Advertisement

ಐನ್‌ಸ್ಟಿನ್‌ ಕೈಲಿದ್ದ ಕಾಗದಲ್ಲಿ ಏನಿತ್ತು?

10:42 AM Oct 11, 2019 | sudhir |

ವಿಜ್ಞಾನಿಗಳು, ಕ್ರಿಯಾಶೀಲ ವ್ಯಕ್ತಿಗಳು ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ ಎಂಬ ಮಾತಿದೆ. ಐನ್‌ಸ್ಟಿನ್‌ ಅದಕ್ಕೆ ಹೊರತಾಗಿರಲಿಲ್ಲ.

Advertisement

ಆದರೆ ಒಂದು ದಿನ ಆತ ವಿಚಿತ್ರವಾಗಿ ವರ್ತಿಸುತ್ತಿದ್ದ. ಅವನ ಪತ್ನಿ ಎಲ್ಸಾಗೆ ಇದರಿಂದ ಅಚ್ಚರಿಯಾಗುವಷ್ಟರ ಮಟ್ಟಿಗೆ ವಿಜ್ಞಾನಿಯ ಸ್ವಭಾವ ಇತ್ತು. ದಿನವಿಡೀ ಅದೇನೋ ಚಡಪಡಿಕೆಯಿಂದ ತಳಮಳಿಸುತ್ತಿದ್ದ ಐನ್‌ಸ್ಟಿನ್‌ರನ್ನು ಕಂಡು ಪತ್ನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಏನು ವಿಷಯ ಎಂದು ಕೇಳಿದರೂ ಪತಿರಾಯ ಏನನ್ನೂ ಹೇಳುತ್ತಿಲ್ಲ. ಆರೋಗ್ಯದಲ್ಲಿ ಏನಾದರೂ ಏರುಪೇರಾಯಿತೇ ಎಂದು ಕೇಳಿದರೆ ಇಲ್ಲ ಎಂಬ ಉತ್ತರ ಬಂದಿತ್ತು. ಮತ್ತೇನು ತೊಂದರೆ ಎಂದು ಎಲ್ಸಾ ಯೋಚಿಸಿ ಯೋಚಿಸಿ ತಲೆ ಕೆಟ್ಟು ಹೋಗಿತ್ತು. ತಿಂಡಿ ತಿಂದು ಅತ್ತಿತ್ತ ಓಡಾಡಿದ ಐನ್‌ಸ್ಟಿನ್‌ ಪಿಯಾನೋ ಬಳಿ ಕುಳಿತು ಸಂಗೀತ ನುಡಿಸಲು ಶುರುಮಾಡಿದ. ಅರ್ಧ ಗಂಟೆಯ ನಂತರ ಪುಸ್ತಕ ಹಿಡಿದು ತನ್ನ ಕೋಣೆಗೆ ಹೋದರು. ಎರಡು ವಾರ ಅದೇ ಸ್ಥಿತಿಯಲ್ಲಿದ್ದರು ಐನ್‌ಸ್ಟಿನ್‌.

ಎಲ್ಸಾಳಿಗೆ ಹುಚ್ಚು ಹಿಡಿಯುವುದೊಂದು ಬಾಕಿ ಏನಾಗಿದೆಯಪ್ಪ ಎಂದು. ಈ ಗೊಂದಲಗಳಿಗೆಲ್ಲಾ ಕೊನೆ ಹಾಡುವಂತೆ ಎರಡು ವಾರಗಳ ನಂತರ ಕೋಣೆಯಿಂದ ಹೊರಬಂದ ಐನ್‌ಸ್ಟಿನ್‌ ಕಾಗದಗಳನ್ನು ಕೈಲಿ ಹಿಡಿದಿದ್ದರು.

ಅವರ ಮನಸ್ಸು ನಿರಾಳವಾಗಿತ್ತು. ಮುಖದಲ್ಲಿ ಪ್ರಶಾಂತತೆಯಿತ್ತು. ಕೈಲಿ ಕಾಗದ ಕಂಡು ಏನದು ಎಂದು ಎಲ್ಸಾ ಕೇಳಿದಾಗ ಐನ್‌ಸ್ಟಿನ್‌ ಹೇಳಿದ್ದು ಒಂದೇ ಮಾತು “ಥಿಯರಿ ಆಫ್ ರಿಲೇಟಿವಿಟಿ’. ಅಷ್ಟು ಸಾಕಿತ್ತು, ಆಕೆಗೆ ಎಲ್ಲವೂ ಅರ್ಥವಾಗಿತ್ತು. ಜಗದ್ವಿಖ್ಯಾತ ಆವಿಷ್ಕಾರವಾದ “ಥಿಯರಿ ಆಫ್ ರಿಲೇಟಿವಿಟಿ’ ಹುಟ್ಟಿದ್ದರ ಹಿಂದಿನ ಕಥೆಯಿದು!

– ಹವನ

Advertisement
Advertisement

Udayavani is now on Telegram. Click here to join our channel and stay updated with the latest news.

Next