Advertisement

ನಿವೃತ್ತಿಗೆ ಸರಿಯಾದ ವಯಸ್ಸು ಯಾವುದು?

11:41 PM Nov 27, 2021 | Team Udayavani |

“ವ್ಯಕ್ತಿಯೊಬ್ಬರು ಯಾವ ವಯಸ್ಸಿನಲ್ಲಿ ನಿವೃತ್ತಿ ತೆಗೆದುಕೊಳ್ಳಬೇಕು?”

Advertisement

ಈ ಪ್ರಶ್ನೆಗೆ, ಖ್ಯಾತ ನರರೋಗ ತಜ್ಞರೊಬ್ಬರು ಉತ್ತರಿಸಿ  ಮನುಷ್ಯನಿಗೆ ನಿವೃತ್ತಿಯೇ ಬೇಕಾಗಿಲ್ಲ ಎಂದಿದ್ದಾರೆ! ವಿಶೇಷವೆಂದರೆ ನಿವೃತ್ತಿ ತೆಗೆದುಕೊಳ್ಳುವುದಕ್ಕಿಂತ, ಕೆಲಸದಲ್ಲಿ ಹೆಚ್ಚು ಬ್ಯುಸಿಯಾಗಿದ್ದಷ್ಟೂ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಉತ್ತರವನ್ನೂ ಕೊಟ್ಟಿದ್ದಾರೆ. ನೀವು ತೃಪ್ತಿಯುತ ಜೀವನ ಕಳೆಯಲು, ದೀರ್ಘಾಯುಷ್ಯ ಪಡೆಯಬೇಕಾದರೆ, ಕೆಲಸ ಮಾಡುತ್ತಲೇ ಇರಿ ಎಂಬುದು ಇವರ ಸಲಹೆ.

ಇದನ್ನು ಅವರದ್ದೇ ಮಾತುಗಳಲ್ಲಿ ಕೇಳುವುದಾದರೆ: ನಿವೃತ್ತಿಗೆ ಇಂತಿಷ್ಟು ವಯಸ್ಸು ಎಂಬುದೇ ಇಲ್ಲ. ಒಂದು ವೇಳೆ ವ್ಯಕ್ತಿ ಬೇರೆ ರೋಗಗಳಿಂದ ಅಥವಾ ಸಮಸ್ಯೆಗಳಿಂದ ನರಳುತ್ತಿದ್ದರೂ, ಕೆಲಸ ಮುಂದುವರಿಸುವುದು ಸೂಕ್ತ. ಒಂದು ವೇಳೆ ನೀವು ಇದ್ದ ಕೆಲಸದಲ್ಲೇ ಮುಂದುವರಿಯಬಹುದು ಅಥವಾ ಯಾವುದಾದರೂ ಒಂದು ಸಮಾಜ ಸೇವಾ ಸಂಸ್ಥೆಯ ಜತೆಗೆ ಗುರುತಿಸಿಕೊಂಡು ಸ್ವಯಂ ಸೇವಕರಾಗಿ ಕೆಲಸ ಮಾಡಬೇಕು.

ಲೆಮೋಂಟ್‌ ಡೋಜೈರ್‌ ಎಂಬ ಲೇಖಕರೊಬ್ಬರಿಗೆ 78 ವರ್ಷಗಳಾಗಿದ್ದು ಈಗಲೂ ಇಂಗ್ಲಿಷಿನಲ್ಲಿ ಹಲವಾರು ಹಾಡುಗಳನ್ನು ಬರೆಯುತ್ತಲೇ ಇದ್ದಾರೆ. ಇವರು ಹೀಟ್‌ ವೇವ್‌, ಸ್ಟಾಪ್‌! ಇನ್‌ ದಿ ನೇಮ್‌ ಆಫ್ ಲವ್‌ ಮತ್ತು ರೀಚ್‌ಔಟ್‌, ಐ ವಿಲ್‌ ಬೀ ದೇರ್‌ ಎಂಬ ಹಾಡುಗಳನ್ನು ಇವರ ಸಹ ಲೇಖಕರಾಗಿ ಬರೆದಿದ್ದಾರೆ. ಇವರು ಹೇಳುವುದು ಹೀಗೆ; “ಬೆಳಗ್ಗೆ ಎದ್ದ ಕೂಡಲೇ ಒಂದು ಅಥವಾ ಎರಡು ಗಂಟೆಗಳನ್ನು ಈ ರೀತಿಯ ಕೆಲಸದಲ್ಲಿ ವಿನಿಯೋಗಿಸಿಕೊಳ್ಳುತ್ತೇನೆ. ಹೀಗಾಗಿಯೇ ನಾನು ಆರೋಗ್ಯಕರವಾಗಿ ಇದ್ದೇನೆ’.

