Advertisement
ಜು.3ರಂದು ಎನ್‌ಐಎ ಜುಲ್ಫಿಕರ್ ಅಲಿ ಸೇರಿ ನಾಲ್ವರನ್ನು ಬಂಧಿಸಿತ್ತು. ಇದಾದ ಬಳಿಕ ಐಸಿಸ್‌ನ ಎಸ್‌ಯುಎಫ್ಎ ಎಂಬ ಘಟಕದ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಆರೋಪದ ಮೇರೆಗೆ ಜುಲೈ 18ರಂದು ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಯೂನಸ್ ಎಂಬವರನ್ನು ಪುಣೆ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ಈ ಬೆನ್ನಲ್ಲೇ ಸಿನಾಮ್ ನಜರುದ್ದೀನ್ ಖಾಜಿ ಎಂಬವನನ್ನು ಕಳೆದ ಶುಕ್ರವಾರ ಬಂಧಿಸಲಾಗಿದ್ದು, ಆತನ ತನಿಖೆಯು ಬಾಂಬ್ ತಯಾರಿಕೆಯಲ್ಲಿ ಶಹನವಾಜ್ ಆಲಂ ಮತ್ತು ಜುಲ್ಫಿಕರ್ ಇಬ್ಬರೂ ಬಾಂಬ್ ತಯಾರಿಕೆಯ ರೂವಾರಿಗಳು ಎನ್ನುವಂಥ ಸಂಶಯ ಮೂಡಿಸಿದೆ.
ಇದಕ್ಕೂ ಮುನ್ನ ಜು.31ರಂದು ಇದೇ ಪ್ರಕರಣ ಸಂಬಂಧಿಸಿದಂತೆ ಉಗ್ರರ ತಂಡ ಬಾಂಬ್ ತಯಾರಿಸುತ್ತಿದ್ದ ತಂಡವನ್ನು ಎಟಿಎಸ್ ಭೇದಿಸಿ, ಅಲ್ಲಿ ಬಾಂಬ್ ತಯಾರಿಕೆಗೆ ಬಳಸುವ ಲ್ಯಾಬ್ ಉಪಕರಣಗಳು, ರಾಸಾಯನಿಕಗಳು ಸೇರಿದಂತೆ ಹಲವು ವಸ್ತುಗಳನ್ನು ಪತ್ತೆಹಚ್ಚಿತ್ತು. ಉಗ್ರರು ಗೆರಿಲ್ಲಾ ಮಾದರಿಯಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಯೋಜಿಸಿದ್ದರೆಂಬುದೂ ತಿಳಿದುಬಂದಿತ್ತು.