Advertisement
ತೂಕ ಇಳಿಕೆ: ಕೀಟೊ ಪಥ್ಯಾಹಾರದಿಂದ ದೇಹತೂಕದಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ. ಇದರಿಂದ ರಕ್ತದೊತ್ತಡ ಇಳಿಕೆ, ಕೊಲೆಸ್ಟರಾಲ್ ಮಟ್ಟ ನಿಯಂತ್ರಣ, ರಕ್ತದಲ್ಲಿ ಸಕ್ಕರೆಯಂಶದ ಮೇಲೆ ನಿಯಂತ್ರಣದಂತಹ ಹೃದಯ ಆರೋಗ್ಯಕ್ಕೆ ಪೂರಕವಾದ ಅನುಕೂಲಗಳು ಆಗಬಹುದು.
Related Articles
Advertisement
ಪೌಷ್ಟಿಕಾಂಶ ಅಸಮತೋಲನ: ಕಿಟೊ ಪಥ್ಯಾಹಾರವು ಹಣ್ಣುಹಂಪಲು, ತರಕಾರಿಗಳು ಮತ್ತು ಇಡೀ ಧಾನ್ಯಗಳಂತಹ ಕಾಬೊìಹೈಡ್ರೇಟ್ ಸಮೃದ್ಧ ಆಹಾರವಸ್ತುಗಳ ಸೇವನೆಯ ಮೇಲೆ ನಿಯಂತ್ರಣ ವಿಧಿಸುತ್ತದೆ. ಈ ಆಹಾರವಸ್ತುಗಳು ಹೃದಯ ಆರೋಗ್ಯಕ್ಕೆ ಪೂರಕವಾದ ಖನಿಜ, ವಿಟಮಿನ್‌ಗಳು ಮತ್ತು ನಾರಿನಂಶದ ಪ್ರಮುಖ ಮೂಲಗಳಾಗಿವೆ. ಪೌಷ್ಟಿಕಾಂಶಗಳ ಅಸಮತೋಲನದಿಂದ ದೀರ್ಘಕಾಲೀನವಾಗಿ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು.
ಎಂಡೊಥೇಲಿಯಲ್ ಕಾರ್ಯಚಟುವಟಿಕೆಯ ಮೇಲೆ ಸಂಭಾವ್ಯ ಪರಿಣಾಮ: ಕಿಟೊ ಪಥ್ಯಾಹಾರದಿಂದ ರಕ್ತನಾಳಗಳ ಆರೋಗ್ಯಕ್ಕೆ ಸಂಬಂಧಿಸಿದ ಎಂಡೊಥೇಲಿಯಲ್ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಎಂಡೊಥೇಲಿಯಲ್ ಕಾರ್ಯಚಟುವಟಿಕೆಗಳಿಗೆ ಕುಂದು ಉಂಟಾಗುವುದು ಹೃದ್ರೋಗ ಬೆಳವಣಿಗೆ ಹೊಂದಲು ಪೂರಕ ಸನ್ನಿವೇಶವನ್ನು ನಿರ್ಮಿಸುತ್ತದೆ.
ದೀರ್ಘಕಾಲೀನ ಅಧ್ಯಯನ ಕಡಿಮೆ: ಕಿಟೊ ಪಥ್ಯಾಹಾರವು ಹೃದಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಇದುವರೆಗೆ ನಡೆದಿರುವ ಅಧ್ಯಯನಗಳು ತುಲನಾತ್ಮಕವಾಗಿ ಕಿರು ಅವಧಿಯವು. ದೀರ್ಘಕಾಲದಿಂದ ಕಿಟೊ ಪಥ್ಯಾಹಾರವನ್ನು ಅನುಸರಿಸಿದರೆ ಹೃದಯದ ಒಟ್ಟಾರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಬಲ್ಲವು ಎಂಬುದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ದೀರ್ಘಕಾಲೀನ ಅಧ್ಯಯನದ ಅಗತ್ಯವಿದೆ.
ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್ ಪಥ್ಯಾಹಾರದ ಪರಿಣಾಮಗಳು ಸಂಕೀರ್ಣವಾಗಿವೆ ಮತ್ತು ಅವುಗಳನ್ನು ಇನ್ನೂ ಸಮಗ್ರವಾಗಿ ಅರಿತುಕೊಳ್ಳಲು ಆಗಿಲ್ಲ. ತೂಕ ಇಳಿಕೆ, ಹೃದ್ರೋಗಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳು ದೂರವಾಗುವಂತಹ ಸಂಭಾವ್ಯ ಪ್ರಯೋಜನಗಳು ಇವೆಯಾದರೂ ಹೈ ಸ್ಯಾಚುರೇಟೆಡ್ ಕೊಬ್ಬಿನಂಶ ಹಾಗೂ ಪೌಷ್ಟಿಕಾಂಶ ಸಮತೋಲನ ಮತ್ತು ರಕ್ತನಾಳಗಳ ಕಾರ್ಯಚಟುವಟಿಕೆಗಳ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳು ಈ ಪಥ್ಯಾಹಾರದ ಋಣಾತ್ಮಕ ಅಂಶಗಳಾಗಿವೆ.
-ಡಾ| ಟಾಮ್ ದೇವಸ್ಯ,
ಪ್ರೊಫೆಸರ್ ಮತ್ತು ಯುನಿಟ್ ಹೆಡ್
ಕಾರ್ಡಿಯಾಲಜಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು)