ಬೆನ್ನಲ್ಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪೆಸಿಫಿಕ್ ಸಾಗರದ ಮೇಲೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸುವುದಾಗಿ ಬೆದರಿಕೆ ಹಾಕಿದ್ದು ಇತ್ತೀಚೆಗೆ ಸುದ್ದಿಯಾಗಿದೆ. ಹೈಡ್ರೋಜನ್ ಬಾಂಬ್ ಅತಿ ಪ್ರಬಲ ಬಾಂಬ್ ಆಗಿದ್ದು, ಅಣು ಬಾಂಬ್ ಗಿಂತಲೂ ಶಕ್ತಿಶಾಲಿಯಾಗಿದೆ. ಒಂದು ವೇಳೆ ಉ.ಕೊರಿಯಾ ಪೆಸಿಫಿಕ್ ಸಾಗರದ ಮೇಲೆ ಹೈಡ್ರೋಜನ್ ಬಾಂಬ್ ಹಾಕಿದರೆ ಏನಾಗುತ್ತೆ? ಹೈಡ್ರೋಜನ್ ಬಾಂಬ್ ಅದೆಷ್ಟು ಪ್ರಬಲ? ಎಂಬುದರ ಕುರಿತ ಮಾಹಿತಿಗಳು ಇಲ್ಲಿವೆ.
Advertisement
ಹೈಡ್ರೋಜನ್ ಬಾಂಬ್ ಅಂದರೇನು?ಹೈಡ್ರೋಜನ್ ಅಥವಾ ಥರ್ಮೋನ್ಯೂಕ್ಲಿಯರ್ ಶಸ್ತ್ರ ಎನ್ನುವುದು ಪರಮಾಣು ಬಾಂಬ್‌ನ ಹೊಸ ತಲೆಮಾರು.
ಪರಮಾಣು ಬಾಂಬ್ ಗಳಿಗಿಂತಲೂ ಇದು ಅತಿ ಹೆಚ್ಚು ಪ್ರಬಲ. ಪರಮಾಣು ಬಾಂಬ್ ಗಳಲ್ಲಿ ಅಣು ವಿದಳನ ನಡೆದರೆ, ಹೈಡ್ರೋಜನ್ ಬಾಂಬ್‌ಗಳಲ್ಲಿ ಸಮ್ಮಿಳನ ನಡೆಯುತ್ತದೆ.
ಹಿರೋಶಿಮಾ ನಾಗಸಾಕಿ ಮೇಲೆ ಅಮೆರಿಕ ಹಾಕಿದ ಅಣು ಬಾಂಬ್ ಅನ್ನು ಗಣನೆಗೆ ತೆಗೆದುಕೊಂಡರೆ, ಅಂದು 2 ಲಕ್ಷ ಜನ ಮೃತಪಟ್ಟಿದ್ದರು. ಹೈಡ್ರೊಜನ್ ಅದಕ್ಕಿಂತ 1 ಸಾವಿರ ಪಟ್ಟು ಶಕ್ತಿಯುತವಾದದ್ದು. ಹೈಡ್ರೋಜನ್ ಬಾಂಬ್‌ನಿಂದ ಭಾರೀ ಪ್ರಮಾಣದ ಸ್ಫೋಟ, ತೀವ್ರತೆ, ಶಾಖ ಮತ್ತು ವಿಕಿರಣ ಹೊರಸೂಸುವಿಕೆ ಪ್ರಮಾಣ ಎಲ್ಲವೂ ಹೆಚ್ಚು. ಇದುವರೆಗೆ ಯಾವುದೇ ಯುದ್ಧಗಳಲ್ಲೂ ಹೈಡ್ರೋಜನ್ ಬಾಂಬ್ ಪ್ರಯೋಗ ಮಾಡಿಲ್ಲ. ಪರಿಣಿತರು ಹೇಳುವಂತೆ ಹೈಡ್ರೋಜನ್ ಬಾಂಬ್ ಯಾವುದೇ ನಗರವನ್ನು ನಾಮಾವಶೇಷ ಮಾಡಬಲ್ಲದು. ಅಣುಬಾಂಬ್‌ನಿಂದ ಹಾನಿಯಾಗುತ್ತಾದರೂ, ಹೈಡ್ರೋಜನ್ ಬಾಂಬ್‌ಗ
ಹೋಲಿಸಿದರೆ ಕಡಿಮೆ ಎನ್ನುವುದು ಹೇಳಿಕೆ.
Related Articles
1952 ನ.1ರಂದು ಅಮೆರಿಕ ಜಗತ್ತಿನಲ್ಲೇ ಮೊದಲ ಬಾರಿಗೆ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ನಡೆಸಿತ್ತು. ಪೆಸಿಫಿಕ್ ಸಾಗರದ ಆಳದಲ್ಲಿ ಇದರ ಪರೀಕ್ಷೆ ನಡೆದಿತ್ತು. ಇದರ ಸ್ಫೋಟದ ತೀವ್ರತೆ 11 ಮೆಟ್ರಿಕ್ ಟನ್‌ಗಳಷ್ಟಿತ್ತು. ಹಿರೋಶಿಮಾ ನಾಗಸಾಕಿ ಮೇಲೆ ಹಾಕಿದ ಬಾಂಬ್ ತೀವ್ರತೆ 0.015 ಮೆಟ್ರಿಕ್ ಟನ್‌ನಷ್ಟಿತ್ತು. ಅಂದರೆ ಮೊದಲ ಬಾರಿಗೆ ಪ್ರಯೋಗ ಮಾಡಿದ್ದ ಹೈಡ್ರೋಜನ್ ಬಾಂಬ್ 700 ಪಟ್ಟು ಪ್ರಬಲವಾಗಿತ್ತು.
