Advertisement

ನಿರಂತಲ ತೈಲ ಬೆಲೆ ಏರಿಕೆ ಕುರಿತು ನಿಮ್ಮ ಅಭಿಪ್ರಾಯವೇನು?

06:11 PM Jun 26, 2020 | keerthan |

ಮಣಿಪಾಲ: ದೇಶಾದ್ಯಂತ ತೈಲ ಬೆಲೆ ನಿರಂತರವಾಗಿ ಏರಿಕೆಯಾಗಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿಯಾಗಿ ಪರಿಣಮಿಸಿರುವುದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯವೇನು ಇಲ್ಲಿದೆ.

Advertisement

ಕೃಷ್ಣ ಜೋಶಿ: ಚೀನಾ ಪಾಕಿಸ್ತಾನ ವಿರುದ್ಧ ಯುದ್ದ್ ಆದರೆ ಹಣ ಡೀಸೆಲ್ ಪೆಟ್ರೋಲ್ ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಬೆಲೆ ಏರಿಕೆ ಬಗ್ಗೆ ಮಾತಾಡುತ್ತಾರೆ. ಸರ್ಕಾರಕ್ಕೆ ಸಹಾಯ ಮಾಡುವ ಬಗ್ಗೆ ಯೋಚನೆ ಇಲ್ಲಾ.

ಸುನೀಲ್ ಮಿಂಚು ಮಂಡ್ಯ: ಮೋದಿಜಿ ಏನೇ ಮಾಡಿದ್ರ್ ಅದು ದೇಶಕ್ಕೆ ಕಷ್ಟ ಆದರೂ ಪರವಾಗಿಲ್ಲ ದೇಶಕೋಸ್ಕರ ಎಲದಕ್ಕೂ ಸಿದ್ಧವಾಗಿರಬೇಕು.

ನಾರಯಣ ದೇವಾಡಿಗ:ಈ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ತ್ಯೆಲವನ್ನು ಪ್ರೀಯಾಗಿ ಹಂಚುತ್ತಿದ್ದರು ಅಂತ ಗುಲಾಮರು ಮಾತಾಡಿ ಕೊಳ್ಳುತ್ತಿದ್ದಾರಂತೆ. ಆದರೆ ರಾಹುಲ್ ಗಾಂಧಿ ಯಾವ ತ್ಯೆಲ ಹಂಚುತ್ತಾರೆಂದು ಭಕ್ತರ ಪ್ರಶ್ನೆ ಮಾಡುತ್ತಿದ್ದಾರಂತೆ.

ಮಹೇಶ್ ಗೌಡರ್: ಜನರು ಈ ಕೋವಿಡ್-19 ಹರಡಿರುವ ಪರಿಸ್ಥಿತಿಯಲ್ಲಿ ಸ್ವಂತ ವಾಹನ ಬಳಸದೇ ಸಾರ್ವಜನಿಕ ಸಾರಿಗೆ ಬಳಸಿ ಇನ್ನಷ್ಟು ಜನ ಈ ರೋಗಕ್ಕೆ ಬಲಿಪಶುಗಳಾಗಲಿ ಎಂಬ ಉದ್ದೇಶ ಸರ್ಕಾರದ್ದಾಗಿರಬಹುದು

Advertisement

ಪ್ರವೀಣ್ ಕಣಪ್ಪನವರ್: ಸರ್ಕಾರಕ್ಕೆ ದುಡ್ಡು ಬೇಕು ಅದಿಕ್ಕೆ ತೆರೆಗೆ ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿದೆ. ಇದೆ ಇವರು ಮಾಡಿದ ಅಚ್ಛೆ ದಿನ್.

ನರಸಿಂಹ ಮೂರ್ತಿ ಎನ್ ಎಂ:  ಕೋವಿಡ್-19 ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಹಣ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಬೆಲೆ ಹೆಚ್ಚಳ ಮಾಡಲೇಬೇಕು. ಚಿಕಿತ್ಸೆ, ಪಡಿತರ ಇತರೆ ಉಚಿತ ಸೌಲಭ್ಯಗಳನ್ನು ನೀಡಲೇ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಉಚಿತವಾಗಿ ಕೊಡಬಹುದಾ ಎಂದು ಸರ್ಕಾರಗಳು ಯೋಚಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next