ಕೆಲಸವಿಲ್ಲದೇ ಸುಖಾಸುಮ್ಮನೆ ಕಾಲ ಕಳೆಯುವುದು ಅಸಂತೋಷಕ್ಕೆ ದಾರಿಯಾದಂತೆ. ಹೀಗಾಗಿಯೇ ಸಾಧ್ಯವಾದಷ್ಟು ಬ್ಯುಸಿಯಾಗಿರಿ. ಅಂದರೆ ಸುಮ್ಮನೆ ಕೆಲಸ ಮಾಡಿಕೊಂಡು ಅಥವಾ ಪ್ರವಾಸ ಮಾಡಿಕೊಂಡು ಇರುವುದು ಅಂಥಲ್ಲ. ಇದಕ್ಕಿಂತ ಮಿಗಿಲಾಗಿ ಅರ್ಥಗರ್ಭಿತ‌ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಆಂಗ್ಲ ಮ್ಯಾಗಜಿನ್‌ ಎಕಾನಾಮಿಸ್ಟ್‌ “ಅನ್‌ರಿಟೈರ್‌ಮೆಂಟ್‌” ಎಂಬ ಪದವೊಂದನ್ನು ಹುಟ್ಟುಹಾಕಿದೆ. ಇದು ನಿವೃತ್ತಿಯಾಗುವವರ ಸಂಕಷ್ಟವನ್ನು ವಿವರಿಸಿದ್ದು, ಬಹಳಷ್ಟು ಜನ ನಿವೃತ್ತಿ ಜೀವನದ ಬಗ್ಗೆ ಬೇಸರ ಹೊಂದಿದ್ದಾರೆ. ಅದರಲ್ಲೂ ಈಗಾಗಲೇ ನಿವೃತ್ತಿಯಾಗಿರುವ ಶೇ.25ರಿಂದ 40ರಷ್ಟು ಮಂದಿ ವಾಪಸ್‌ ಕೆಲಸಕ್ಕೆ ಮರಳಲು ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಹಾರ್ವರ್ಡ್‌ ಕಂಪೆನಿಯ ಎಕಾನಾಮಿಸ್ಟ್‌ ನಿಕೋಲೆ ಮಾಸ್ಟಸ್‌ ಹೇಳುವ ಪ್ರಕಾರ, ಒಂದು ಉದ್ದೇಶದ ಪ್ರಜ್ಞೆ, ಮಗದೊಂದು ನಿಮ್ಮ ಮೆದುಳನ್ನು ಬಳಕೆ ಮಾಡುವುದು. ಇದರ ಜತೆಗೆ ಸಾಮಾಜಿಕವಾಗಿ ಸಕ್ರಿಯರಾಗಿರುವುದು ಉತ್ತಮ.

ಇಲ್ಲೇ ನಾವು ಖ್ಯಾತ ಮನಃಶಾಸ್ತ್ರಜ್ಞ  ಫ್ರಾಯ್ಡ ಅವರ ಕೆಲವು ಮಾತುಗಳನ್ನು ನೆನಪಿಸಿಕೊಳ್ಳಬಹುದು. ಅವರು ಜೀವನದ ಕುರಿತಂತೆ ಎರಡು ಸಂಗತಿಗಳನ್ನು ಹೇಳಿದ್ದಾರೆ. ಜೀವನದಲ್ಲಿ ಪ್ರೀತಿ ಹೊಂದುವುದು ಮತ್ತು ಅರ್ಥಪೂರ್ಣ ಕೆಲಸ ಮಾಡುವುದು.

ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ನಾನು 70 ವರ್ಷದಿಂದ 100 ವರ್ಷದೊಳಗಿನ ಕೆಲವು ಜನರನ್ನು ಮಾತನಾಡಿಸಿ, ಜೀವನ ಪ್ರೀತಿಯ ಕುರಿತಾದ ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇವರಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೆಲಸ ಮಾಡಲು ಹಂಬಲಿಸಿದ್ದಾರೆ. ಕೆಲವು ಸಂಗೀತಗಾರರು, ಅಂದರೆ 71 ವರ್ಷದ ಡೋನಾಲ್ಡ್‌ ಫೇಜನ್‌ ಆಫ್ ಸ್ಟೀಲಿ ಡ್ಯಾನ್‌, 80 ವರ್ಷದ ಜ್ಯೂಡಿ ಕೋಲಿನ್ಸ್‌ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದಾರೆ. ಉಳಿದಂತೆ 99 ವರ್ಷದ ಜಾರ್ಜ್‌ ಶಲ್ಟ್$Õ, 84 ವರ್ಷದ ದಲಾೖ ಲಾಮಾ ಅವರು ತಮ್ಮ ವಯಸ್ಸಿಗೆ ತಕ್ಕಂತೆ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಕೆಲಸದ ಮೂಲಕ ಈಗಿನ ಪೀಳಿಗೆ ಹುಬ್ಬೇರಿಸುವಂತೆ ಮಾಡಿದ್ದಾರೆ.

ನಿವೃತ್ತಿ ವಯಸ್ಸಿನ ಅನಂತರವೂ ನೀವು ಬ್ಯುಸಿಯಾಗಿರಬೇಕು ಎಂದಾದರೆ ಇದಕ್ಕೆ ಕೆಲವೊಂದು ಅರ್ಥಪೂರ್ಣ ಚಟುವಟಿಕೆಗಳು ಮತ್ತು ಆದ್ಯತೆಗಳನ್ನು ಪುನರ್‌ಹೊಂದಿಸಿಕೊಳ್ಳಬೇಕಾಗುತ್ತದೆ. 78 ವರ್ಷದ ಲೇಖಕಿ ಬಾರ್ಬರಾ ಎರೆನ್‌ರೀಚ್‌ ಅವರು, ವಯೋಸಹಜವಾಗಿ ಬರುವ ಕಾಯಿಲೆಗಳಿಗಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದಿಲ್ಲವಂತೆ. ವೈದ್ಯರ ಕ್ಲಿನಿಕ್‌ನಲ್ಲಿ ನಾನೇಕೆ ಸಮಯ ಹಾಳು ಮಾಡಲಿ? ಒಂದು ವೇಳೆ ಅಲ್ಲಿ ಕುಳಿತರೂ ನನ್ನ ಆಯುಸ್ಸಿನಲ್ಲಿ ಮೂರು ವಾರವನ್ನಷ್ಟೇ ಹೆಚ್ಚಿಸಬಲ್ಲರು. ಇದಕ್ಕೆ ಬದಲಾಗಿ ನಾನು ನನ್ನ ಸಮಯವನ್ನು ಬೇರೆ ಕಡೆ ಕಳೆಯುತ್ತೇನೆ ಎಂದಿದ್ದಾರೆ.

