Advertisement

ನಿಮಗೆ ಯಾವ ಯೋಗ

11:12 PM Jun 20, 2019 | sudhir |

ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದಕ್ಕೆ ವಯಸ್ಸಿನ ಪರಿಮಿತಿಯಿಲ್ಲ. ಎಲ್ಲ ವಯಸ್ಸಿನವರೂ ಮಾಡಬಹುದಾಗಿದೆ. ಆದರೆ ಕೆಲವೊಂದು ಆಸನಗಳನ್ನು ಕೆಲವರು ಮಾತ್ರ ಮಾಡಬಹುದು.

Advertisement

ಉದಾಹರಣೆಗೆ, ಶರೀರಕ್ಕೆ ಹೆಚ್ಚು ಆಯಾಸ ನೀಡುವ ಯೋಗಾಸನಗಳ ಅಭ್ಯಾಸ ಹಿರಿಯರಿಗೆ ಕಷ್ಟವಾಗಬಹುದು. ಮಹಿಳೆಯರು ಗರ್ಭ ಧರಿಸಿದ್ದಾಗ ಕೆಲವು ಆಸನಗಳನ್ನು ಮಾಡಬಾರದೆಂದಿದೆ. ಇನ್ನು ಕೆಲವು ಆಸನಗಳು ಎಳೆಯರಿಗೆ ನಿಷಿದ್ಧ.

ಮಕ್ಕಳ ಯೋಗಾಭ್ಯಾಸ
ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಉತ್ತಮವಿರುವುದರ ಜತೆಗೆ ಮನಸ್ಸು ಸ್ಥಿಮಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಸೇತುಬಂಧ ಸರ್ವಾಂಗಾಸನ
ಕಾಲು ಮತ್ತು ಬೆನ್ನಿಗೆ ಹೆಚ್ಚು ಒತ್ತು ನೀಡಿ ಈ ಆಸನವನ್ನು ಮಾಡುವುದು. ಇದರಿಂದ ಬೆನ್ನು ಮೂಳೆೆ, ತೊಡೆ ಹಾಗೂ ಕುತ್ತಿಗೆಗೆ ಹೆಚ್ಚು ಶಕ್ತಿ ಲಭಿಸುತ್ತದೆ. ಮೆದುಳು ಚುರುಕಾಗುವುದಕ್ಕೆ ಇದು ಸಹಕಾರಿ.

- ವೃಕ್ಷಾಸನ
ಒಂದು ಕಾಲಿನ ಮೇಲೆ ಸಮತೋಲನದಲ್ಲಿ ನಿಂತು ಮಾಡುವ ಈ ಯೋಗಾಸನ ಶ್ರದ್ಧೆ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೆ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

- ಭುಜಂಗಾಸನ
ಕೈಗೆ ಹೆಚ್ಚು ಶಕ್ತಿಯನ್ನು ನೀಡಿ ಈ ಯೋಗಾಸನವನ್ನು ಮಾಡಲಾಗುತ್ತದೆ. ಇದು ಒತ್ತಡ ನಿವಾರಣೆಗೆ ಸಹಕಾರಿ.

– ಹಿರಿಯರ ಯೋಗಾಸನಗಳು
ವಯಸ್ಸು ಹೆಚ್ಚುತ್ತಾ ಹೋದಂತೆ ಶರೀರದಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹವನ್ನು ಆರೋಗ್ಯಯುತವಾಗಿರಿಸಲು ಯೋಗ ಸಹಾಯಕ. ಕೆಲವು ಯೋಗಾಸನಗಳನ್ನು ಹಿರಿಯರು ಸುಲಭವಾಗಿ ಮಾಡಬಹುದಾಗಿದೆ.

- ತ್ರಿಕೋನಾಸನ
ಕೈಕಾಲುಗಳಿಗೆ ಹೆಚ್ಚು ವ್ಯಾಯಾಮ ನೀಡುವ ಈ ಆಸನವನ್ನು ಮಾಡುವುದು ಬಹು ಸುಲಭ. ರಕ್ತದೊತ್ತಡವನ್ನು ನಿಭಾಯಿಸಲು ಇದು ಸಹಕಾರಿ.

- ಕಟಿ ಚಕ್ರಾಸನ
ಶರೀರಕ್ಕೆ ಹೆಚ್ಚು ಒತ್ತಡ ನೀಡದೆ ಸುಲಭವಾಗಿ ಈ ಯೋಗಾಸನವನ್ನು ಮಾಡಬಹುದಾಗಿದೆ. ಇದರಿಂದ ಕೈಕಾಲುಗಳ ಸ್ನಾಯುಗಳಿಗೆ ಹೆಚ್ಚು ಶಕ್ತಿ ಬರುತ್ತದೆ.

– ಬದ್ಧಕೋನಾಸನ
ತುಂಬಾ ಹೊತ್ತು ನಿಲ್ಲಲು ಸಮಸ್ಯೆಯಿರುವವರಿಗೆ ಈ ಯೋಗಾಸನ ಪ್ರಯೋಜನಕಾರಿ. ಸಂಧಿನೋವು ಕಡಿಮೆ ಮಾಡಲು ಸಹಾಯ ಮಾಡುವ ಆಸನವಿದು.

ಗರ್ಭಿಣಿಯರ ಯೋಗಾಸನಗಳು
- ಮರ್ಜರಿ ಆಸನ
ಇದರಿಂದ ಕುತ್ತಿಗೆ ಮತ್ತು ಭುಜಗಳಿಗೆ ಆರಾಮ ಉಂಟಾಗುತ್ತದೆ. ಕೈ ಕಾಲುಗಳ ಸ್ನಾಯು ಸೆಳೆತ ಕಡಿಮೆಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ.

- ಕೋನಾಸನ
ಸುಲಭವಾಗಿ ಮಾಡಬಹುದಾದ ಈ ಯೋಗಾಸದಿಂದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳಿಂದ ಮುಕ್ತಿ ಹೊಂದಬಹುದು.

- ಶವಾಸನ
ಗರ್ಭಿಣಿಯರಲ್ಲಿ ಉಂಟಾಗುವ ಒತ್ತಡವನ್ನು ನಿವಾರಿಸಿ, ಅವರು ಮಾನಸಿಕವಾಗಿ ಚಲನಶೀಲತೆಯನ್ನು ಹೊಂದುವಂತೆ ಮಾಡಲು ಈ ಆಸನ ಸಹಕಾರಿ.

Advertisement

Udayavani is now on Telegram. Click here to join our channel and stay updated with the latest news.

Next