Advertisement
ಪೈಂಟ್ ಸುರಕ್ಷೆಗೆ ಆದ್ಯತೆಕಾರು ತೊಳೆಯುವ ಸಂದರ್ಭದಲ್ಲಿ ಸೋಪು ನೀರು ಬಳಸಿರಿ ಅಥವಾ 200 ಎಂ.ಎಲ್‌ನಷ್ಟು ಡೀಸೆಲ್ ಅನ್ನು ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಾರನ್ನು ತೊಳೆಯಿರಿ. ಬಾಡಿ ಮೇಲಿಂದ ಸಂಪೂರ್ಣ ಕೆಸರು ಹೋದರೆ, ಪೈಂಟ್ ಬಣ್ಣ ಕುಂದುವುದಿಲ್ಲ. ಹಾಗೆಯೇ ಟಯರ್‌ನ ಮಡ್‌ಗಾರ್ಡ್ ಭಾಗದಲ್ಲಿ ಪೈಂಟ್ ಬಣ್ಣ ಮಾಸುತ್ತಿದ್ದರೆ, ಆ ಭಾಗದಲ್ಲಿ ನೀರು, ಡೀಸೆಲ್‌ನಿಂದ ತೊಳೆಯಿರಿ. ಬಳಿಕ ರಬ್ಬಿಂಗ್ ಕಾಂಪೌಂಡ್ ಎಂಬ ವಸ್ತು ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಚೆನ್ನಾಗಿ ಪೈಂಟ್ ಮೇಲೆ ಹತ್ತಿ ಬಟ್ಟೆಯಿಂದ ಒರೆಸಿರಿ. ಆಗ ಪೈಂಟ್ ಮೊದಲಿನಂತೆಯೇ ಹೊಳೆಯುತ್ತದೆ.
ಕಾರಿನ ಅಡಿ ಭಾಗಕ್ಕೆ ತುಕ್ಕು ಬಹುಬೇಗನೆ ಹಿಡಿಯುತ್ತದೆ. ಇದನ್ನು ತಪ್ಪಿಸಲು ತುಕ್ಕು ನಿರೋಧಕವನ್ನು ಸ್ಪ್ರೆà ಮಾಡಬೇಕು. ಕಾರನ್ನು ಚೆನ್ನಾಗಿ ತೊಳೆದು, ಒಣಗಿಸಿದ ಬಳಿಕ ಇದನ್ನು ಸ್ಪ್ರೆà ಮಾಡಲಾಗುತ್ತದೆ. ಕಾರ್‌ಕೇರ್‌ಗಳಲ್ಲಿ, ಷೋರೂಂಗಳಲ್ಲಿ ಪರಿಣತರು ಮಾಡಿಕೊಡುತ್ತಾರೆ. ತುಕ್ಕು ನಿರೋಧಕ ಕಪ್ಪಾದ ಪೈಂಟ್‌ನಂತಿದ್ದು, ಇದು ಸುಮಾರು 5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಇದಕ್ಕೆ 5 ಸಾವಿರ ರೂ. ವರೆಗೆ ವೆಚ್ಚ ತಗಲುತ್ತದೆ. ಕೆಸರು ನೀರಲ್ಲಿ ಓಡಿಸಬೇಡಿ
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಆದರೆ ಅತಿಯಾದ ಕೆಸರು, ನೀರು ನಿಂತಲ್ಲಿ ಚಾಲನೆ ಮಾಡುವುದನ್ನು ತಪ್ಪಿಸಿ ಅಥವಾ ಕನಿಷ್ಠ ಪಕ್ಷ ವೇಗದ ಚಾಲನೆ ಮಾಡಬೇಡಿ. ನೀರು ಎಂಜಿನ್ ಬೇ ಒಳಗೆ ಹಾರುವ ಸಂಭವವಿರುತ್ತದೆ. ಕೆಲವು ಕಡೆ ನೀರು/ಕೆಸರು ನಿಂತು ತುಕ್ಕು ಹಿಡಿಯುವ ಸಂದರ್ಭವೂ ಇರುತ್ತದೆ. ಮಳೆಗಾಲದ ಮಧ್ಯೆ ಮತ್ತು ಮಳೆಗಾಲದ ಕೊನೆಯಲ್ಲಿ 2 ಬಾರಿ ವಾಹನವನ್ನು ಡೀಸೆಲ್ ಸ್ಪ್ರೆà ಮಾಡಿ ಅಂಡರ್ ಬಾಡಿ ವಾಷ್ ಮಾಡಿಸಿದರೆ ಆದಷ್ಟೂ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.
Related Articles
ಕಾರನ್ನು ನಿಯಮಿತವಾಗಿ ತೊಳೆಯಿರಿ. ಮಳೆಗಾಲದಲ್ಲಿ ತೊಳೆದರೆ ಹೆಚ್ಚಿನ ಪ್ರಯೋಜವಾಗದಿದ್ದರೂ, ಕಾರಿನ ಬಾಡಿ ಮೇಲೆ ಇರುವ ಕೆಸರನ್ನಾದರೂ ತುಸು ನೀರು ಹಾಕಿ ತೆಗೆಯಿರಿ. ದೀರ್ಘಾವಧಿ ಕೆಸರು ಬಾಡಿ ಮೇಲೆ ಅಥವಾ ಟಯರ್‌ನ ರಿಮ್ ಮತ್ತು ಎಂಜಿನ್ ಬದಿಯಲ್ಲಿ ನಿಲ್ಲಲು ಬಿಡಬೇಡಿ. ಒಂದು ವೇಳೆ ಕೆಸರನ್ನು ಹಾಗೇ ಬಿಟ್ಟಿರಾದರೆ, ಬಹುಬೇಗನೆ ತುಕ್ಕು ಹಿಡಿಯುತ್ತದೆ.
Advertisement
- ಈಶ