ಮಣಿಪಾಲ: ಕೋವಿಡ್ ಪೀಡಿತ ವಿಶ್ವದ ರಾಷ್ಟ್ರಗಳ ಒತ್ತಾಯಕ್ಕೆ ಮಣಿದು ವೈರಸ್ ಮೂಲದ ತನಿಖೆಗೆ ಸಹಕಾರ ನೀಡಲು ಒಪ್ಪಿಕೊಂಡಿರುವ ಚೀನಾದ ನಿರ್ಧಾರದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಸಣ್ಣಮಾರಪ್ಪ. ಚಂಗಾವರ: ತನಿಖೆ ಆಗಲೇಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೇಶ ದೇಶಗಳ ಮಧ್ಯೆ ವೈರಸ್ ಯುದ್ಧ ಪ್ರಾರಂಭವಾಗಿ ಮಾನವ ಕುಲದ ನಾಶಕ್ಕೆ ನಾಂದಿಯಾಗಬಹುದು. ಇಲ್ಲಿ ಚೀನಾ ತಪ್ಪು ಮಾಡಿದೆಯೋ ಅಥವಾ ಇಲ್ಲವೋ ಯಾರಿಗೂ ಗೊತ್ತಿಲ್ಲ. ತನಿಖೆಯಿಂದ ಸತ್ಯ ಹೊರಬರಬೇಕು
ಚಂದ್ರಶೇಖರ್ ಸುನಗಡ: ಎಲ್ಲಾ ದೇಶಗಳು ರೋಗಿಷ್ಟ ದೇಶಗಳು ಆದ ಮೇಲೆ ತನ್ನ ರೋಗದ ತೀವ್ರತೆಯನ್ನು ಎಷ್ಟು ಪರಿಣಾಮಕಾರಿಯಾಗಿ ಹರಡಿಸಿದ ಮೇಲೆ ಬೇರೆ ಹಾಗೂ ತನ್ನ ದೇಶದವರ ಹೆಣಗಳನ್ನು ರಾಶಿಯ ಮೇಲೆ ನಿಮ್ಮಲ್ಲಿ ತನಿಖೆ ಮಾಡಿ ನಮ್ಮಲ್ಲಿನು ತನಿಖೆ ಮಾಡಲಿ ಅಂತ ಅವಕಾಶ ಸಹಕಾರ ಕೊಟ್ಟಿರಬಹುದು ಸಾವಿನ ಮನೆ ಚೀನಾ ದೇಶ
ವಿಶು ಕೆ ಶೆಟ್ಟಿ: ಎಲ್ಲಾ ಸಾಕ್ಷಿ ಗಳನ್ನು ಯಶಸ್ವಿಯಾಗಿ ನಾಶ ಮಾಡಿಯಾಗಿರ್ಬೇಕು. ಈಗ ತನಿಖೆಗೆ ರೆಡಿ ಇದ್ದಾರೆ
ಉಮೇಶ್ ಗಂಗಾ: ಕಳ್ಳ, ಮೋಸಗಾರ ಕೊಲೆಗಾರ ಯಾವತ್ತೂ ತನ್ನ ತಪ್ಪನ್ನ ಒಪ್ಪಿಕೊಳ್ಳಲ್ಲ, ಚೀನಾ ತನ್ನ ನರಿ ಬುದ್ದಿಯನ್ನ ತನಿಖೆ ದಿವಸ ಹೇಗೆ ಬೇಕೋ ಹಾಗೇ ಪ್ರೆಸಂಟ್ ಮಾಡುತ್ತೆ
ಗೋವಿಂದಪ್ಪ: ಸತ್ಯ ಯಾವತ್ತು ಹೊರಬರಲು ಸಾಧ್ಯವೇ ಇಲ್ಲ.ಇಡೀ ವಿಶ್ವಕ್ಕೆ ಬೆಂಕಿ ಇಟ್ಟು ಬಿಸಿ ಕಾಯಿಸಿಕೊಳ್ಳುತ್ತಿದೆ ಚೀನಾ.