ಅಮೆರಿಕದಲ್ಲಿ ಕೆಲವು ಕಂಪೆನಿಗಳು, ನಿವೃತ್ತಿಯ ಅಂಚಿಗೆ ಬಂದಿರುವಂಥವರನ್ನೂ ಮುಂದುವರಿಯಲು ಅವಕಾಶ ಮಾಡಿಕೊಟ್ಟಿವೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಅಂದರೆ ಕಡಿಮೆ ದರಕ್ಕೆ ಸಿಗುವ ವಸತಿ, ಕೆಲಸದ ಆರಂಭ ಮತ್ತು ಅಂತ್ಯದ ಸಮಯ, ವಿಶ್ರಾಂತಿ ಕೊಠಡಿ, ಒಂದಷ್ಟು ಹೊತ್ತು ನಿದ್ರಿಸುವ ಸಲುವಾಗಿ ಒಂದು ಮಂಚವನ್ನೂ ಹಾಕಿದ್ದಾರೆ. ಈ ಎಲ್ಲ ಸೌಕರ್ಯವನ್ನು ಅಮೆರಿಕದಲ್ಲಿರುವ ವಯೋ ತಾರತಮ್ಯ ವಿರೋಧಿ ನೀತಿಗೆ ಪೂರಕವಾಗಿ ಮಾಡಲಾಗಿದೆ.

ಕೆನಡಾ, ಮೆಕ್ಸಿಕೋ ಮತ್ತು ಫಿನ್‌ಲ್ಯಾಂಡ್‌ನಲ್ಲೂ ವಯೋ ತಾರತಮ್ಯ ಮಾಡುವಂತಿಲ್ಲ. ಅಂದರೆ, 60 ಅಥವಾ 65 ವರ್ಷವಾದ ಕೂಡಲೇ ಕಡ್ಡಾಯವಾಗಿ ನೌಕರರನ್ನು ಮನೆಗೆ ಕಳುಹಿಸುವಂತಿಲ್ಲ. ಐರೋಪ್ಯ ದೇಶಗಳಲ್ಲಿ ನಿವೃತ್ತಿ ಅನಂತರದ ಪಿಂಚಣಿಯನ್ನೇ ತೆಗೆಯಲಾಗಿದೆ. ಜರ್ಮನಿಯಲ್ಲಿ ನಿವೃತ್ತಿ ವಯಸ್ಸು 65 ಇದ್ದಿದ್ದು, ಈಗ 67ಕ್ಕೆ ಏರಿಕೆಯಾಗಿದೆ.

ಅಮೆರಿಕದಲ್ಲಿ ಕೆಲವು ಕಂಪೆನಿಗಳು 60 ವರ್ಷದ ಬಳಿಕವೂ ಕೆಲವರನ್ನು ಮುಂದುವರಿಸಿದ್ದರೂ ಇನ್ನೂ ಕೆಲವು ಕಂಪೆನಿಗಳು ವಯಸ್ಸಾದವರಿಗೆ ಕೆಲಸ ನೀಡಲು ಮತ್ತು ಬಡ್ತಿ ನೀಡಲು ಹಿಂದೇಟು ಹಾಕುತ್ತಿವೆ. ಅಮೆರಿಕದ ಮೂರನೇ ಎರಡರಷ್ಟು ನಿವೃತ್ತಿ ವಯಸ್ಸು ಮೀರಿದ ಕೆಲಸಗಾರರು ತಮಗೆ ವಯೋ ತಾರತಮ್ಯದ ಅರಿವಾಗಿದೆ ಎಂದಿದ್ದಾರೆ. ಅಲ್ಲದೆ ಕಂಪೆನಿಗಳು ವಯಸ್ಸಾದವರಿಗೆ ಸ್ಮಾರ್ಟ್‌ ಕೆಲಸಗಳನ್ನೂ ಹೇಳಬೇಕು. ಇದಕ್ಕೆ ಬದಲಾಗಿ ಕಾನೂನಿದೆ ಎಂಬ ಕಾರಣಕ್ಕಾಗಿ ಕೆಲಸಕೊಟ್ಟು ಏನೋ ಸಹಾಯ ಮಾಡುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳಬಾರದು. ಹಿರಿಯರು ಮತ್ತು ಕಿರಿಯರನ್ನು ಒಳಗೊಂಡ ತಂಡಗಳನ್ನು ರಚಿಸಿ ಕೆಲಸ ಮಾಡಿಸಿಕೊಂಡು, ಉತ್ಪಾದಕತೆ ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಉದಾಹರಣೆ ಎಂದರೆ, ಇಲ್ಲಿನ ಖಾಸಗಿ ಬ್ಯಾಂಕ್‌ ಒಂದರಲ್ಲಿ ಇದೇ ರೀತಿಯ ತಂಡ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ. ಇಲ್ಲಿ ಹೆಚ್ಚು ತಪ್ಪುಗಳು ಆಗುತ್ತಿಲ್ಲ ಎಂಬುದು ಕಂಡು ಬಂದಿದೆ.

