Advertisement
ಆನಂತರದಲ್ಲಿ ಸುಮ್ಮನೇ ಇರಲು ಸಾಧ್ಯವಾಗುವುದೇ ಇಲ್ಲ. ಹೊಸ ಬ್ಯುಸಿನೆಸ್ ಆರಂಭಿಸಲು ಮನಸ್ಸು ಒಳಗೊಳಗೇ ಸಜ್ಜಾಗುತ್ತಿರುತ್ತದೆ. ಕಣ್ತೆರದರೂ, ಕಣ್ಮುಚ್ಚಿದರೂ ಗೆಲುವಿನ ಕನಸೇ. ಹೋಟೆಲ್, ಪ್ರಾವಿಷನ್ ಸ್ಟೋರ್, ಪುಸ್ತಕದ ಅಂಗಡಿ, ಫೂಟ್ ಸ್ಟಾಲ್, ಜೆರಾಕ್ಸ್ ಶಾಪ್… ಹೀಗೆ ಯಾವುದೇ ಹೊಸದೊಂದು ಉದ್ಯಮ ಆರಂಭಿಸಲು ಹೊರಡುತ್ತಾರಲ್ಲ, ಅವರಿಗೆಲ್ಲ ಇರುವ ಕೆಟ್ಟಗುಣ ಅಂದರೆ- ಓವರ್ ಕಾನಿ³ಡೆನ್ಸ್. ಅಂದರೆ, ಈ ಪ್ರಯತ್ನದಲ್ಲಿ ಗೆದ್ದೇಗೆಲೆವೆ ಎಂಬ ಅತಿಯಾದ ಆತ್ಮವಿಶ್ವಾಸ. ನಮ್ಮ ಸುತ್ತಮುತ್ತಲೂ ಪ್ರತಿಸ್ಪರ್ಧಿಗಳಿದ್ದಾರೆ. ಅವರೊಂದಿಗೆ ಸೆಣಸಾಡುತ್ತಲೇ ನಾವು ಗೆಲ್ಲಲು ಪ್ರಯತ್ನಿಸಬೇಕು. ಅಕಸ್ಮಾತ್ ಈ ಪ್ರಯತ್ನದಲ್ಲಿ ನಾವು ಸೋತು ಹೋದರೆ? ಎಂದು ಹೆಚ್ಚಿನವರು ಯೋಚಿಸುವುದೇ ಇಲ್ಲ.ಅವರು ಗೆದ್ದಿದ್ದಾರೆ ಅಲ್ವ? ಅವರೇ ಗೆದ್ದ ಮೇಲೆ ನಾವೂ ಗೆಲ್ತಿವಿ ಎಂದಷ್ಟೇ ಲೆಕ್ಕಹಾಕುತ್ತಾರೆ.
ಬ್ಯುಸಿನೆಸ್ ಆರಂಭಿಸುವ ಪ್ರತಿಯೊಬ್ಬರೂ ತಿಳಿದಿರಬೇಕಾ ಸಂಗತಿಯೊಂದಿದೆ. ಯಾವತ್ತೂ ಪ್ರತಿ ಸ್ಪರ್ಧಿಯನ್ನು ಅನುಕರಿಸಲು ಹೋಗಬಾರದು. ಉದಾಹರಣೆಗೆ- ಈಗಾಗಲೇ ಒಂದು ಹೋಟೆಲ್ ಆರಂಭವಾಗಿರುವ ಸ್ಥಳದಲ್ಲಿಯೇ ಹೊಸದೊಂದು ಹೋಟೆಲ್ ಆರಂಭಿಸಿದರೆ, ಎದುರು ಹೋಟೆಲ್‌ನಲ್ಲಿ ಇದೆಯಲ್ಲ; ಅಷ್ಟೇ ಬೆಲೆ ಇದ್ದರೆ, ಹೊಸ ಹೋಟೆಲಿಗೆ ಖಂಡಿತ ಜನ ಬರುವುದಿಲ್ಲ. ಜನ ಬರಬೇಕು ಅಂದರೆ, ಕಡಿಮೆ ಬೆಲೆ ಇಡಬೇಕು. ಹಾಗೆಯೇ ಈ ಮೊದಲೇ ಪರಿಚಯವಾಗಿರುವ ಹೋಟೆಲ್‌ಗಿಂತ ಹೆಚ್ಚಿನ ಟೇಸ್ಟ್ ಎಲ್ಲಾ ತಿಂಡಿಗೂ ಇರುವಂತೆ ನೋಡಿಕೊಳ್ಳಬೇಕು. ಇದೇ ಮಾತನ್ನು ಮ್ಯಾಗಜೀನ್ ಆರಂಭಿಸುವ/ಪ್ರಾವಿಷನ್ ಸ್ಟೋರ್ ತೆರೆಯುವ ಉತ್ಸಾಹಿಗಳಿಗೂ ಹೇಳಬಹುದು. ನೆನಪಿಡಿ; ಪಕ್ಕದ ಅಂಗಡಿಗಿಂತ ಎರಡು ರುಪಾಯಿ ಕಡಿಮೆ ಬೆಲೆಗೆ ಎಲ್ಲ ವಸ್ತುಗಳನ್ನೂ ಮಾರಿದರೆ, ಅದೊಂದು ಕಾರಣಕ್ಕೇ ಹೊಸ ಬ್ಯುಸಿನೆಸ್‌ಗೆ ಮಾರ್ಕೆಟ್ ಮತ್ತು ಪ್ರಚಾರ ಸಿಕ್ಕಿಬಿಡುತ್ತದೆ. ಅದ್ದೂರಿಯಿಂದ ದೂರವಿರಿ
ಸಾವಿರ ಮೈಲಿಯ ಪ್ರಯಾಣವೂ ಒಂದು ಪುಟ್ಟ ಹೆಜ್ಜೆಯಿಂದ ಶುರುವಾಗುತ್ತದೆ ಎಂಬು ಮಾತಿದೆಯಲ್ಲವೇ? ಈ ಬ್ಯುಸಿನೆಸ್ ಎಂಬುದೂ ಹಾಗೆಯೇ, ಇಲ್ಲಿ, ಒಂದೊಂದೇ ರುಪಾಯಿ ಜೊತೆಯಾಗುತ್ತಾ ಹೋಗಬೇಕು. ಪೈಸೆಗೆ ಪೈಸೆ ಜೊತೆಯಾಗುತ್ತಾ ಹೋಗಬೇಕೇವಿನಃ ಲೆಕ್ಕಕ್ಕೇ ಸಿಗದ ರೀತಿಯಲ್ಲಿ ಹಣ ಪೋಲಾಗಬಾರದು.
