ಹಿಂದಿಯ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಕೌನ್ ಬನೇಗಾ ಕರೋಡ್ ಪತಿಯ 11 ನೇ ಆವೃತಿಯಲ್ಲಿ ಕಳೆದ ವಾರ ಬಿಹಾರದ ಸನೋಜ್ ರಾಜ್ 1 ಕೋಟಿ ರೂಪಾಯಿ ಗೆದ್ದಿದ್ದರು. ಈಗ ಈ ಕಾರ್ಯಕ್ರಮದಲ್ಲಿ ಮತ್ತೊಬ್ಬರು 1 ಕೋಟಿ ಗೆದ್ದು 7 ಕೋಟಿ ಮೌಲ್ಯದ ಜಾಕ್ ಪಾಟ್ ಪ್ರಶ್ನೆಗೆ ಪ್ರಯತ್ನ ನಡೆಸಲಿದ್ದಾರೆ.
ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಬಿಸಿ ಊಟ ತಯಾರಿಸುವ ಕೆಲಸವನ್ನು ಮಾಡುವ ಬಬಿತಾ ತಾಡೆ ಕೆಬಿಸಿಯ 11 ನೇ ಆವೃತಿಯಲ್ಲಿ 1 ಕೋಟಿ ಗೆದ್ದ ಎರಡನೇ ಸ್ಪರ್ಧಿಯಾಗಿದ್ದಾರೆ. ಬಬಿತಾ ಅವರಿಗೆ ತಿಂಗಳಿಗೆ 1,500 ಸಾವಿರ ಸಂಬಳ. ಮಕ್ಕಳಿಗೆ ಕಿಚಡಿ ಮಾಡಿ ಕೊಡುವುದು ಅಂದರೆ ಅವರಿಗೆ ಪ್ರಿಯವಾದ ಕೆಲಸ ಅಂತೆ. ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಬಬಿತ ಅವರ ಕಥೆಯನ್ನು ಕೇಳುತ್ತಿದ್ದಾಗ ತಾವು ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತೀರಿ ಎಂದು ಕೇಳುತ್ತಾರೆ ಅದಕ್ಕೆ ಬಬಿತಾ ಕೊಟ್ಟ ಉತ್ತರ ಸ್ವಂತದ್ದೊಂದು ಮೊಬೈಲ್ ಕೊಂಡುಕೊಳ್ಳುತ್ತೇನೆ ಎಂದು.
ಬಬಿತಾ ಅವರ ಮನೆಯಲ್ಲಿ ಎಲ್ಲರೂ ಉಪಯೋಗಿಸಲು ಇರುವುದು ಒಂದೇ ಮೊಬೈಲ್ ಅಂತೆ. ಈ ವಿಷಯ ಕೇಳಿದ ಅಮಿತಾಭ್ ಕಾರ್ಯಕ್ರಮದಲ್ಲೇ ಅವರಿಗೆ ಮೊಬೈಲ್ ಫೋನ್ ಅನ್ನು ಉಡುಗೊರೆ ಆಗಿ ನೀಡಿದ್ದಾರೆ.
ಬಬಿತಾ 1 ಕೋಟಿಯ ಪ್ರಶ್ನೆಗೆ ಉತ್ತರ ಕೊಟ್ಟು ಕೋಟ್ಯಾಧಿಪತಿಯಾಗಿದ್ದಾರೆ. ಈ ಕಾರ್ಯಕ್ರಮದ ಈ ವಾರ ಬುಧವಾರ ಹಾಗೂ ಗುರುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
Related Articles