Advertisement

ಯೋಗಕ್ಕೂ ಮುನ್ನ ಯಾವ ಆಹಾರ ಸೇವಿಸಬೇಕು?

10:21 PM Jan 27, 2020 | Sriram |

ಯೋಗವನ್ನು ನಮ್ಮ ಮನಸ್ಸು ಬಂದಂತೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ಕೆಲವೊಂದು ನಿರ್ದಿಷ್ಟ ಕ್ರಮಗಳಿವೆ. ಏಕೆಂದರೆ ಯೋಗದಲ್ಲಿ ನೀವು ದೇಹದ ಚಲನೆಗಿಂತ ಮನಸ್ಸಿನ ಮೇಲೆ ಗಮನ ಹರಿಸಬೇಕಾಗುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ತಂದರೆ ಯೋಗ ಭಂಗಿಗಳಿಗೆ ತಕ್ಕಂತೆ ನಿಮ್ಮ ದೇಹವನ್ನು ಬಾಗಿಸಬಹುದು. ಯೋಗ ಮಾಡುವ ಮುನ್ನ ಹೊಟ್ಟೆ ಹಗುರವಾಗಿರಬೇಕು. ಲಘು ಆಹಾರ ಸೇವನೆ ಒಳ್ಳೆಯದು. ಯೋಗ ಮಾಡುವ ಮುನ್ನ ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Advertisement

ಓಟ್ಸ್‌ , ಬಾದಾಮಿ ಮತ್ತು ಒಣದ್ರಾಕ್ಷಿ
ಯೋಗ ಮಾಡುವ ಮುನ್ನ ನೀರಿನಲ್ಲಿ ನೆನೆಸಿದ 3-4 ಬಾದಾಮಿಯನ್ನು ತಿನ್ನುವುದು ಒಳ್ಳೆಯದು. ಜತೆಗೆ ಹೊಟ್ಟೆ ಹಸಿವು ತಡೆಯಲು ಸ್ವಲ್ಪ ಓಟ್ಸ್‌ ತಿಂದು ಯೋಗ ಮಾಡು ವುದರಿಂದ ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಒಣದ್ರಾಕ್ಷಿಯಲ್ಲಿರುವ ಸಕ್ಕರೆಯ ಅಂಶ ನೀವು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಯೋಗ ಮಾಡುವ ಮುನ್ನ ಸ್ವಲ್ಪ ಒಣದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಂಡರೆ ಒಳ್ಳೆಯದು.

ಯೋಗ ಕ್ಲಾಸ್‌ಗೆ ಹೋಗುವ 15 ನಿಮಿಷಕ್ಕೆ ಮುನ್ನ 1 ಬಾಳೆ ಹಣ್ಣು ತಿಂದು ಹೋದರೆ ಅದು ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಮೊಸರು ಮತ್ತು ಡಾರ್ಕ್‌ ಚಾಕಲೇಟ್‌
ಯೋಗ ಮಾಡುವ ಅರ್ಧ ಗಂಟೆಗೆ ಮುನ್ನ ಬೇಕಾದರೆ ಒಂದು ಕಪ್‌ ಮೊಸರನ್ನು ಸೇವಿಸಬಹುದು. ಹಾಗೇ ನಿಶ್ಶಕ್ತಿ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಡಾರ್ಕ್‌ ಚಾಕಲೇಟ್‌ ಸೇವಿಸಬಹುದಾಗಿದ್ದು, ಇತರ ಸಿಹಿ ಪದಾರ್ಥ ಅಥವಾ ಚಾಕಲೇಟ್‌ಗೆ ಹೋಲಿಸಿದ್ದರೆ ಡಾರ್ಕ್‌ ಚಾಕಲೇಟ್‌ ಉತ್ತಮ ಆಯ್ಕೆ.

(ಸೂಚನೆ: ಈ ಆಹಾರಗಳನ್ನು ಯೋಗ ಕ್ಲಾಸ್‌ಗೆ ಹೋಗುವ ಅರ್ಧ ಗಂಟೆ ಮೊದಲು ಸೇವಿಸಿ)

Advertisement
Advertisement

Udayavani is now on Telegram. Click here to join our channel and stay updated with the latest news.

Next