Advertisement
ಭೂಮಿ ಮೇಲೆ ನಡೆದಾಡುವ ಪ್ರಾಣಗಳಲ್ಲಿ ಕುದುರೆ ತುಂಬಾ ವೇಗಶಾಲಿ ಎಂದು ಹೆಸರು ಮಾಡಿದೆ. ವೇಗದ ವಿಚಾರ ಬಂದಾಗಲೆಲ್ಲಾ ಕುದುರೆಯನ್ನೇ ಉದಾಹರಿಸುತ್ತಾರೆ. ಆದರೆ ಇಲ್ಲೊಂದು ಜೀವಿ ಕುದುರೆಯನ್ನೂ ಹಿಂದೆ ಹಾಕಿ ಮುಂದೋಡಬಲ್ಲುದು. ಈ ಜೀವಿ ಪ್ರಾಣಿ ಅಲ್ಲ. ಹಾಗೆಂದ ಮಾತ್ರಕ್ಕೆ ಯಂತ್ರ ಅಂತ ಅಂದುಕೊಳ್ಳಬೇಕಿಲ್ಲ. ನಮ್ಮ ಮಾತಿನ ಅರ್ಥ ಪ್ರಾಣಿ ಅಲ್ಲ, ಪಕ್ಷಿ ಎಂದು. ಪಕ್ಷಿ ರೆಕ್ಕೆಯನ್ನು ಬಳಸಿ ಹಾರಿ ಗೆಲ್ಲುತ್ತದೆ ಅಂತಲೂ ತಿಳಿಯಬೇಡಿ. ಏಕೆಂದರೆ ಈ ಪಕ್ಷಿ ಹಾರುವುದೇ ಇಲ್ಲ. ಆಯವುದಪ್ಪಾ ಆ ಪಕ್ಷಿ ಅಂತ ಯೋಚಿಸುತ್ತಿದ್ದೀರಾ? ಆಸ್ಟ್ರಿಜ್. ಆಸ್ಟ್ರಿಚ್ ಮತ್ತು ಕುದುರೆ ನಡುವೆ ಸ್ಪರ್ಧೆ ಏರ್ಪಡಿಸಿದರೆ ಆಸ್ಟ್ರಿಚ್ ಖಂಡಿತ ಜಯಶಾಲಿಯಾಗುವುದು. ಸೃಷ್ಟಿ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆಯುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಆಸ್ಟ್ರಿಚ್ ವಿಷಯದಲ್ಲಿ ರೆಕ್ಕೆ ಕಿತ್ತುಕೊಂಡರೂ ವೇಗದ ಓಟವನ್ನು ದಯಪಾಲಿಸಿವೆ. ಅವುಗಳ ಕಾಲಿನ ಗಂಟಿನಲ್ಲಿ ಎಲಾಸ್ಟಿಕ್ ಗುಣದ ಸ್ನಾಯುಗಳಿರುವುದರಿಂದ ಆಸ್ಟ್ರಿಚ್‌ಗಳು ಅತ್ಯಂತ ವೇಗವಾಗಿ ಓಡಬಲ್ಲವು.
ಆನೆಗಳು ತಮ್ಮ ಗಾತ್ರದಿಂದ ಹೆದರಿಕೆಯನ್ನುಂಟು ಮಾಡುತ್ತವೆ. ಅವುಗಳು ಸಾಮಾನ್ಯವಾಗಿ ಯಾರ ತಂಟೆಗೆ ಹೋಗದೆ ಇದ್ದರೂ ಅವುಗಳ ಸೂಕ್ಷ್ಮ ಸ್ವಭಾವ ಯಾವ ಸಮಯದಲ್ಲಿ ಹೇಗೆ ತಿರುಗಿಕೊಳ್ಳುತ್ತದೆ ಎಂದು ಹೇಲುವುದು ಕಷ್ಟ. ಇವೆಲ್ಲದರಿಂದಾಗಿ ಕೆಲವರು ಅವುಗಳ ಸನಿಹ ಹೋಗಲು ಹಿಂಜರಿಯುತ್ತಾರೆ.
