ಹೊಸದಿಲ್ಲಿ: ಸೋಮವಾರ ರಾತ್ರಿ ಸುಮಾರು 9 ಗಂಟೆಯಿಂದ ಜಗತ್ತಿನಾದ್ಯಂತ ವಾಟ್ಸ್ಯಾಪ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಸ್ಥಗಿತವಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರಂಭದಲ್ಲಿ ಸರ್ವರ್ ಡೌನ್ ವಿಚಾರದ ತಿಳಿಯದ ಬಹುತೇಕರು ಮೊಬೈಲ್ ರೀ ಸ್ಟಾರ್ಟ್, ಫ್ಲೈಟ್ ಮೊಡ್ ಎಂದೆಲ್ಲಾ ಮಾಡಿ ಪರದಾಡಿದರು.
ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ವಾಟ್ಸ್ಯಾಪ್ , ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳು ತನ್ನ ದೋಷವನ್ನು ಸರಿಪಡಿಸಿಕೊಂಡು, ಮೊದಲಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ.
ಜಗತ್ತಿನ ನಾನಾ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಬಗ್ಗೆ ನಿಗಾ ಇಡುವ ಡೌನ್ ಡಿಟೆಕ್ಟರ್ ಡಾಟ್ ಕಾಮ್ ಎಂಬ ಜಾಲತಾಣ, ವಿಶ್ವದ ಹಲವಾರು ಜನರು, ತಮ್ಮ ವಾಟ್ಸ್ಯಾಪ್ , ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳು ಕಾರ್ಯ ನಿರ್ವಹಿಸದ ಬಗ್ಗೆ ಟ್ವಿಟರ್ ನಂಥ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ದೂರಲಾರಂಭಿಸಿದ್ದಾರೆ. ಫೇಸ್ ಬುಕ್‌ನಲ್ಲಿ 1.26 ಲಕ್ಷ ಬಳಕೆದಾರರು ದೂರು ಸಲ್ಲಿಕೆ ಮಾಡಿದರೆ, ಇನ್ಸ್ಟಾಗ್ರಾಮ್ ನಲ್ಲಿ 98,700 ಮಂದಿ ದೂರಿನ ಕುರಿತು ವರದಿ ಮಾಡಿದ್ದಾರೆ. ಇನ್ನು ವಾಟ್ಸ್ಯಾಪ್ ಕೆಲಸ ಮಾಡುತ್ತಿಲ್ಲ ಎಂದು 35 ಸಾವಿರ ಮಂದಿ ದೂರು ನೀಡಿದ್ದಾರೆ.
ಇದನ್ನೂ ಓದಿ:ದೆಹಲಿಗೆ ಹೊರಟ ಸಿದ್ದರಾಮಯ್ಯ: ಹೈಕಮಾಂಡ್ ಜೊತೆ ಮಹತ್ವದ ಚರ್ಚೆ
ಏನಿದು ಸಮಸ್ಯೆ? ಈ ಮೂರು ಸಾಮಾಜಿಕ ಜಾಲತಾಣಗಳು ಡೌನ್ ಆಗಲು ಡಿಎನ್‌ಎಸ್ ಸಮಸ್ಯೆಯೇ ಕಾರಣ ಎಂದು ನಾನಾ ವೆಬ್ ಸೈಟ್ ಗಳು ವರದಿ ಮಾಡಿವೆ. ಇದು ಒಂದು ರೀತಿ ಇಂಟರ್ನೆಟ್‌ಗೆ ಫೋನ್‌ಬುಕ್ ಇದ್ದಂತೆ. ಅಂದರೆ, ಬಳಕೆದಾರರು ಫೇಸ್‌ಬುಕ್.ಕಾಮ್ ಎಂದು ಟೈಪ್ ಮಾಡಿದರೆ, ಕಂಪ್ಯೂಟರ್ ಇದನ್ನು ಒಂದು ಐಪಿ ಅಡ್ರೆಸ್ ಆಗಿ ಪರಿವರ್ತಿಸಬೇಕು.
ಅಂದರೆ, ಅಲ್ಲಿ ಸಂಖ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತದೆ. ಆಗ ಫೇಸ್‌ಬುಕ್‌ನ ಡೇಟಾವನ್ನು ಆ್ಯಕ್ಸಸ್ ಮಾಡಿ ಫೇಸ್ ಬುಕ್ ಪುಟ ತೆರೆಯಲು ಸಹಾಯ ಮಾಡುತ್ತದೆ. ಈಗ ಫೇಸ್ ಬುಕ್ ನ ಸಿಸ್ಟಮ್ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಪೇಜ್ ಲೋಡ್ ಆಗುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