ಮಣಿಪಾಲ: ಕರ್ನಾಟಕದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸುವ ಕುರಿತಾಗಿ ಹಲವು ಚರ್ಚೆಗಳು ನಡೆಯುತ್ತಿದೆ. ಈ ಕುರಿತಾಗಿ ಉದಯವಾಣಿ ತನ್ನ ಓದುಗರಿಗೆ ” ಕರ್ನಾಟಕದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸುವ ಕುರಿತಾಗಿ ಹಲವು ಚರ್ಚೆಗಳು ನಡೆಯುತ್ತಿದೆ.ಈ ಬಗ್ಗೆ ತಮ್ಮ ಅಭಿಪ್ರಾಯವೇನು?” ಎಂದು ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು,ಆಯ್ದ ಕೆಲವು ಇಲ್ಲಿವೆ.
ರಾಜೇಶ್ ಅಂಚನ್: ಖಂಡಿತಾ ಜಾರಿಯಾಗಬೇಕು. ಇಲ್ಲಿ ಬಾಂಗ್ಲಾ, ರೋಹಿಂಗ್ಯಾ, ಅಲ್ಲದೆ ಪಾಕಿಸ್ತಾನ ದಿಂದಲೂ ಅಕ್ರಮವಾಗಿ ಬಂದು ನೆಲೆಸಿದ್ದಾರೆ. ಇವರನ್ನೆಲ್ಲಾ ಹೊರಗಿಡದೆ ಹೋದಲ್ಲಿ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಸರ್ಕಾರ ಕೂಡಲೇ ಎನ್ ಆರ್ ಸಿ ಕಾಯ್ದೆ ಜಾರಿಗೆ ತಂದು ಅಕ್ರಮ ವಲಸಿಗರನ್ನು ಹೊರಕ್ಕೆ ಕಳುಹಿಸಲಿ.
ನಟರಾಜನ್ ಸುರೇಶ: ಮೊದಲು ವೀಸಾ ಇಲ್ಲದ ವಿದೇಶಿಗರನ್ನು ಆಚೆ ಹಾಕಿ ಆಮೇಲೆ NRC ಮಾಡಿ.
ರಮೇಶ್ ಬಿವಿ: ಅಸ್ಸಾಂ ರಾಜ್ಯದಲ್ಲಿ ಮಾಡಿದ ಮೇಲೆ ಏನೂ ಉಪಯೋಗ ಆಗಿಲ್ಲ. ಅಂದಮೇಲೆ ಮತ್ತೆ ಬೇರೆ ಕಡೆ ಮಾಡುವ ಅಗತ್ಯವಿದೆಯಾ ಅನ್ಸುತ್ತೆ. ವಿಶ್ವ ಮಾನವ ಹಕ್ಕು ಆಯೋಗ ಸುಮ್ಮನೆ ಇರೋದಿಲ್ಲ ಯಾರನ್ನೂ ದೇಶ ಬಿಟ್ಟು ಕಳಿಸೋಕೆ ಬಿಡಲ್ಲ ಆ ದೇಶದವರೂ ವಾಪಸ್ ತೊಗೊಳ್ಳೋಕೆ ಒಪ್ಪಲ್ಲ ಅಂದ ಮೇಲೆ ಮಾಡಿ ಉಪಯೋಗ ಏನು.
ವೆಂಕಟೇಶ್ ನೈಕ್ : ಹೊರ ದೇಶದ ಅಕ್ರಮ ವಲಸಿಗರಿಗೆ ಇಲ್ಲಿನ ಸವಲತ್ತುಗಳನ್ನ ಕೊಡುವ ಬದಲು ಅಂತರವನ್ನ ಅವರವರ ಸ್ವಸ್ಥಳಕ್ಕೆ ವರ್ಗಾಯಿಸುವುದಾದರೆ ರಾಷ್ಟ್ರೀಯ ಪೌರತ್ವ ನೀತಿ ನಮ್ಮ ರಾಜ್ಯದಲ್ಲೂ ಜಾರಿಯಾಗಲಿ.
ಪ್ರದೀಪ್: ಮೊದಲು ಆ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ನಿರುದ್ಯೋಗವೇ ಇರಲ್ಲ
ಸದಾಶಿವ್ ಸದಾಶಿವ: ಎಂದೋ ಆಗಬೇಕಾದ ಕೆಲಸ ಆಗಲೇ ಬೇಕು. ದೇಶದ ಸುರಕ್ಷತೆಗೆ ಅದು ಬಹಳ ಮುಖ್ಯ.