ಇನ್ನೂ ಕೆಲವು ದೇಶಗಳು ವಯೋಆಧರಿತ ರೋಗಗಳನ್ನು ಹೊಂದಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳಲ್ಲ ಎಂದು ಹೇಳುವಂತಿಲ್ಲ. ಅಂದರೆ ಮರೆಗುಳಿ ಕಾಯಿಲೆ ಇರುವವರಿಗೆ ಅಮೆರಿಕ, ಇಂಗ್ಲೆಂಡ್‌ನಲ್ಲಿ ಕೆಲಸ ನಿರಾಕರಿಸುವಂತಿಲ್ಲ. ಇದಕ್ಕೆ ಪೂರಕವಾಗಿ ಅಮೆರಿಕದ ಎನ್‌ಜಿಒವೊಂದು ಇಂಥ ಕೆಲಸಗಾರರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ.

ಅಂದರೆ ಪ್ರತೀ ದಿನವೂ ಅವರು ಮಾಡಬೇಕಾದ ಕೆಲಸಗಳನ್ನು ಲಿಖೀತ ರೂಪದಲ್ಲಿ ನೀಡುವುದು, ದೊಡ್ಡ ಕೆಲಸಗಳನ್ನು ಸಣ್ಣ ಸಣ್ಣ ಜವಾಬ್ದಾರಿಗಳಾಗಿ ಗುರುತಿಸಿ ಹಂಚಿಕೆ ಮಾಡುವುದು, ಒಂದು ವೇಳೆ ಅವರು ಮಾಡುತ್ತಿದ್ದ ಕೆಲಸ ಬದಲಾದರೆ ಅಗತ್ಯ ತರಬೇತಿ ನೀಡುವುದು, ಕೆಲಸ ಮಾಡುವ ಅವಧಿಯನ್ನು ಕಡಿಮೆಗೊಳಿಸುವುದು, ಹಾಗೆಯೇ ಬೇರೊಂದು ಶಿಫ್ಟ್ ವ್ಯವಸ್ಥೆ ಮಾಡಿಕೊಡುವುದನ್ನು ಮಾಡಬೇಕು ಎಂದಿದೆ. ಇದನ್ನು ಗುರುತಿಸಿಯೇ ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣವನ್ನು ಡೈಮೆನ್ಶಿಯಾ ಸ್ನೇಹಿಯನ್ನಾಗಿ ಮಾಡಲಾಗಿದೆ. ಇಲ್ಲಿ ಇಂಥವರ ಸೇವೆಗಾಗಿಯೇ 1,000ಕ್ಕೂ ಹೆಚ್ಚು ಸಿಬಂದಿಯನ್ನು ನೇಮಕ ಮಾಡಲಾಗಿದೆ.

ಓಹಿಯೋದ ಜೆಸ್ಯೂಟ್‌ ಕ್ಯಾಥೋಲಿಕ್‌ ವಿಶ್ವವಿದ್ಯಾನಿಲಯ ಮತ್ತು ಹೈಟ್ಸ್‌ ವಿಶ್ವವಿದ್ಯಾನಿಲಯ ಡೈಮೆನ್ಶಿಯಾ ಕಾಯಿಲೆ ಇರುವ ಚಿಕ್ಕವರು ಮತ್ತು ದೊಡ್ಡವರನ್ನು ಒಂದೆಡೆ ಸೇರಿಸಿ ಪಾಠ ಹೇಳಿಕೊಡುತ್ತಿದೆ. ಇದರಿಂದಾಗಿ ಈ ಎರಡೂ ವರ್ಗಗಳ ನಡುವೆ ಸ್ನೇಹ ಬಾಂಧವ್ಯ ಬೆಳೆದಿದೆ. ಹಾಗೆಯೇ ಅತ್ಯಂತ ಸಾಮೀಪ್ಯವೂ ಬೆಳೆದಿದೆ. ಇವರು ಜತೆಯಾಗಿ ಹಾಡುತ್ತಾರೆ, ಜತೆಗೆ ತಮ್ಮನ್ನು ಇತರರಂತೆಯೇ ನೋಡುತ್ತಿರುವ ಬಗ್ಗೆಯೂ ಹರ್ಷ ವ್ಯಕ್ತಪಡಿಸಿದ್ದಾರೆ.

1976ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಪ್ಯಾಟ್‌ ಸಮ್ಮಿಟ್‌ ಅವರಿಗೆ 2011ರಲ್ಲಿ ಮರೆಗುಳಿ ಕಾಯಿಲೆ ಬಂದಿತ್ತು. ಆದರೂ ಕೆಲಸ ಮುಂದುವರಿಸಿದ್ದ ಅವರು, ಇತರರಿಗೆ ಮಾದರಿಯಾಗಿದ್ದರು.

ಇನ್ನು ಎಲ್ಲ ವಯಸ್ಸಾದವರಿಗೆ ಕೆಲಸ ಕೊಡುವುದು ಕಷ್ಟಕರವೇ. ಇದಕ್ಕೆ ಬದಲಾಗಿ ಖಾಸಗಿ ಎನ್‌ಜಿಓಗಳು ಹಿರಿಯರನ್ನು ಸ್ವಯಂಸೇವಕರಾಗಿ ಬಳಸಿಕೊಳ್ಳಬಹುದು. ಅಮೆರಿಕದ ಹೆಡ್‌ ಸ್ಟಾರ್ಟ್‌ ಪ್ರೋಗ್ರಾಮ್‌ ಅಡಿಯಲ್ಲಿ ಹಿರಿಯರು, ಅಶಕ್ತ ಮಕ್ಕಳಿಗೆ ಪುಸ್ತಕ ಓದಿ ಕಥೆ, ಕವನ, ಪಾಠ ಕೇಳಿಕೊಡುತ್ತಿದ್ದಾರೆ. ಹಾಗೆಯೇ ಇನ್ನೊಂದು ಎನ್‌ಜಿಒ, ಬಡ ಮಕ್ಕಳಿಗೆ ಪಾಠ ಹೇಳಿಕೊಡಲು ಹಿರಿಯರನ್ನು ಬಳಸಿಕೊಳ್ಳುತ್ತಿದೆ. ಈ ಕಾರ್ಯಕ್ರಮದಿಂದಾಗಿ ಮಕ್ಕಳಲ್ಲಿ ಪಾಠದ ಗ್ರಹಿಕೆಯೂ ಚೆನ್ನಾಗಿ ಆಗಿದೆ. ಓದಿನಲ್ಲೂ ಮುಂದಿದ್ದಾರೆ. ಕ್ಲಾಸ್‌ರೂಂ ವಾತಾವರಣವೂ ಬದಲಾಗಿದೆ.

ನನ್ನ ಜೀವನದಲ್ಲೂ ಹೀಗೆಯೇ ಆಗಿದೆ. ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರು, ಜೀವನದ ಕಷ್ಟಗಳಿಂದ ಹೊರಬರುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೆ, ವಯಸ್ಸಾದ ಅನಂತರವೂ ಸಂತೋಷ ಮತ್ತು ಯಶಸ್ಸಿನ ದಾರಿಯಲ್ಲಿ ಹೋಗುವುದು ಹೇಗೆ ಎಂಬುದನ್ನೂ ಕಲಿಸಿಕೊಟ್ಟಿದ್ದಾರೆ.

ಕೃಪೆ: ಟೆಡ್‌ ಟಾಕ್‌

ಡೇನಿಯಲ್‌ ಲೆವಿಟಿನ್‌,ನರರೋಗ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next