Advertisement
ಫ್ಯಾಷನ್ ಲೋಕದಲ್ಲಿ ಕೂದಲಿಗೆ ಹೆಚ್ಚು ಮಹತ್ವ. ಕೂದಲಿನ ಸೌಂದರ್ಯಕ್ಕಾಗಿ ಇಂದು ಸಾಕಷ್ಟು ಮಹತ್ವ ಕೊಡುತ್ತಾರೆ. ಹಿಂದಿನ ಕಾಲದಲ್ಲಿ ಉದ್ದ ಕೂದಲಿದ್ದರೆ ಸಾಕಿತ್ತು. ಆದರೆ ಈಗ ಹೇರ್‌ಸ್ಟೈಲ್‌ನಲ್ಲಿ ದಿನಕ್ಕೊಂದು ಹೊಸ ಫ್ಯಾಶನ್‌ಗಳು ಬರುತ್ತಿವೆ.
ಇತ್ತೀಷೆಗೆ ಸಣ್ಣ ಕೂದಲು ಹೆಚ್ಚು ಟ್ರೆಂಡ್ ಆಗುತ್ತಿದೆ. ಸಣ್ಣದಾಗಿ ಕತ್ತರಿಸಿದ ಕೂದಲು ಹೆಚ್ಚು ಕಾನಸಿಗುತ್ತದೆ. ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ ಹೆಚ್ಚಾಗಿ ಕೂದಲು ಸಣ್ಣದಾಗಿ ಕತ್ತರಿಸಿ ಫ್ರೀ ಬಿಡುವುದು ಹೆಚ್ಚಾಗುತ್ತಿದ್ದಂತೆ ಜನಸಾಮಾನ್ಯರಲ್ಲೂ ಟ್ರೆಂಡ್ ಆಗುತ್ತಿದೆ. ಆಧರೆ ನಿಮ್ಮ ಮುಖಕ್ಕೊಪ್ಪುವಂತಹ ಹೇರ್‌ಸ್ಟೈಲ್‌ಗಳನ್ನು ಫಾಲೋ ಮಾಡುವುದು ಉತ್ತಮ. ಗಮನಿಸಿ
ಹೆರ್‌ಸ್ಟೈಲ್ ಆಯ್ಕೆ ಮಾಡುವ ಮೊದಲುಹೇರ್‌ಸ್ಟೈಲ್ ಫಾಲೋ ಮಾಡುವ ಮೊದಲು ನಮ್ಮ ಮುಖಕ್ಕೆ ಸರಿಯಾಗುವ ಹೇರ್‌ಸ್ಟೈಲ್ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅನಂತರ ಅದನ್ನು ಆಯ್ದುಕೊಳ್ಳಬೇಕು.
Related Articles
Advertisement
ಒಂದೇ ಹೆರ್‌ಸ್ಟೈಲ್‌ಗಳು ಎಲ್ಲ ಸಂದರ್ಭಗಳಿಗೆ ಸೂಕ್ತವಾಗುವುದಿಲ್ಲ. ಹಬ್ಬದ ಸಮಯಗಳಲ್ಲಿ, ಮದುವೆ ಸಮಾರಂಭಗಳಿಗೆ ಕೂದಲು ನೇಯ್ದು ಕಟ್ಟುವುದರಿಂದ ಸಾಂಪ್ರಾದಾಯಿಕ ನೋಟ ನೀಡುತ್ತದೆ. ಕೂದಲು ನೇಯ್ದು ಕಟ್ಟುವುದರಿಂದ ಹೆಚ್ಚು ಸಾಂಪ್ರದಾಯಿಕ ನೋಟ ಸಿಗುತ್ತದೆ.
ಕಾಲೇಜು, ಪಾರ್ಟಿಗಳಿಗೆ ಹೋಗುವಾಗ ಕೂದಲನ್ನು ಧರಿಸಿದ ಬಟ್ಟೆಗೆ ಹೊಂದಿಕೊಳ್ಳುವಂತೆ ಸ್ಟೈಲ್ ಮಾಡಬಹುದು. ಮಾಡರ್ನ್ ಡ್ರೆಸ್‌ಗಳಿಗೆ ಕೂದಲು ಫ್ರೀ ಬಿಟ್ಟರೆ ಹೆಚ್ಚು ಸೂಕ್ತವಾಗುತ್ತದೆ.
ಉಡುಪಿಗೆ ತಕ್ಕಂತೆ ಹೆರ್ಸ್ಟೈಲ್ಯಾವ ಉಡುಪು ಧರಿಸುತ್ತೇವೊ ಅದರ ಆಧಾರದ ಮೇಲೆ ಹೆರ್‌ಸ್ಟೈಲ್ ಆಯ್ದುಕೊಳ್ಳುವುದು ಉತ್ತಮ. ರಂಜಿನಿ ಮಿತ್ತಡ್ಕ