Advertisement
ಅಕ್ಟೋಬರ್ 21ರಂದು 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಅ.24ರಂದು ಫಲಿತಾಂಶ ಘೋಷಣೆಯಾಗಲಿದೆ. ಇದರಲ್ಲಿ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ದಿನಾಂಕ ಆಯೋಗ ಘೋಷಿಸಿಲ್ಲ. ಅದಕ್ಕೆ ಕಾರಣ ಕೋರ್ಟ್ ತಡೆಯಾಜ್ಞೆ ನೀಡಿರುವುದು.
Related Articles
Advertisement
ಅನರ್ಹ ಶಾಸಕರ ಮುಂದಿರುವ ದಾರಿ ಏನು?
ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಅನರ್ಹ ಗೊಳಿಸಿರುವ ಸ್ಪೀಕರ್ ಹಾಲಿ ವಿಧಾನಸಭೆಯ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದ್ದರು.
ಇದೀಗ ಈ ರೂಲಿಂಗ್ ನಿಂದಾಗಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಗಿದೆ.
ಸುಪ್ರೀಂನಲ್ಲಿ ಏನು ಮಾಡಬಹುದು:
1)ಈಗಾಗಲೇ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಕಟಕಟೆಯಲ್ಲಿದೆ
2)ಇದೀಗ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸ್ಪೀಕರ್ ತೀರ್ಪಿನ ಒಂದು ಭಾಗಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂನಲ್ಲಿ ಮತ್ತೆ ಅರ್ಜಿ ಸಲ್ಲಿಸಬಹುದು.
3)ಕನಿಷ್ಠ ಪಕ್ಷ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಬಹುದು.
4) ರಾಜ್ಯದಲ್ಲಿ ಆಯೋಗ ಘೋಷಿಸಿರುವ ಉಪ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಬಹುದು.
ಮತ್ತೊಂದೆಡೆ ಸುಪ್ರೀಂಕೋರ್ಟ್ ನಲ್ಲಿಯೂ ಅನರ್ಹ ಶಾಸಕರಿಗೆ ಕಾನೂನು ಸಮರದ ಹೋರಾಟದ ಹಾದಿ ಸುಗಮವಾಗಿಲ್ಲ. ಚುನಾವಣಾ ವೇಳಾ ಪಟ್ಟಿ ಪ್ರಕಟವಾದ ವೇಳೆ ಆಕ್ಷೇಪ ಸಲ್ಲಿಸಿದರೆ ಅದನ್ನು ಕೋರ್ಟ್ ಪುರಸ್ಕರಿಸುವುದು ಅನುಮಾನ. ಮತ್ತೊಂದೆಡೆ ಸುಪ್ರೀಂಕೋರ್ಟ್ ಅನರ್ಹರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೂ ಕೂಡಾ ಸಮಸ್ಯೆ ಕಾದಿದೆ. ಅದೇನೆಂದರೆ ಅನರ್ಹತೆ ಅರ್ಜಿ ಬಾಕಿ ಇದ್ದಾಗ ಸಚಿವರಾಗುವ ಅವಕಾಶ ಇಲ್ಲ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.