Advertisement
ಯಾರ್ಯಾರ ಬಳಿ ಇದೆ ಹೈಡ್ರೋಜನ್ ಬಾಂಬ್? 1952ರಲ್ಲಿ ಅಮೆರಿಕ ಮೊದಲ ಬಾರಿಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ಬಳಿಕ ರಷ್ಯಾ 1952ರಲ್ಲಿ ಇಂತಹ ಪರೀಕ್ಷೆ ನಡೆಸಿತ್ತು. ಇಂದು ಜಗತ್ತಿನಲ್ಲಿ ಚೀನ, ಫ್ರಾನ್ಸ್ , ಬ್ರಿಟನ್ ಬಳಿ ಅಧಿಕೃತವಾಗಿ, ಭಾರತ, ಪಾಕಿಸ್ಥಾನ, ಉ.ಕೊರಿಯಾ, ನ್ಯಾಟೋ ಸದಸ್ಯ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಇಟಲಿ, ನೆದರ್ಲೆಂಡ್, ಟರ್ಕಿ ಬಳಿ ಜಂಟಿ ಸಂಗ್ರಹದಲ್ಲಿದೆ. ಇಸ್ರೇಲ್ ಬಳಿಯೂ ಹೈಡ್ರೋಜನ್ ಬಾಂಬ್ ತಂತ್ರಜ್ಞಾನ ಇದೆ ಎನ್ನಲಾಗಿದೆ. ತಂತ್ರಜ್ಞಾನ ತುಂಬ ದುಬಾರಿ
ಹೈಡ್ರೋಜನ್ ಬಾಂಬ್ ಅನ್ನು ಕ್ಷಿಪಣಿ ಸಿಡಿತಲೆಗಳಲ್ಲೂ ಅಳವಡಿಸಿಕೊಳ್ಳಬಹುದು. ಆದರೆ ಇದರ ತಂತ್ರಜ್ಞಾನ ತುಂಬ ದುಬಾರಿ. ಇದು ಹೇಗೆಂದರೆ ಶಾಪಿಂಗ್ ಹೋಗಲು ದುಬಾರಿ ರೋಲ್ಸ್‌ರಾಯ್ಸ ಕಾರು ಖರೀದಿಸಿದಂತೆ ! ಹೈಡ್ರೋಜನ್ ಬಾಂಬ್ ಇದ್ದ ಮಾತ್ರಕ್ಕೆ ಇಡೀ ದೇಶ ಸುರಕ್ಷಿತ ಎಂದು ಹೇಳುವಂತಿಲ್ಲ. ಆದರೂ, ಸರಕಾರಗಳು ಇದರ ಮೇಲೆ ಕೋಟ್ಯಂತರ ರೂ.ಗಳನ್ನು ರಾಜಕೀಯ ಕಾರಣಕ್ಕಾಗಿ ಖರ್ಚು ಮಾಡುತ್ತವೆ. ಪೆಸಿಫಿಕ್ ಸಾಗರಕ್ಕೆ ಬಾಂಬ್ ಪ್ರಯೋಗಿಸಿದ್ರೆ ಏನಾಗುತ್ತೆ?
