ಪೇಪರ್ ಆಡಿಟ್ ಟ್ರೈಲ್ ಅಥವಾ ವಿವಿ ಪ್ಯಾಟ್ ಎಂದರೆ ಮತ ಸರಿಯಾಗಿ ಚಲಾವಣೆ ಆಗಿದೆ ಎಂಬುದಕ್ಕೆ ರಸೀತಿ! ಎಟಿಎಂನಲ್ಲಿ ದುಡ್ಡು ತೆಗೆದಾಗ ರಸೀತಿ ಬರುತ್ತದೆ ತಾನೇ? ಇವಿಎಂಗೆ ಜೋಡಣೆಯಾಗಿರುವ ವಿವಿ ಪ್ಯಾಟ್ ಯಂತ್ರವೂ ಇದೇ ಕೆಲಸ ಮಾಡುತ್ತದೆ; ಆದರೊಂದು ವ್ಯತ್ಯಾಸ- ಎಟಿಎಂ ರಸೀತಿ ಕೈಗೆ ಸಿಗುತ್ತದೆ; ವಿವಿಪ್ಯಾಟ್ ಮುದ್ರಿಸುವ ರಸೀತಿ ಸಿಗುವುದಿಲ್ಲ.
.ಮತದಾರ ಇವಿಎಂನಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಎದುರಿನ ಗುಂಡಿ ಒತ್ತಿದ ಕೂಡಲೇ ಪಕ್ಕದಲ್ಲಿರುವ ವಿವಿಪ್ಯಾಟ್ ಯಂತ್ರ ಆ ಅಭ್ಯರ್ಥಿಯ ಹೆಸರು ಮತ್ತು ಮತದಾನ ಚಿಹ್ನೆಯುಳ್ಳ ಚೀಟಿ ಮುದ್ರಿಸಿ ತೋರಿಸುತ್ತದೆ.
. ಇದು ತನ್ನ ಮತ ಚಲಾವಣೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತದಾರನಿಗೆ ಅವಕಾಶ. ಗಾಜಿನ ಪೆಟ್ಟಿಗೆಯಲ್ಲಿರುವ ಕಾರಣ ಮತದಾರ ಮಾತ್ರ ಇದನ್ನು ನೋಡಲು ಸಾಧ್ಯ.
. ಚೀಟಿ 7 ಸೆಕೆಂಡ್ ಕಾಲ ಮಾತ್ರ ಕಾಣುತ್ತದೆ, ಬಳಿಕ ಯಂತ್ರ ಅದನ್ನು ಕತ್ತರಿಸಿ ಮುಚ್ಚಿದ ಪೆಟ್ಟಿಗೆಯೊಳಕ್ಕೆ ಬೀಳಿಸುತ್ತದೆ.
.ವಿವಾದ ಉಂಟಾದರೆ ಚು. ಆಯೋಗದ ಅಧಿಕಾರಿಗಳು ಈ ಮತ ರಸೀತಿಗಳನ್ನು ಪರಿಶೀಲಿಸಬಹುದು.