ಮುಂಬೈ: ವ್ಯಕ್ತಿಯ ಹೆಸರು, ಸಾಮರ್ಥ್ಯ ಮತ್ತು ಗೌರವ ಏನೇ ಇರಲಿ, ಪ್ರತಿಯೊಬ್ಬರು ಒಂದೇ ಇದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ (ಆರ್ ಎಸ್ ಎಸ್)ದ ಮೋಹನ್ ಭಾಗವತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಟಿ20 ಮ್ಯಾಚ್; ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಚಚ್ಚಿದ ಇಫ್ತಿಕಾರ್ ಅಹಮದ್; ವಿಡಿಯೋ ನೋಡಿ
ಅವರು ಭಾನುವಾರ ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಆಯೋಜಿಸಿದ್ದ ಸಂತ ಶಿರೋಮಣಿ ರೋಹಿದಾಸ್ ಅವರ 647ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ದೇವರು ಎಂಬುದು ಸತ್ಯ. ಯಾವುದೇ ಹೆಸರು, ಸಾಮರ್ಥ್ಯ, ಗೌರವ ಹೊಂದಿರಲಿ. ಎಲ್ಲರೂ ಸಮಾನರು. ಇದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಕೆಲವು ಪಂಡಿತರು ಶಾಸ್ತ್ರದ ಆಧಾರದ ಮೇಲೆ ಹೇಳುವುದು ಸುಳ್ಳು” ಎಂದು ಭಾಗವತ್ ಹೇಳಿದರು.
ಜಾತಿಯೇ ಮೇಲು ಎಂಬ ಭ್ರಮೆಯಿಂದ ನಾವು ದಾರಿತಪ್ಪಿದ್ದೇವೆ. ಆ ಭ್ರಮೆಯಿಂದ ನಾವು ಹೊರಬರಬೇಕಾಗಿದೆ. ಆತ್ಮಸಾಕ್ಷಿ ಮತ್ತು ಪ್ರಜ್ಞೆ ಈ ದೇಶದಲ್ಲಿ ಒಂದೇಯಾಗಿದ್ದು, ಕೇವಲ ಅಭಿಪ್ರಾಯಗಳು ಮಾತ್ರ ಭಿನ್ನವಾಗಿದೆ ಎಂದು ಭಾಗವತ್ ತಿಳಿಸಿದ್ದಾರೆ.
ಸಂತ ರೋಹಿದಾಸ್ ಅವರು ತುಳಸಿದಾಸ್, ಕಬೀರ್ ಮತ್ತು ಸೂರದಾಸ್ ಅವರಿಗಿಂತ ಮೇರು ವ್ಯಕ್ತಿತ್ವ ಹೊಂದಿದ್ದು, ಈ ಕಾರಣದಿಂದಾಗಿಯೇ ಅವರನ್ನು ಸಂತ ಶಿರೋಮಣಿ ಎಂದು ಪರಿಗಣಿಸಲಾಗಿದೆ ಎಂದರು.
ರೋಹಿದಾಸ್ ಅವರು ಶಾಸ್ತ್ರದಲ್ಲಿ ಬ್ರಾಹ್ಮಣರನ್ನು ಜಯಿಸಲು ಸಾಧ್ಯವಾಗದಿದ್ದರೂ ಕೂಡಾ ಅವರು ಹಲವರ ಹೃದಯವನ್ನು ತಲುಪಿದ್ದರು. ಅಷ್ಟೇ ಅಲ್ಲ ದೇವರನ್ನು ನಂಬುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದು ಭಾಗವತ್ ಹೇಳಿದರು.