Advertisement

ಕಂಪನಿ ಹೆಸರೇನು?

08:22 PM Sep 01, 2019 | Sriram |

ಕಂಪನಿ ಅಂದರೆ 1956ರ ಕಂಪನಿ ಕಾಯಿದೆಯ ವ್ಯಾಪ್ತಿಗೆ ಒಳಪಟ್ಟಂತೆ ನಿಗಮಿತ ಕಂಪನಿ. ಒಂದು ಕಂಪನಿಯನ್ನು ಸ್ಥಾಪಿಸುವುದಕ್ಕೆ ಮುಂಚೆ ಆ ಕಂಪನಿಗೆ ಹೆಸರೊಂದನ್ನು ಆರಿಸಿಕೊಳ್ಳಬೇಕು. ಒಂದೇ ಹೆಸರಲ್ಲ, ನಾಲ್ಕು ಹೆಸರುಗಳನ್ನು- ಈ ನಾಲ್ಕು ಹೆಸರುಗಳನ್ನು ನಿಮ್ಮ ಆದ್ಯತೆಯ ಕ್ರಮದಲ್ಲಿ ಸೂಚಿಸಿ- ಒಂದು ನಿಗದಿತ ನಮೂನೆಯಲ್ಲಿ ತುಂಬಿಸಿ, ಐನೂರು ರೂಪಾಯಿ ಶುಲ್ಕದೊಂದಿಗೆ, ಕಂಪನಿಗಳ ರಿಜಿಸ್ಟಾರ್‌ ಅವರ ಕಛೇರಿಗೆ ಕೊಡಬೇಕು. ನಿಮ್ಮ ಮೊದಲನೆಯ ಆದ್ಯತೆಯೆಂದು ತೋರಿಸಿದ ಹೆಸರಿನಲ್ಲಿ ಈಗಾಗಲೇ ಬೇರೆ ಯಾವ ಕಂಪನಿಯೂ ಭಾರತದಲ್ಲಿ ರಿಜಿಸ್ಟರ್‌ ಆಗಿರದಿದ್ದಲ್ಲಿ ಆ ಹೆರರನ್ನು ಅನುಮೋದನೆ ಮಾಡಿ ರಿಜಿಸ್ಟ್ರಾರ್‌ ಅವರ ಕಛೇರಿ ನಿಮಗೆ ತಿಳಿವಳಿಕೆ ಕೊಡುತ್ತದೆ. ನಾಲ್ಕೂ ಹೆಸರುಗಳು ಅದಕ್ಕೆ ಒಪ್ಪಿಗೆಯಾಗದಿದ್ದಲ್ಲಿ ಬೇರೆ ನಾಲ್ಕು ಹೆಸರುಗಳನ್ನು ಸೂಚಿಸಲು ನಮಗೆ ತಿಳಿಸುತ್ತದೆ.

Advertisement

ಎರಡನೆಯ ಬಾರಿಗೆ ಹೆಸರುಗಳನ್ನು ಸೂಚಿಸಲು ನೀವು ಪುನಃ ಶುಲ್ಕ ಕೊಡಬೇಕಾಗಿಲ್ಲ. ಅನುಮೋದನೆ ಮಾಡಿದ ಹೆಸರನ್ನು ನಿಮಗಾಗಿ ಮೂರು ತಿಂಗಳುಗಳ ಕಾಲ ಕಾದಿರಿಸಲಾಗುತ್ತದೆ. ಆ ಅವಧಿಯೊಳಗೆ ನಿಮ್ಮ ಕಂಪನಿಯನ್ನು ರಿಜಿಸ್ಟರ್‌ ಮಾಡಿಸಲು ಅರ್ಜಿ ಮತ್ತು ದಾಖಲೆಗಳನ್ನು ರಿಜಿಸ್ಟ್ರಾರ್‌ ಅವರಿಗೆ ಕೊಡಬೇಕು. ಅಚಾತುರ್ಯದಿಂದ ನಿಮ್ಮ ಕಂಪನಿಯ ಹೆಸರು ಆಗಲೇ ಅಸ್ತಿತ್ವದಲ್ಲಿರುವ ಇನ್ನೊಂದು ಕಂಪನಿಯ ಹೆಸರಾಗಿದ್ದರೆ, ಇಲ್ಲವೇ ಆ ಹೆಸರನ್ನು ಬಹುವಾಗಿ ಹೋಲುತ್ತಿದ್ದರೆ, ನಿಮ್ಮ ಕಂಪನಿಯು ಕೇಂದ್ರ ಸರ್ಕಾರದ ಪೂರ್ವ ಅನುನುಮತಿಯನ್ನು ಪಡೆದು, ಸಾಧಾರಣ ಠರಾವಿನಿಂದ ಹೆಸರು ಬದಲಾಯಿಸಿಕೊಳ್ಳಬಹುದು. ನೀವು ಹಾಗೆ ಬದಲಾಯಿಸದೇ ಇದ್ದಲ್ಲಿ, ಕೇಂದ್ರ ಸರ್ಕಾರವೇ ಹೆಸರು ಬದಲಾಯಿಸಲು ನಿಮ್ಮ ಕಂಪನಿಯ ರಿಜಿಸ್ಟರಾದ 12 ತಿಂಗಳುಗಳ ಒಳಗೆ ಸೂಚಿಸಬಹುದು. ಹಾಗೆ ಸೂಚಿಸಿದ 3 ತಿಂಗಳ ಒಳಗೆ ನೀವು ಕಂಪನಿಯ ಹೆಸರನ್ನು ಬದಲಾಯಿಸಬೇಕು.ತಪ್ಪಿದಲ್ಲಿ, ಕಂಪನಿ ಮತ್ತು ಅದರ ಎಲ್ಲಾ ಅಧಿಕಾರಿಗಳು ದಿನಕ್ಕೆ ನೂರು ರೂಪಾಯಿಯಂತೆ ದಂಡ ಕೊಡಬೇಕಾಗುತ್ತದೆ. ನಿಮ್ಮ ಕಂಪನಿಯ ಹೆಸರು ಏನೇ ಇರಲಿ. ಹೆಸರಿನ ಕಡೆಯಲ್ಲಿ “ಲಿಮಿಟೆಡ್‌’ ಎಂಬ ಪದ ಇರಲೇಬೇಕು. ಹಾಗೇನಾದರೂ “ಲಿಮಿಟೆಡ್‌’ ಪದವನ್ನು ಬಳಸದೆ ವ್ಯವಹರಿಸಿದಲ್ಲಿ ಕಂಪನಿಯ ಸಾಲಕ್ಕೆಲ್ಲಾ ಅದರ ನಿರ್ದೇಶಕರುಗಳು ವೈಯಕ್ತಿಕವಾಗಿ ಹೊಣೆಯಾಗಬೇಕಾಗುತ್ತದೆ.

ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next