ಆದರೆ ದೈತ್ಯ ಆನೆಯನ್ನೇ ಹೆದರಿಸುವ ಜೀವಿಯೂ ಇದೆ ಎಂದರೆ ನಂಬುತ್ತೀರಾ? ಮನುಷ್ಯ ಅಂತ ಮಾತ್ರ ಹೇಳದಿರಿ. ಭೂಮಿ ಮೇಲಿನ ಎಲ್ಲಾ ಚರಾಚರ ಜೀವಿಗಳೂ ಮನುಷ್ಯನನ್ನು ಹೆದರಲೇಬೇಕು ಎನ್ನುವುದೇನೋ ನಿಜ. ಆದರೆ ಆನೆ ಈ ಜೀವಿಯನ್ನು ನೋಡುವುದಿರಲಿ, ಸದ್ದು ಕೇಳಿದ ತಕ್ಷಣ ಓಟ ಕೀಳುತ್ತದೆ. ಮತ್ಯಾವುದೂ ಅಲ್ಲ, ಜೀನು ನೊಣ. ಜೇನು ನೊಣಗಳ ಹಿಂಡಿನ ಸದ್ದು ಕೇಳುತ್ತಲೇ ಆನೆಗಳು ದಿಕ್ಕಾಪಾಲಾಗಿ ಓಡುತ್ತವೆ. ಹೀಗಾಗಿ ಆನೆಗಳ ಕಾಟ ಇರೋ ಪ್ರದೇಶಗಳಲ್ಲಿ ಅವುಗಳನ್ನು ಹಿಮ್ಮೆಟ್ಟಿಸಲು ಜೇನುನೊಣಗಳನ್ನು ಬಳಸಿಕೊಳ್ಳಬಹುದೆಂದು ಪರಿಸರ ವಿ5ಆನಿಗಳು ಉಪಾಯವನ್ನೂ ಮುಂದಿಟ್ಟಿದ್ದಾರೆ. ಈ ಪ್ರಾಣಿಯ ಸದ್ದು ಕೇಳಿದ್ದೀರಾ?
ಪ್ರಾಣಿಗಳು ಪಕ್ಷಿಗಳು ತಮ್ಮದೇ ಆದ ಧ್ವನಿಯನ್ನು ಹೊರಡಿಸುತ್ತವೆ. ಅದರ ಮುಖಾಂತರವೇ ಅವು ತಮ್ಮ ಸಹವರ್ತಿಗಳ ಜೊತೆ ಸಂವಹನವನ್ನೂ ನಡೆಸುತ್ತವೆ. ನಾವು ಝೂನಲ್ಲಿ, ಕಾಡಿನಲ್ಲಿ ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಾಣಿ ಪಕ್ಷಿಗಳ ಸದ್ದನ್ನು ಕೇಳಿಯೇ ಇರುತ್ತೇವೆ. ನಮ್ಮ ಪರಿಸರದಲ್ಲಿ ವಾಸಿಸದ ಪ್ರಾಣಿಗಳ ಸದ್ದನ್ನು ಟಿ.ವಿ. ಕಾರ್ಯಕ್ರಮಗಳ ಮೂಲಕ ಕೇಳಿರುತ್ತೇವೆ.
ಅಷ್ಟೇ ಏಕೆ ಸಮುದ್ರದಡಿ ತಿಮಿಂಗಿಲಗಲು ಹೊರಡಿಸುವ ತರಂಗಗಳ ಸದ್ದನ್ನೂ ಕೇಳಿರುತ್ತೀರಿ. ಆದರೆ ಸದ್ದನ್ನೇ ಕೇಳಿರದ ಪ್ರಾಣಿಯ ಹೆಸರೊಂದನ್ನು ಇಲ್ಲಿ ಹೇಳುತ್ತಿದ್ದೇವೆ. ನೀವೆಂದಾದರೂ ಜಿರಾಫೆಯ ದನಿಯನ್ನು ಕೇಳಿದ್ದೀರಾ? ಸಾಧ್ಯವೇ ಇಲ್ಲ. ಅಷ್ಟು ಖಚಿತವಾಗಿ ಏಕೆ ಹೇಳಬಲ್ಲೆವೆಂದರೆ ಜಿರಾಫೆಗೆ ಧ್ವನಿಪೆಟ್ಟಿಗೆ ಶಬ್ದ ಹೊರಡಿಸಲು ಸಮರ್ಥವಾಗಿಲ್ಲ ಎಂದು ವಿಜ್ಞಾನಿಗಳು ಕಂಡು ಹಿಡಿದ್ದಾರೆ. ಇನ್ನೊಂದು ವಾದದ ಪ್ರಕಾರ ಜಿರಾಫೆಗಳು ನಿರ್ದಿಷ್ಟ ತರಂಗಗಳ ಶಬ್ದವನ್ನು ಹೊರಡಿಸುತ್ತವೆ. ಅಂದರೆ ಅದು ಯಾರ ಕಿವಿಗೂ ಬೀಳುವುದಿಲ್ಲ.
Related Articles
Advertisement