ಕೊಪ್ಪಳ: ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳಿದ್ದು ನಿಜಾ ಅದು ಒಳ್ಳೆಯದು. ಅದು ಜಾತಿ ಗಣತಿಯಲ್ಲ, ಸಮಾಜಿಕ ಸ್ಥಿತಿಗತಿಯ ಗಣತಿ, ಈ ಗಣತಿ ಸರಿಯಿಲ್ಲವೆಂದರೆ ಮತ್ತೊಮ್ಮೆ ಮಾಡಿಸಲಿ ತಪ್ಪೇನಿದೆ ಎಂದು ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಜಿಲ್ಲೆಯ ಬೇವೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜಾತಿ ಪಟ್ಟಿಯಲ್ಲಿ ಇದು ಮೊದಲಿಂದಲೂ ಇದೆ. ನಾವು ಇದನ್ನ ಒಪ್ಪಿದ್ದೇವೆ. ಈಗಷ್ಟೆ ಕೆಲವರು ಉಪಜಾತಿಗಳ ಹೆಸರು ಬರೆಸುತ್ತಿದ್ದಾರೆ. ಗಣತಿ ವಿಚಾರದಲ್ಲಿ ಬಿಡುಗಡೆ ಮಾಡುವುದರಲ್ಲಿ ತಪ್ಪಿಲ್ಲ. ಸಾಮಾಜಿಕ ಸ್ಥಿತಿಗತಿ ಗಣತಿಯಲ್ಲಿ ಒಂದು ಜಾತಿ ಕಾಲಂ ಸೇರಿದೆ. ಇದರಿಂದ ಕೆಲವರಿಗೆ ಆತಂಕವಾಗಿದೆ. ಸಿಎಂ ಅವರೇ ಗಣತಿ ವರದಿ ನನ್ನ ಕೈ ಸೇರಲಿ ಎಂದಿದ್ದಾರೆ. ಬಳಿಕ ನೋಡೋಣವೆಂದಿದ್ದಾರೆ. ಜಾತಿ ಗಣತಿ ಹೊರಗಡೆ ಬರಲಿ, ಸರಿಯಿಲ್ಲ ಎಂದಾದ್ರೆ ಇನ್ನೊಮ್ಮೆ ಮಾಡೋಣ. ಮರು ಗಣತಿ ಮಾಡಲಿ ತಪ್ಪೆನಿದೆ ? ಎರಡು ತಿಂಗಳಲ್ಲಿ ಮರುಗಣತಿ ಮಾಡಲಿ ಎನ್ನುವುದು ನನ್ನ ಸಲಹೆ ಎಂದರು.
ಈಗಿನ ಸಮಿಕ್ಷೆಗೂ ಲೋಕಸಭೆಯಲ್ಲಿ ಚುನಾವಣೆಗೆ ಸಂಬಂಧವಿಲ್ಲ. ಜನ ಯಾವತ್ತೂ ಜಾತಿ, ಹಣಕ್ಕೆ ಓಟ್ ಹಾಕಲ್ಲ. ನಾವು ರಾಜಕಾರಣಿಗಳು ಜಾಣರಿದ್ದೇವೆ. ಜಾತಿ ಗಣತಿಗೂ ಚುನಾವಣೆಗೆ ಸಂಬಂಧ ಇಲ್ಲ. ಇನ್ನೊಮ್ಮೆ ಜಾತಿ ಜನಗಣತಿ ಮಾಡಿದ್ರೆ ತಪ್ಪೆನಿಲ್ಲ. ಲಿಂಗಾಯತರಲ್ಲಿ ಉಪಜಾತಿಗಳನ್ನ ಮೆನ್ಶೆನ್ ಮಾಡಿರೋದು ಆತಂಕವಿದೆ. ಅದನ್ನ ಸರಿ ಮಾಡೋಕೆ ವೀರಶೈವ ಲಿಂಗಾಯತ ಎಂದು ಬರೆಯಿಸಿ ಎಂದಿರೋದು ಸರಿಯಿದೆ ಎಂದರು.
