Advertisement
ಮುಂಬರುವ ಲೋಕಸಭಾ ಚುನವಣೆಗೆ ಈ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಮುಖವಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದರೆ, ತೆಲಂಗಾಣದಲ್ಲಿ ಬಿಆರ್ ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯಿದೆ.
Related Articles
Advertisement
ಛತ್ತೀಸ್ ಗಢ್
90 ಕ್ಷೇತ್ರಗಳ ಛತ್ತೀಸ್ ಗಢ ರಾಜ್ಯದಲ್ಲಿ 2018ರ ನವೆಂಬರ್ 12 ಮತ್ತು 20ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. 68 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದ್ದರೆ, ಆಡಳಿತದಲ್ಲಿದ್ದ ಬಿಜೆಪಿ ಕೇವಲ 15 ಸೀಟು ಪಡೆದು ಮುಖಭಂಗ ಅನುಭವಿಸಿತ್ತು. 15 ವರ್ಷಗಳ ಕಾಲ ವಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ಸರ್ಕಾರ ರಚಿಸಿ, ಭೂಪೇಶ್ ಬಾಘೇಲ್ ಸಿಎಂ ಆಗಿ ನೇಮಕಗೊಂಡಿದ್ದರು.
ಮಧ್ಯ ಪ್ರದೇಶ
230 ಕ್ಷೇತ್ರಗಳ ಮಧ್ಯ ಪ್ರದೇಶ ವಿಧಾನಸಭೆಗೆ 2018ರ ನವೆಂಬರ್ 28ರಂದು ಮತದಾನ ನಡೆದಿತ್ತು. ನಾಲ್ಕನೇ ಬಾರಿಗೆ ಶಿವರಾಜ್ ಸಿಂಗ್ ಚೌಹಾಣ್ ಗೆಲುವಿನ ಪ್ರಯತ್ನದಲ್ಲಿದ್ದರು. 116 ಮ್ಯಾಜಿಕ್ ನಂಬರ್ ನ ಮಧ್ಯಪ್ರದೇಶದಲ್ಲಿ 114 ಸ್ಥಾನ ಗೆದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಮೂಡಿತ್ತು. 2003ರಿಂದ ಅಧಿಕಾರ ಅನುಭವಿಸಿದ್ದ ಬಿಜೆಪಿ 109 ಸ್ಥಾನ ಪಡೆದಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಆದರೆ 2020ರ ಮಾರ್ಚ್ ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಶಾಸಕರ ಗುಂಪು ಬಿಜೆಪಿಗೆ ವಲಸೆ ಬಂದ ಕಾರಣ ಸರ್ಕಾರ ಪತನವಾಗಿತ್ತು. ಹೀಗಾಗಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಿದ್ದರು.
ತೆಲಂಗಾಣ
ಭಾರತದ ಅತ್ಯಂತ ಯುವ ರಾಜ್ಯದ ತೆಲಂಗಾಣದಲ್ಲಿ 2018ರ ಡಿಸೆಂಬರ್ 7ರಂದು ಎರಡನೇ ವಿಧಾನಸಭಾ ಚುನಾವಣೆ ನಡೆದಿತ್ತು. ಕೆ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ (ಈಗ ಬಿಆರ್ ಎಸ್) ಪಕ್ಷವನ್ನು ಸೋಲಿಸಲು ಕಾಂಗ್ರೆಸ್, ತೆಲುಗು ದೇಶಂ, ತೆಲಂಗಾಣ ಜನ ಸಮಿತಿ ಮತ್ತು ಸಿಪಿಐ ಪಕ್ಷಗಳು ಒಂದಾಗಿ ಪ್ರಜಾ ಕುಟಮಿ ಎಂಬ ಒಕ್ಕೂಟ ರಚಿಸಿತ್ತು, ಆದರೆ ಚುನಾವಣೆಯಲ್ಲಿ ಟಿಆರ್ ಎಸ್ (ಬಿಆರ್ ಎಸ್) 88 ಸ್ಥಾನ ಗೆದ್ದು ಅಧಿಕಾರ ಹಿಡಿಯಿತು. ಪ್ರಜಾ ಕುಟಮಿ ಒಕ್ಕೂಟ 21 ಸ್ಥಾನ ಮಾತ್ರ ಪಡೆದಿತ್ತು. (ಇದರಲ್ಲಿ ಕಾಂಗ್ರೆಸ್ 19 ಸ್ಥಾನ ಗೆದ್ದಿತ್ತು) ಓವೈಸಿ ಅವರ ಎಐಎಂಇಎಂ ಪಕ್ಷವು ಎಳು ಸ್ಥಾನ ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿತ್ತು.