಲೆಯಿಲ್ಲ. ಹೀಗೆ ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿ ಇದೆ. ಈವಾರವಾದರೂ ಒಳ್ಳೆಯ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ವೇಳೆ ಶಾಸಕ ಸೋಮಶೇಖರರೆಡ್ಡಿ, ಡಿಸಿ ಎಸ್.ಎಸ್. ನಕುಲ್, ಐಜಿಪಿ ಎಂ.ನಂಜುಂಡಸ್ವಾಮಿ, ಎಸ್ ಪಿ .ಸಿ.ಕೆ.ಬಾಬಾ, ಹೆಚ್ಚುವರಿ ಎಸ್.ಪಿ ಲಾವಣ್ಯ, ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ಪಾಲಿಕೆ ಆಯುಕ್ತೆ ತುಷಾರಮಣಿ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next