2004ರಿಂದ ಚುನಾವಣೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಇದರಿಂದ ರಾಜಕಿಯ ಕಷ್ಟವಾಗಿದೆ. ರಾಜಕಾರಣಕ್ಕೆ ರಿಯಲ್ ಎಸ್ಟೇಟ್, ಎಕ್ಸೈಸ್, ಗುತ್ತಿಗೆದಾರರು ಬಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷದಲ್ಲಿ ಎಲ್ಲರೂ ಕುಟುಂಬಸ್ಥರೆ ಇದ್ದಾರೆ. ಜಾತಿ, ಹಣ ಹಾಗೂ ಕುಟುಂಬ ರಾಜಕಾರಣದಿಂದ ಕಷ್ಟವಾಗಿದೆ. ಸಾಮಾಜಿಕ ಕಾರ್ಯಕರ್ತರು ಈಗ ರಾಜಕಿಯದಿಂದ ದೂರವಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಗುತ್ತಿಗೆದಾರರೇ ಆಗುತ್ತಿದ್ದಾರೆ. ಇದರಿಂದ ರಾಜಕಿಯ ಕಲುಷಿತವಾಗಿದೆ. ಇದರಿಂದ ನಾವು ನಿವೃತ್ತಿಯಾಗಬೇಕು ಎಂದೆನಿಸುತ್ತಿದೆ. ಇದಕ್ಕೆ ಸಿಎಂ ಹಾಗು ಪಿಎಂ ಅವರು ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭ್ರಷ್ಟಾಚಾರ ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಭ್ರಷ್ಟಾಚಾರ ಹಿಂದೆಯಿದೆ, ಮುಂದೆನೂ ಇರತ್ತೆ, ಇದು ವ್ಯಾಪಕವಾಗಿ ಹಬ್ಬಿದೆ. ಈಗ ಭ್ರಷ್ಟಾಚಾರ ಕೊನೆ ಹಂತಕ್ಕೆ ತಲುಪಿದೆ. ಚುನಾವಣೆ ದಿನವೇ ಭ್ರಷ್ಟಾಚಾರ ನಡೆಯುತ್ತೆ. ಇದಕ್ಕೆ ಸೀನಿಯರ್ ಲೀಡರ್ಸ್ ಎಲ್ಲರೂ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೆಗಣಿ ಪುಟ್ಟಿ ಎಲ್ಲವೂ ವಾಸನೆ ಒಂದೆ, ಇದನ್ನ ತಡೆಗಟ್ಟಲು ಸಿಎಂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದರು.
ಸಂಸತ್ ದಾಳಿಯ ಬಗ್ಗೆ ಮಾತನಾಡಲು ಅವಕಾಶ ಕೊಡದೆ ಇರೋದು ತಪ್ಪು. ಈ ರೀತಿ ಮಾಡೋದು ಸರಿಯಲ್ಲ. ನನಗೆ ಸಚಿವ ಸ್ಥಾನ ಸಿಗೋದು ಬಿಡೋದು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಳ್ಳುವುದು ಕಡ್ಡಾಯವಲ್ಲ. ಹಿಜಾಬ್ ಕೇವಲ ಮುಸ್ಲಿಂ ಹಾಕೋದಲ್ಲ, ಅದು ಹೆಣ್ಣುಮಕ್ಕಳು ಕೆಲವು ಕಡೆ ಹಾಕುತ್ತಾರೆ. ಹಿಜಾಬ್ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು, ಜಗಳ ಮಾಡಬಾರದು. ಆ ಚರ್ಚೆ ಜೊತೆಗೆ ರಾಜಕೀಯ ಬಂದಿದೆ. ಇದು ಓಟ್‌ಗಾಗಿ ಬಂದಿದೆ ಎಂದರು.
ಪಿಎಂ ಅಭ್ಯರ್ಥಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಘೋಷಣೆಯಾಗಲಿ ಎಂದು ಹೇಳಿದ ಮೊದಲಿಗ ನಾನು. ಕಳೆದ ಜುಲೈ ತಿಂಗಳಲ್ಲಿ ಟಿವಿ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಘೋಷಣೆ ಮಾಡಬೇಕೆಂದು ಹೇಳಿದ್ದೇನೆ. ಅವರಿಗೆ ರಾಜಕೀಯ ಅನುಭವವಿದೆ. ಕರ್ನಾಟಕದಲ್ಲಿ ಮಂತ್ರಿ, ಸಂಸದರಾಗಿದ್ದಾರೆ. ಅವರು ದಲಿತ ವ್ಯಕ್ತಿಯಿದ್ದಾರೆ. ಈಗಲೂ ಅವರನ್ನು ಪಿಎಂ ಅಭ್ಯರ್ಥಿ ಎಂದು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷವೂ ಘೋಷಣೆ ಮಾಡಲಿ ಎಂದು ಹೇಳುವೆ. ಇದು ನನ್ನ ವಯಕ್ತಿಕ ಅಭಿಪ್ರಾಯ.
-ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ.