Advertisement

ಕೋವಿಡ್-19 ಸೋಂಕಿನ ಪ್ರಕರಣಗಳು ಇದ್ದಕ್ಕಿದ್ದಂತೆಯೇ ಏರಿಕೆ ಕಾಣಲು ಕಾರಣವೇನು?

06:39 PM May 22, 2020 | keerthan |

ಮಣಿಪಾಲ:  ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಇದ್ದಕ್ಕಿದ್ದಂತೆಯೇ ಏರಿಕೆ ಕಾಣಲು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿರುವುದೇ ಕಾರಣವೇ? ಅಥವಾ ಇನ್ನೇನಾದರೂ ಬೇರೆ ಕಾರಣಗಳಿರಬಹುದೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಳು ಇಲ್ಲಿದೆ.

Advertisement

ಎಂ ಟಿ ನಾಯಕ್:  ಶ್ರೀಮಂತರ , ರಾಜಕಾರಣಿಗಳ , ಉದ್ಯಮಪತಿಗಳ , ಕೋಟ್ಯಾಧಿಪತಿಗಳ ಮಕ್ಕಳನ್ನು ವಿಮಾನ , ಹಡಗುಗಳಮೂಲಕ ದೇಶದೊಳಗೆ ಕರೆತಂದು , ರಾಜೋಪಚಾರ ನೀಡಿ ಮನೆಗಳಿಗೆ ಮುಟ್ಟಿಸಿದ್ದು ಒಂದು ಕಡೆಯಾದರೆ , ಯಾವುದೇ ದೂರದೃಷ್ಟಿಯಿಲ್ಲದೇ ಒಮ್ಮೆಲೇ ಲಾಕ್ ಡೌನ್ ಘೋಷಿಸಿದ್ದು ಇನ್ನೊಂದು ಕಡೆಯಾದರೆ , ದೇಶದ ಬಡ ವಲಸೆ ಕಾರ್ಮಿಕರುಗಳ , ಕೂಲಿಕಾರರ , ದುರ್ಬಲರ ಬದುಕನ್ನು ಬೇಕಾಬಿಟ್ಟಿಯಾಗಿ ಬೀದಿಗೆ ದೂಡಿ ನಡುನೀರಿನಲ್ಲಿ ಕೈ ಬಿಟ್ಟದ್ದೇ  ಕೊರೊನಾ ತೀವ್ರ ಗತಿಯಲ್ಲಿ ಹಬ್ಬುತ್ತಿರುವ ಇಂದಿನ ವಿದ್ಯಮಾನಕ್ಕೆ ಕಾರಣ. ಕೇಂದ್ರ ಸರ್ಕಾರದ ಶ್ರೀಮಂತರ ಪರವಾದ ಧೋರಣೆಯೇ ಇದಕ್ಕೆಲ್ಲಾ ಮೂಲ ಕಾರಣ ಅಷ್ಟೇ. ಒಟ್ಟಿನಲ್ಲಿ ಇಡೀ ದೇಶವೇ ಅಯೋಮಯ.

ಜೈ ಕರ್ನಾಟಕ ರವಿಶಂಕರ್:  ಮೂದಲು ತಬ್ಲಿಗಿ ಜಮಾತ್. ನಂತರ ಅಜ್ಮಿರ್. ಈಗ ಮಹಾರಾಷ್ಟ್ರ ಮುಂಬೈ ಕಾರಣ. ಈ ತಬ್ಲಿಗಿ. ಅಜ್ಮಿರ್. ಮುಂಬೈ. ಈ ಮೂರು ಇಂದು ಕರ್ನಾಟಕ ರಾಜ್ಯ ಸರ್ವನಾಶ ಮಾಡಿದ್ದು.

ಪ್ರಶಾಂತ್ ಅಂಚನ್: ಮುಂಬೈನಿಂದ ಮತ್ತು ವಿದೇಶದಿಂದ ಬರಲು ಅವಕಾಶ ನೀಡಿದ್ದೆ ತಪ್ಪು.

Advertisement

Udayavani is now on Telegram. Click here to join our channel and stay updated with the latest news.

Next