Advertisement

ರಾಜ್ಯದಲ್ಲಿನ ಮಾಫಿಯಾ ಬಗ್ಗೆ ಮೋದಿ ಹೇಳಿದ್ದೇನು; ಸಿಎಂ ಸಿದ್ದು ಸವಾಲು

04:43 PM May 01, 2018 | Sharanya Alva |

ಉಡುಪಿ: ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇವತ್ತು ಸಾಮಾನ್ಯ ಜನ ಸುರಕ್ಷಿತವಾಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹವರಿಗೆ ಅಧಿಕಾರದಿಂದ ಮುಕ್ತಿ ಸಿಗಬೇಕೋ ಬೇಡವೋ ಎಂದು ಪ್ರಧಾನಿ ನರೇಂದ್ರ ಮೋದಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಕರ್ನಾಟಕದಲ್ಲಿ ಅಪರಾಧ ಹೆಚ್ಚಳವಾಗಿಲ್ಲ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಹೇಳಿಕೆಗೆ ಬಹಿರಂಗ ಸವಾಲು ಹಾಕಿದ್ದಾರೆ.

Advertisement

ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಕರ್ನಾಟಕದಲ್ಲಿ ಉಡುಪಿಗೆ ಎದುರಾಳಿ ಯಾರೂ ಇಲ್ಲ. 10ರ ಪರೀಕ್ಷೆ ಇರಲಿ, 12ರ ಪರೀಕ್ಷೆ ಇರಲಿ ಅಲ್ಲಿ ಉಡುಪಿಯದ್ದೇ ಮಾತು ಎಂದರು.

ಕಾನೂನನ್ನು ಉಲ್ಲಂಘಿಸುವ ಸರ್ಕಾರ. ಮರಳು ಮಾಫಿಯಾದವರನ್ನು ಸಲಹುವ ಸರ್ಕಾರ, ನಿಮ್ಮ ಮರಳನ್ನು ಬಿಡದವರು, ನಿಮ್ಮನ್ನು ಬಿಡುತ್ತಾರಾ? ಇಂಥಾ ಲೂಟಿ ಸರ್ಕಾರ ಹೋಗಬೇಕ್ವೋ, ಬೇಡವೋ, ಹೀಗಾಗಿ ಈಗ ಕಾಂಗ್ರೆಸ್ ಮುಕ್ತ ಮಾಡೋದು ಕರ್ನಾಟಕದ ಸರದಿ ಎಂದು ಕರೆ ನೀಡಿದರು.

16 ವರ್ಷಗಳ ಬಳಿಕ ಕಡೂರು-ಚಿಕ್ಕಮಗಳೂರು ರೈಲ್ವೆ ಹಳಿ ಕೆಲಸ ಅರ್ಧ ಮುಗಿದಿತ್ತು. 40 ವರ್ಷಗಳಲ್ಲಿ ಎಷ್ಟು ಸರ್ಕಾರ, ಎಷ್ಟೊಂದು ಮುಖ್ಯಮಂತ್ರಿಗಳು ಬಂದು ಹೋದ್ರು. ಅಭಿವೃದ್ಧಿ ಕೆಲಸ ಯಾಕೆ ಆಗಿಲ್ಲ. ಅಭಿವೃದ್ಧಿಯನ್ನು ತಡೆಯುವುದೇ ಕಾಂಗ್ರೆಸ್ ಕೆಲಸ ಎಂದು ಕಿಡಿಕಾರಿದರು.

ದೇವೇಗೌಡರನ್ನು ಅವಮಾನಿಸಿದವರು ರಾಜ್ಯಕ್ಕೆ ಮಾರಕ. ಈಗ್ಲೇ ನೀವು ಹೀಗೆ ಮಾಡ್ತೀರಾ, ಮುಂದೆ ಏನೆಲ್ಲಾ ಮಾಡಬಹುದು. ಇಂಥವರು ಕರ್ನಾಟಕಕ್ಕೆ ಮಾರಕ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

Advertisement

ಬ್ಲೂ ರೆವ್ಯೂಲೂಶನ್ ಮೂಲಕ ಇಲ್ಲೇ ಉದ್ಯೋಗ ಸೃಷ್ಟಿ ಕೊಡಲು ಸಾಧ್ಯವಿಲ್ಲವೇ?  ಇಷ್ಟೊಂದು ವಿದ್ಯಾಭ್ಯಾಸ ಮುಗಿಸಿ ತಂದೆ ತಾಯಿಯನ್ನು ಬಿಟ್ಟು ಬೆಂಗಳೂರಿಗೆ ಹೋಗಬೇಕಾ? ಎಂದು ಮೋದಿ ಪ್ರಶ್ನಿಸಿದರು.

ಪ್ರಧಾನಿ ಮೋದಿಗೆ ಸಿದ್ದು ಸವಾಲ್:

ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿಲ್ಲ. ರಾಜಕೀಯ ಲಾಭಕ್ಕಾಗಿ ಅಪರಾಧ ಕೃತ್ಯಗಳ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ರೆಡ್ಡಿ ಸಹೋದರರ ಮೇಲಿನ ಕೇಸ್ ಕ್ಲೋಸ್ ಮಾಡಿದ್ದೀರಿ. 2+1 ಸೂತ್ರಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಟಾಂಗ್ ನೀಡಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿಲ್ಲ. ನಾನು ಪ್ರಧಾನಿ ಮೋದಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಹೀಗಾಗಿ ಒಂದೇ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಫಾರ್ಮುಲಾ ಅಂದರೆ ಭ್ರಷ್ಟಚಾರ ಎಂದು ಅರ್ಥ.

Advertisement

Udayavani is now on Telegram. Click here to join our channel and stay updated with the latest news.

Next