ಒಂದು ವೇಳೆ ಉ.ಕೊರಿಯಾ ಬೆದರಿಕೆ ಹಾಕಿದಂತೆ ಪೆಸಿಫಿಕ್ ಸಾಗರಕ್ಕೇನಾದ್ರೂ ಬಾಂಬ್ ಪ್ರಯೋಗಿಸಿದ್ದೇ ಆದಲ್ಲಿ ಸ್ಫೋಟಕ್ಕೆ ಅಣಬೆ ರೀತಿ ವಾತಾವರಣ ಸೃಷ್ಟಿಯಾಗುತ್ತದೆ. ಅಪಾರ ಪ್ರಮಾಣದಲ್ಲಿ ಜೀವವೈವಿಧ್ಯಕ್ಕೆ ಹಾನಿಯಾಗಬಹುದು. ಪೆಸಿಫಿಕ್ ಸಾಗರದಲ್ಲಿ ಪ್ರಯೋಗಿಸಿದ್ದಲ್ಲಿ ಸುಮಾರು 40 ವರ್ಷ ಪೆಸಿಫಿಕ್ ಸಾಗರದ ವಾತಾವರಣ ಹದಗೆಡಲಿದೆ. ಪರಿಸರ ಹಾನಿಯೊಂದಿಗೆ ಯುದ್ಧಕ್ಕೂ ಕಾರಣವಾಗಬಹುದು. ಇಡೀ ಸಮುದ್ರದಲ್ಲಿ ವಿಕಿರಣ ಹರಡಿ ಹಲವು ದೇಶಗಳು ಸಮಸ್ಯೆ ಎದುರಿಸಬಹುದು. ದೀರ್ಘಾವಧಿಯಲ್ಲಿ ಮಾನವರಿಗೆ, ಜೀವಿಗಳಿಗೂ ಹಾನಿಯಾಗಲಿದೆ. ಇದುವರೆಗೂ ಅಣು ಬಾಂಬ್ ಪರೀಕ್ಷೆಗಳನ್ನು ಭೂಮಿಯ ಆಳದಲ್ಲಿ ಉ.ಕೊರಿಯಾ ನಡೆಸಿದೆ. ಇತ್ತೀಚೆಗೆ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನೂ ಭೂಮಿಯಲ್ಲೇ ನಡೆಸಿತ್ತು. ಈ ವೇಳೆ 48
ಕಿ.ಮೀ. ವಿಸ್ತಾರದಲ್ಲಿ ರಿಕ್ಟರ್ ಮಾಪನದಲ್ಲಿ 5.1ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಆದರೆ ಪೆಸಿಫಿಕ್ ಸಾಗರಕ್ಕೇನಾದರೂ ಅದು ಬಾಂಬ್ ಹಾಕಿದರೆ, ಊಹಿಸಲೂ ಆಗದಷ್ಟು ಹಾನಿಯಾಗಲಿದೆ. ನ್ಯೂಯಾರ್ಕ್ ಮೇಲೆ ಹಾಕಿದ್ರೆ?
ಒಂದು ವೇಳೆ ಉ.ಕೊರಿಯಾ ಹುಚ್ಚಾಟದಲ್ಲಿ ಅಮೆರಿಕದ ನ್ಯೂಯಾರ್ಕ್ ಮೇಲೆ ಹೈಡ್ರೋಜನ್ ಬಾಂಬ್ ಅನ್ನು ಪ್ರಯೋಗ ಮಾಡಿದ್ರೆ ಏನಾಗಬಹುದು ಎಂಬುದಕ್ಕೆ ತಜ್ಞರು ಹೀಗೆ ವಿವರಿಸಿದ್ದಾರೆ. 150 ಕಿಲೋಟನ್ ಭಾರದ ಹೈಡ್ರೋಜನ್ ಬಾಂಬ್ ಅನ್ನು ನ್ಯೂಯಾರ್ಕ್ ಮೇಲೆ ಪ್ರಯೋಗಿಸಿದರೆ, ತತ್‌ಕ್ಷಣ 1.09 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವನಾಶವಾಗಲಿದೆ. 66 ಲಕ್ಷ ಸೆಲ್ಸಿಯಸ್ ಉಷ್ಣತೆ ಸ್ಥಳದಲ್ಲಿ ಕಾಣಿಸಿಕೊಳ್ಳಲಿದ್ದು ಎಲ್ಲವೂ ಕರಟಿ ಹೋಗಲಿದೆ. ತತ್‌ಕ್ಷಣ 3.85 ಲಕ್ಷ ಸಾವು ಸಂಭವಿಸಬಹುದು. 6.32 ಲಕ್ಷ ಮಂದಿ ಗಾಯಾಳುಗಳಾಗಬಹುದು. ಬಾಂಬ್ ಪ್ರಯೋಗವಾದ ಸುಮಾರು 68 ಕಿ.ಮೀ. ದೂರದವರೆಗೆ ಜನರು ತೀವ್ರ
ಸುಟ್ಟಗಾಯಗಳಿಗೆ ಈಡಾಗಬಹುದು. ಸಾವಿರಾರು ಕಿ.ಮೀ.ದೂರದ ವರೆಗೆ ಪರಮಾಣು ವಿಕಿರಣ ಸಮಸ್ಯೆ ತಲೆದೋರಬಹುದು. ಹಲವು ವರ್ಷಗಳ ಕಾಲ ಇದು ಮುಂದುವರಿಯಬಹುದು. ನಿಮಗೆ ಗೊತ್ತೇ ?
1952 ಮೊದಲ ಬಾರಿಗೆ ಹೈಡ್ರೋಜನ್ ಬಾಂಬ್ ಪ್ರಯೋಗ 1000 ಪಟು ಸಾಮಾನ್ಯ ಅಣು ಬಾಂಬ್‌ಗಿಂತ ಶಕ್ತಿಶಾಲಿ 66ಲಕ್ಷ ಡಿಗ್ರಿ ಸೆಲ್ಸಿಯಸ್ ಬಾಂಬ್ ಪ್ರಯೋಗದ ಸ್ಥಳದಲ್ಲಿ ಉಂಟಾಗುವ ಉಷ್ಣತೆ 40 ವರ್ಷ ಪೆಸಿಫಿಕ್ ಮೇಲೆ ಪ್ರಯೋಗಿಸಿದರೆ ಆಗುವ ಪರಿಣಾಮ
*ಈಶ