ಪಣಜಿ: ಗೋವಾದಲ್ಲಿ ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ಅನೇಕ ಭವ್ಯವಾದ ದೇವಾಲಯಗಳನ್ನು ಕೆಡವಿದ್ದು, ಅದನ್ನು ಹೊಸದಾಗಿ ಕಟ್ಟುವುದರಲ್ಲಿ ತಪ್ಪೇನು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪೋರ್ಚುಗೀಸರು 400 ವರ್ಷಗಳ ಕಾಲ ಗೋವಾ ರಾಜ್ಯದಲ್ಲಿ ಆಡಳಿತ ನಡೆಸಿ ದೇವಾಲಯಗಳನ್ನು ಕೆಡವಿದರು. ರಾಜ್ಯ ಬಜೆಟ್‍ನಲ್ಲಿ ಇಂತಹ ದೇವಾಲಯಗಳ ಪುನರ್ ನಿರ್ಮಾಣಕ್ಕೆ 20 ಕೋಟಿ ರೂ ಮೀಸಲಿಡಲಾಗಿದೆ ಎಂದರು.
“ಮಂದಿರ ವಹಿ ಬನಾಯೆಂಗೆ” ಎಂದ ಸಾವಂತ್ , ಗೋವಾ ಸ್ವಾತಂತ್ರ್ಯಾ ನಂತರ ರಾಜ್ಯದಲ್ಲಿ ನಾಗರಿಕ ಕಾನೂನು ಜಾರಿಗೆ ಬಂದಿದೆ. ದೇಶದ ಇತರ ರಾಜ್ಯಗಳು ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ
ಗೋವಾದಲ್ಲಿ ಪೋರ್ಚುಗೀಸರು ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಹಿಂದೂಗಳನ್ನು ಮತಾಂತರ ಮಾಡಿದರು. ಭವ್ಯವಾದ ದೇವಾಲಯಗಳನ್ನು ಕೆಡವಿದರು. ಈ ದೇವಾಲಯಗಳನ್ನು ಪುನರ್ ಪ್ರತಿಷ್ಠಾಪಿಸಿ ಹಿಂದೂ ಸಂಸ್ಕೃತಿಯನ್ನು ರಕ್ಷಿಸುವುದರಲ್ಲಿ ತಪ್ಪೇನು..? ಎಂದು ಪ್ರಶ್ನಿಸಿದರು.