Related Articles
ಹೀಗೆ ಎಂದು ವಿಚಾರಿಸಿದರೆ, ಲಾಸ್ ಆಯ್ತಂತೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಏನಾಗಿರುತ್ತದೆ ಅಂದರೆ, ಜನರನ್ನು ಆಕರ್ಷಿಸಬೇಕು, ಅದಕ್ಕಿಂತ ಹೆಚ್ಚಾಗಿ, ಎದುರಾಳಿಗಿಂತ ಜೋರಾಗಿ ಸದ್ದು ಮಾಡಬೇಕು ಎಂಬ ಹಪಾಹಪಿಯಲ್ಲಿ ಐವತ್ತಕ್ಕೂ ಹೆಚ್ಚು ಲೈಟ್, 20ಕ್ಕೂ ಹೆಚ್ಚು ಫ್ಯಾನ್ ಬಳಕೆ ಆಗಿರುತ್ತದೆ. ಅಂಗಡಿ ವ್ಯಾಪಾರದಿಂದ ದೊರೆತ ಲಾಭ, ಈ ಅದ್ದೂರಿತನಕ್ಕೇ ಖರ್ಚಾಗಿ ಹೋಗಿರುತ್ತದೆ.
ಆಸೆ ಇರಲಿ, ದುರಾಸೆ ಬೇಡ ಮೊದಲೇ ಹೇಳಿದಂತೆ, ಒಂದಷ್ಟು ಲಾಭ ಮಾಡಿಕೊಳ್ಳಬೇಕು ಎಂಬ ಆಸೆಯಿಂದಲೇ ಎಲ್ಲರೂ ಬ್ಯುಸಿನೆಸ್‌ಗೆ ಮುಂದಾಗುತ್ತಾರೆ. ಯಾವುದೇ ವ್ಯವಹಾರ ನಿಮ್ಮ ಕೈ ಹಿಡಿಯುತ್ತಿದೆ ಅನ್ನಿಸಿದರೆ ಅದರಿಂದ ಕನಿಷ್ಠ ಲಾಭ ಮಾಡಿಕೊಳ್ಳುವತ್ತ ಮಾತ್ರ ಗಮನವಿರಲಿ. ಯಾವುದೋ ಒಂದು ಉತ್ಪನ್ನ ನಿಮ್ಮಲ್ಲಿ ಮಾತ್ರ ಸಿಗುತ್ತದೆ ಎಂದಾದರೆ, ಅದರಿಂದ ಗರಿಷ್ಠ ಲಾಭ ಮಾಡಿಕೊಳ್ಳುವ ದುಬುìದ್ಧಿ ಬೇಡ. ವ್ಯಾಪಾರ ಮಾಡುವಾಗ ಖಂಡಿತ ಆಸೆ ಇರಲಿ, ದುರಾಸೆಗೆ ಯಾವತ್ತು ಬಲಿಯಾಗಬೇಡಿ. ಸಾಲ ಕೊಟ್ರೆ ಸೋಲು ಗ್ಯಾರಂಟಿ ವ್ಯಾಪಾರ ಅಂದ ಮೇಲೆ ಸಾಲ ಕೇಳುವವರು ಬಂದೇ ಬರುತ್ತಾರೆ. ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂದು ಬೋರ್ಡ್ ಬರೆಸಿ ಹಾಕಿದರೂ, ಸಾಲ ಕೇಳುವವರ ಸಂಖ್ಯೆ ಕಡಿಮೆ ಆಗುವುದಿಲ್ಲ. ಕೆಲವೊಮ್ಮೆ, ತೀರಾ ಪರಿಚಯದವರೇ, ಸಂಬಂಧಿಗಳೇ ಸಾಲ ಕೇಳುತ್ತಾರೆ.
Advertisement
ಆಗೆಲ್ಲಾ ನಿಷ್ಠುರವಾಗಿ “ನೋ’ ಅಂದರೆ ಮಾತ್ರ ಬ್ಯುಸಿನೆಸ್ ನಲ್ಲಿ ಸಕ್ಸಸ್ ಆಗಬಹುದು. ಅದರ ಬದಲಾಗಿ, ಪರಿಚಯದವರಿಗೆ “ನೋ’ ಅನ್ನುವುದು ಹೇಗೆ ಎಂದೆಲ್ಲ ಯೋಚಿಸಿ, ಸಾಲ ಕೊಟ್ಟು ಬಿಟ್ಟರೆ, ಖಂಡಿತ ಅದರಿಂದ ಲಾಸ್ ಆಗುವುದು ಗ್ಯಾರಂಟಿ.
ತರಂಗಿಣಿ