ನಾಯಕರು ಕರೆ ಮಾಡಿರಬಹುದು. ಪಕ್ಷಕ್ಕೆ ಬರ್ತಿರಾ
ಎಂದು ಕೇಳಿರಬಹುದು. ನಾನೂ ಕತ್ತಿ ಸಹೋದರರ ಜತೆಗೆ
ಆಗಾಗ ಸಂಪರ್ಕದಲ್ಲಿ ಇರುತ್ತೇನೆ’ ಎಂದು ಅರಣ್ಯ ಸಚಿವ
ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ
ಸುದ್ದಿಗಾರರೊಂದಿಗೆ ಮಾತನಾಡಿ, ಕತ್ತಿ ಅವರನ್ನು ಸಂಪರ್ಕಿ
ಸಿರುವುದನ್ನೇ ದೊಡ್ಡದಾಗಿ ಮಾಡುವುದು ಸರಿಯಲ್ಲ.
ಅಸಮಾಧಾನ ಇದ್ದಾಗ ಈ ರೀತಿ ಕೇಳುವುದು ಸಹಜ.
ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕತ್ತಿ ಸಹೋದರರ
ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಕತ್ತಿ ಅವರನ್ನು
ಈ ಹಿಂದೆ ಜಿದ್ದಾಜಿದ್ದಿಗಾಗಿ ಸೋಲಿಸಿದ್ದೇವೆ ಎಂದು
ಹೇಳಿದರು. ರಾಹುಲ್ ಗಾಂಧಿ ಅವರಿಗೆ ಬಚ್ಚಾ ಎನ್ನುವ
ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು
ಅವರ ಸಂಸ್ಕೃತಿ, ಪ್ರಬುದಟಛಿತೆ ತೋರಿಸುತ್ತದೆ. ಈಶ್ವರಪ್ಪ
ಅವರು 30 ವರ್ಷದಿಂದ ಭವಿಷ್ಯ ಹೇಳುತ್ತಿದ್ದಾರೆ.
ಇನ್ನೂವರೆಗೆ ಯಾವುದೂ ನಿಜವಾಗಿಲ್ಲ. ಅವರ ಹೇಳಿಕೆಗೆ
ಪ್ರತಿಕ್ರಿಯೆ ನೀಡದಿರುವುದೇ ಒಳ್ಳೆಯದು ಎಂದರು.
Advertisement