ಮಣಿಪಾಲ: ಪ್ರಜಾಫ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟು ಹಾನಿ ಉಂಟು ಮಾಡುತ್ತಿದ್ದು ಫೇಸ್ ಬುಕ್ ವಾಟ್ಸಾಪ್ ನಂತಹ ಮಧ್ಯವರ್ತಿಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ತಿಳಿಸಿದೆ. ಒಂದೆಡೆ ತಂತ್ರಜ್ಞಾನದ ಬಳಕೆ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಕಾರಣವಾದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುವಿಕೆ , ದ್ವೇಷದ ಹೇಳಿಕೆ, ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂಬ ಕಾರಣಕ್ಕೆ ಸರ್ಕಾರ ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಫೇಸ್ಬುಕ್, ವಾಟ್ಸ್ಯಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆಯ ಮೆಲೆ ನಿಯಂತ್ರಣ ಹೇರುವ ಸರಕಾರದ ಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿತ್ತು. ಆಯ್ದ ಅಭಿಪ್ರಾಯಗಳು ಇಂತಿವೆ
ದಾವುದ್ : ಸುಳ್ಳು ಸುದ್ದಿ ಹಬ್ಬಿಸುವುದ ರಲ್ಲಿ, ಅದರ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವುದರಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಫೇಸ್ಬುಕ್, ವಾಟ್ಸ್ಯಾಪ್ ಬದಲಾಗಿ ಸುರಕ್ಷಿತವಾದ ನಮ್ಮ ದೇಶೀಯ ಆ್ಯಪ್ ಬರಲಿ. ಚೀನಾದಲ್ಲಿ ಫೇಸ್ಬುಕ್, ವಾಟ್ಸ್ಯಾಪ್ ಬದಲಿಗೆ ವಿ ಚಾಟ್ ಬಳಸುತ್ತಾರೆ.
ದಿನೇಶ್: ತಪ್ಪು ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ಸಾಮೂಹಿಕವಾಗಿ ನಿಯಂತ್ರಣ ಹೇರುವುದು ತಪ್ಪು. ಪ್ರಚೋದನಾಕಾರಿ,ಕಾನೂನು ಬಾಹಿರ ಸುದ್ದಿಗಳಿಂದ ಸಾಮಾಜಿಕ ಜಾಲತಾಣ ಮುಕ್ತವಾಗಲು ಉತ್ತಮ ನಿರ್ಧಾರದ ಅವಶ್ಯಕತೆ ಇದೆ.
ಮಹಾದೇವ ಗೌಡ: ತಂತ್ರಜ್ಞಾನ ಅಭಿವೃದ್ದಿಯನ್ನು ತಡೆಯುವದಕ್ಕೆ ಆಗುವದಿಲ್ಲ .ಅದರ ಬದಲಿಗೆ ಸಮರ್ಪಕ ಕಾನೂನು ಜಾರಿಗೆ ಬರಲಿ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6ರ ತನಕ ಇಂಟರ್ ನೆಟ್ ಸೌಲ್ಭ್ಯವನ್ನು ಸಾರ್ವಜನಕರಿಗೆ ನಿಷೇಧ ಮಾಡಿದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವುದು. ಯಾರು ಕೂಡ ಹಾದಿ ತಪ್ಪುವುದಿಲ್ಲ.
ಶಶಿ : ಅಪ್ರಯೋಜಕ ಮಾಹಿತಿಗಳನ್ನು ರವಾನೆ ಮಾಡುವ ಇವುಗಳು ನಮ್ಮ ಸಮಾಜಕ್ಕೆ ಬೇಡ ಅನ್ನಿಸುತ್ತದೆ.. ಇದನ್ನು ನಿರ್ಭಂದ ಹೇರಿರುವ ಇತರ ದೇಶಗಳಲ್ಲಿನ ವಿದ್ಯಾರ್ಥಿ ಗಳು ಉತ್ತಮ ಸಮಾಜ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.. ನಮ್ಮ ದೇಶದ ಯುವ ಜನತೆ ತಮ್ಮ ಜೀವಮಾನದ ಶೇ. 40 ರಷ್ಟು ಸಮಯವನ್ನು ಇದರಲ್ಲಿ ವ್ಯರ್ಥ ಮಾಡುತ್ತಿದ್ದಾರೆ.