ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಸದ್ಯ ಸ್ವಲ್ಪ ಸಡಿಲಿಕೆ ಮಾಡಿರುವ ಕಾರಣ ಹೊರರಾಜ್ಯದ, ಹೊರ ದೇಶಗಳಲ್ಲಿರುವ ಕನ್ನಡಿಗರಿಗೆ ಇಲ್ಲಿಗೆ ಬರಲು ಅವಕಾಶ ನೀಡಲಾಗುತ್ತಿದೆ. ಕರ್ನಾಟಕದ ಹೊರಗಿನಿಂದ ಇವರು ಬಂದಾಗ ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎನ್ನುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚರ್ಚೆ ನಡೆಸಿದರು
ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಿ ಎಸ್ ವೈ ಹೊರನಾಡ ಕನ್ನಡಿಗರ ಲಾಕ್ ಡೌನ್ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಈ ಕೆಳಗಿನಂತಿದೆ.
1.ಹೊರ ರಾಜ್ಯಾದಿಂದ ಬರುವ ಕನ್ನಡಿಗರು ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು.
Related Articles
2.ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಬೇಕು.
3.ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ರಾಜ್ಯದಿಂದ ಅನಿರ್ವಾಯವಾಗಿ ಹೊರ ಹೋಗಿ ಸಿಕ್ಕಿಹಾಕಿ ಕೊಂಡಿರುವವರಾಗಿರಬೇಕು .
4.ಎಲ್ಲಿಗೆ ಬರುತ್ತೇವೆ ಮತ್ತು ಎಂದು ಬರುತ್ತೇವೆ ಎನ್ನುವುದನ್ನು ರಿಜಿಸ್ಟರ್ ಮಾಡಬೇಕು.
5.ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಕರೆಸಿಕೊಳ್ಳಲಾಗುವುದು.
6. ಬಂದ ತಕ್ಷಣ ಯಾರು ಅವರ ಊರಿಗೆ ಹೋಗುವಂತಿಲ್ಲ. ಬಂದ ಎಲ್ಲರೂ 14 ದಿನ ಕ್ವಾರಂಟೈನ್ ಆಗಲೇಬೇಕು. ಕ್ವಾರಂಟೈನ್ ಗೆ ಸಿದ್ದವಿದ್ದವರು ಮಾತ್ರ ನೊಂದಣಿ ಮಾಡಿಕೊಳ್ಳಬೇಕು.
7.ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ.
8.ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಇಲ್ಲಿಯೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲೇಬೇಕು.
9. ಇನ್ನು ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು.
10. ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು.