Advertisement

ದಲಿತ ವಿರೋಧಿ ಖಂಡ್ರೆ ಜಿಲ್ಲೆಗೆ ನೀಡಿದ್ದೇನು?

03:27 PM Apr 02, 2019 | Team Udayavani |

ಬೀದರ: ಖಂಡ್ರೆ ಕುಟುಂಬ ದಲಿತ ವಿರೋಧಿಯಾಗಿದೆ ಎಂದು ಸಂಸದ ಭಗವಂತ ಖೂಬಾ ಗಂಭೀರವಾಗಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ನಡೆದ ದಲಿತ ನ್ಯಾಯವಾದಿ ತುಕಾರಾಂ ಕುಂದೆ ಹತ್ಯೆ ಪ್ರಕರಣದಲ್ಲಿ ಖಂಡ್ರೆ ಕುಟುಂಬದ ಹೆಸರು ಕೇಳಿ ಬಂದಿತ್ತು. ಭಾಲ್ಕಿಯ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಚನ್ನಬಸವ ಪಟ್ಟದೇವರು ಸ್ಥಾಪಿಸಿದ್ದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಹೈಜಾಕ್‌ ಮಾಡಿ ಆಸ್ತಿ ಕಬಳಿಸಿದ ಆರೋಪ ಕೂಡ ಖಂಡ್ರೆ ಕುಟುಂಬದ ಮೇಲಿದೆ ಎಂದು ಆರೋಪಿಸಿದರು.

Advertisement

ಶ್ರೀಮಂತಿಕೆ ಇದ್ದರೆ ಸಾಲದು: ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಮಗ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಬೇಡ ಎಂದು ಹೇಳುತ್ತಿದ್ದಾರೆ. ಏಕೆಂದರೆ ಎದುರಾಳಿಯಾಗಿರುವ ಬಿಜೆಪಿ ಅಭ್ಯರ್ಥಿ ಜಿ.ಎಸ್‌. ಸಿದ್ದೇಶ ಉತ್ತಮ ವ್ಯಕ್ತಿ ಎಂಬುದು ಅಲ್ಲಿನ ಜನರಿಗೆ ಗೊತ್ತಿದೆ. ಇದಕ್ಕಾಗಿಯೇ ಶಾಮನೂರು ಕುಟುಂಬ ಸ್ಪರ್ಧೆಗೆ ಹಿಂದೇಟು ಹಾಕುತ್ತಿದೆ ಎಂದು ಅವರು, ಚುನಾವಣೆಯಲ್ಲಿ ಶ್ರೀಮಂತಿಕೆ, ಅಧಿಕಾರ ಇದ್ದರೆ ಸಾಲದು. ಬದಲಿಗೆ ಜನರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಉತ್ತಮ ನಡೆ-ನುಡಿಗುಳು ಕೂಡ ಮುಖ್ಯವಾಗಿರುತ್ತವೆ ಎಂದು ಪರೋಕ್ಷವಾಗಿ ಈಶ್ವರ ಖಂಡ್ರೆ ಅವರನ್ನು ಕೆಣಕಿದರು.

ಖಂಡ್ರೆ ಸಾಧನೆ ಏನು?: 60 ವರ್ಷಗಳಿಂದ ರಾಜಕೀಯ ಜೀವನ ನಡೆಸುತ್ತಿರುವ ಖಂಡ್ರೆ ಕುಟುಂಬ ಬೀದರ್‌ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಎಂದು ಸಂಸದ ಭಗವಂತ ಖೂಬಾ ಪ್ರಶ್ನಿಸಿದರು. ರಾಜಕೀಯವಾಗಿ ಪ್ರಬಲವಾಗಿರುವ ಖಂಡ್ರೆ ಕುಟುಂಬ ಜಿಲ್ಲೆಯ ಮೇಲೆ ಹಿಡಿತ ಸಾ ಧಿಸಿದೆ. ಇತರೆ ಕ್ಷೇತ್ರಗಳಲ್ಲಿ ಶಾಸಕರು ಆಯ್ಕೆಗೆ ಮುಖ್ಯ ಕಾರಣಿಕರ್ತರು ಕೂಡ ಹೌದು. ಆದರೆ, ಜಿಲ್ಲೆಗೆ ಹೇಳಿಕೊಳ್ಳುವ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಆರೋಪಿಸಿದರು.

ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರವ ಈಶ್ವರ ಖಂಡ್ರೆ ತಮ್ಮ ಅಧಿಕಾರ ಅವಧಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿಗೆ ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಜೆ.ಎಚ್‌. ಪಟೇಲ ಅವ ಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಅಭಿವೃದ್ಧಿ
ಕಂಡಿದೆ. ಆಡಳಿತ ಸರ್ಕಾರ ಇದ್ದರೂ ಕೂಡ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಉದ್ಘಾಟಿಸಿದ ಜಿಲ್ಲಾ ಕಚೇರಿಗಳ ಸಂಕೀರ್ಣ ಕಾಮಗಾರಿ ಇಂದಿಗೂ ನಿರ್ಮಾಣ ಭಾಗ್ಯ ಕಂಡಿಲ್ಲ. ಜಿಲ್ಲಾ ಧಿಕಾರಿಗಳ ಕಚೇರಿಯನ್ನು ಮಾಮನಕೇರಿ ಹತ್ತಿರ ನಿರ್ಮಾಣಕ್ಕೆ ಸಂಚು ನಡೆದಿತ್ತು. ಆದರೆ, ಅದರ ವಿರುದ್ಧ ಬಿಜೆಪಿ ಹೋರಾಟ ನಡೆಸಿತು ಎಂದು ಸಂಸದರು ಸ್ಮರಿಸಿದರು.

Advertisement

ಬಿಜೆಪಿ ಮಾಡಿದ ಸಾಧನೆ: ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜಿಲ್ಲೆಯ ಜನರಿಗೆ ಉತ್ತಮ ರೀತಿಯಿಂದ ಸ್ಪಂದನೆ ನೀಡಿದ್ದೇನೆ. ಕೇಂದ್ರ ಸರ್ಕಾರದ ಕೆಲ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ. ಜಿಲ್ಲೆಯ ಸಚಿವರು ಕೂಡ ಸ್ಪಂದಿಸದ ಕಾರಣ ಇಂದಿಗೂ, ಬಿಎಸ್‌ಎಫ್‌ ಘಟಕ ಹಾಗೂ ಸಿಪೇಟ್‌ ತರಬೇತಿ ಕೇಂದ್ರಗಳು ಆರಂಭವಾಗಿಲ್ಲ. ರಾಜ್ಯ ಸರ್ಕಾರ ಭೂಮಿ ನೀಡಿದರೆ ಆ ಎರಡು ಯೋಜನೆಗಳು ಪ್ರಾರಂಭಗೊಳ್ಳುತ್ತವೆ ಎಂದರು.

ಲೋಕಸಭಾ ಚುನಾವಣಾ ಉಸ್ತುವಾರಿ ಅಮರನಾಥ ಪಾಟೀಲ, ಜಿಲ್ಲಾಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಡಿ.ಕೆ. ಸಿದ್ದರಾಮ, ಈಶ್ವರ ಸಿಂಗ್‌ ಠಾಕೂರ್‌, ಪದ್ಮಾಕರ್‌ ಪಾಟೀಲ, ಗುರುನಾಥ ಜಾನತಿಕರ್‌, ಬಸವರಾಜ ಆರ್ಯ, ಸೋಮನಾಥ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ನಂದಕಿಶೋರ ವರ್ಮಾ, ಬಸವರಾಜ ಜೋಜಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next