Advertisement

ಯೋಗಾ ನಿರೋಗ: ಮಾರ್ಜರಿ ಆಸನ, ಏನಿದರ  ಉಪಯೋಗ?

06:02 PM Dec 25, 2020 | Adarsha |

ಮಾರ್ಜರಿ ಆಸನವನ್ನು ಬೆಕ್ಕಿನ ಭಂಗಿ ಎಂದೂ ಹೇಳುತ್ತಾರೆ. ಬೆಕ್ಕು ಮೈನಿಮಿರಿಸಿಕೊಂಡು ನಿಂತಾಗ ಕಾಣುವಂತೆಯೇ ಈ ಆಸನದ ಭಂಗಿಯೂ ಇರುವುದರಿಂದ ಇದಕ್ಕೆ ಮಾರ್ಜರಿ ಆಸನ ಎಂಬ ಹೆಸರು ಬಂದಿದೆ. ಈ ಆಸನವನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಚಲನೆ ಸರಾಗವಾಗಿ ಆಗುತ್ತದೆ. ಅದರಿಂದ ಮನಸ್ಸು ಹಗುರವಾಗುತ್ತದೆ. ಉಸಿರಾಟದ ಸಮಸ್ಯೆ ದೂರವಾಗುತ್ತದೆ.

Advertisement

ಮಾರ್ಜರಿ ಆಸನವನ್ನು ಮಾಡುವುದು ಹೇಗೆ? ಮನೆಯಲ್ಲಿ ಇರುವ ಟೇಬಲ್‌ ಗಮನಿಸಿ. ಅದಕ್ಕೆ ನಾಲ್ಕುಕಾಲುಗಳು ಇರುತ್ತವೆ ತಾನೇ? ಈಗ ನಿಮ್ಮದೇಹವನ್ನೇ ಒಂದು ಟೇಬಲ್‌ನ ಆಕಾರಕ್ಕೆ ತಂದುಕೊಳ್ಳಲು ನಿರ್ಧರಿಸಿ. ಅದರಂತೆ ಹೊಟ್ಟೆ ಮತ್ತು ಬೆನ್ನು ಟೇಬಲ್‌ನ  ಸಮತಟ್ಟಾದ ಮೇಲ್ಭಾಗವನ್ನು ಸಂಕೇತಿಸಲಿ. ಎರಡುಕೈಗಳು ಮತ್ತು ಎರಡುಕಾಲುಗಳು, ಟೇಬಲ್‌ನ ನಾಲ್ಕು ಕಾಲುಗಳನ್ನು ಪ್ರತಿನಿಧಿಸುತ್ತವೆ ಅಂದುಕೊಳ್ಳಿ. ಈ ರೀತಿಯಲ್ಲಿ ಯೋಗಾಸನ ಮಾಡಲು ನಿರ್ಧರಿಸಿ.

ನೆಲಕ್ಕೆಊರಿದ ಅಂಗೈಗಳು ಮತ್ತುಕಾಲುಗಳು ನೇರವಾಗಿರಲಿ. ಇಷ್ಟಾದಮೇಲೆ ದೀರ್ಘ‌ವಾಗಿ ಒಮ್ಮೆ ಉಸಿರನ್ನು ಒಳಕ್ಕೆ ಎಳೆದುಕೊಳ್ಳಿ.15 ಸೆಕೆಂಡುಗಳ ನಂತರ ಉಸಿರನ್ನು ಹೊರಗೆ ಬಿಡಿ.( ಹೀಗೆ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗಲು ಅನುಕೂಲವಾಗುತ್ತದೆ.) ನಂತರಕುತ್ತಿಗೆಯನ್ನು ಮೇಲೆತ್ತಿ,20-30 ಸೆಕೆಂಡುಗಳಕಾಲ ಹಾಗೆಯೇ ಇರಿ. ನಂತರ ಕುತ್ತಿಗೆಯನ್ನುಕೆಳಕ್ಕೆ ಬಗ್ಗಿಸಿ. ಹೀಗೆ ಮಾಡುವಾಗ ಬೆನ್ನಿನ ಭಾಗ ನೇರವಾಗಿರಲಿ. ಈ ಆಸನವನ್ನು ದಿನವೂ 15 ನಿಮಿಷಗಳ ಮಾಡುವುದು ಸೂಕ್ತ.

ಇದನ್ನೂ ಓದಿ:ನೆನಪಿನ ಶಕ್ತಿಯ ಮೂಲಕ ದಾಖಲೆ ಬರೆದ ತಾನೀಶ್‌

ಮಾರ್ಜರಿ ಆಸನ ಮಾಡುವುದರಿಂದ ಬೆನ್ನುನೋವು ವಾಸಿಯಾಗುತ್ತದೆ.ಕೈ ಮತ್ತುಕಾಲಿನ ಸ್ನಾಯು- ಮೂಳೆಗಳು ಗಟ್ಟಿಯಾಗುತ್ತವೆ. ಕುತ್ತಿಗೆಯ ಭಾಗಕ್ಕೆ ಒಳ್ಳೆಯ ವ್ಯಾಯಾಮ ದೊರಕುತ್ತದೆ.„

Advertisement
Advertisement

Udayavani is now on Telegram. Click here to join our channel and stay updated with the latest news.

Next