Advertisement

ಕಾಂಗ್ರೆಸ್‌ ಸೋಲಿಗೆ ಕಾರಣವೇನು?

01:42 AM May 24, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು ಎಂಬ ಬಗ್ಗೆವಿಶ್ಲೇಷಣೆ, ಪಕ್ಷದೊಳಗೂ ಆತ್ಮಾವಲೋಕನ ಆರಂಭಗೊಂಡಿದೆ.

Advertisement

ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಪಾಲಿಗೆ ಕಾಂಗ್ರೆಸ್‌ನಲ್ಲಿ ಟಕೆಟ್‌ ಹಂಚಿಕೆ ಗೊಂದಲ ಮತ್ತು ಕೊನೆಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದು ಹಿನ್ನಡೆಗೆ ಮುಖ್ಯ ಕಾರಣಗಳಲ್ಲೊಂದು ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ದಿನಗಳಷ್ಟೇ ಬಾಕಿಯಿರುವಾಗ ಮಿಥುನ್‌ ರೈ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು.

ಇದರಿಂದಾಗಿ ಮಿಥುನ್‌ ರೈ ಅವರಿಗೆ ಚುನಾವಣಾ ಕಾರ್ಯತಂತ್ರ ರೂಪಿಸಲು ಹೆಚ್ಚಿನ ಕಾಲಾವಕಾಶ ದೊರಕಿರಲಿಲ್ಲ. ಜತೆಗೆ ಪ್ರಚಾರ ನಡೆಸುವುದಕ್ಕೆ ದೊರಕಿದ್ದು ಕೇವಲ 25 ದಿನ ಮಾತ್ರ. ಬಿಜೆಪಿಯಲ್ಲಿ ನಳಿನ್‌ ಅವರೇ ಅಭ್ಯರ್ಥಿ ಎಂಬುದು ಚುನಾವಣೆಗಿಂತ ವರ್ಷದ ಮೊದಲೇ ಬಹುತೇಕ ನಿರ್ಧಾರವಾಗಿ ಆ ದಿಕ್ಕಿನಲ್ಲಿ ಪಕ್ಷ ಸಂಘಟನೆಯತ್ತ ಜಿಲ್ಲಾ ನಾಯಕರು-ಕಾರ್ಯಕರ್ತರು ತೊಡಗಿಸಿಕೊಂಡಿದ್ದರು.

ಮತ್ತೂಂದೆಡೆ ಕಾಂಗ್ರೆಸ್‌ ಕಡೆಯಿಂದ ಈ ಬಾರಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಭಾವಿ ನಾಯಕರಾರೂ ಪ್ರಚಾರಕ್ಕೆ ಜಿಲ್ಲೆಗೆ ಬಂದಿರಲಿಲ್ಲ. ರಾಜ್ಯ ಮಟ್ಟದ ನಾಯಕರಾದ ಡಿಕೆಶಿ, ದಿನೇಶ್‌ ಗುಂಡೂರಾವ್‌, ಸಿ.ಎಂ. ಇಬ್ರಾಹಿಂ, ಡಾ| ಜಯಮಾಲಾ ಬಿಟ್ಟರೆ ಇನ್ನಿತರ ಪ್ರಮುಖ ನಾಯಕರು ಬಂದಿರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹೆಸರಿಗಷ್ಟೇ ಸುಳ್ಯದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಸ್ಟಾರ್‌ ಪ್ರಚಾರಕರಾಗಿ ಶತ್ರುಘ್ನ ಸಿನ್ಹಾ ಮಾತ್ರ ಮುಡಿಪಿನಲ್ಲಿ ಒಂದು ಪ್ರಚಾರ ಸಭೆಯಲ್ಲಿ ಭಾಗವಹಿಸಿ ತೆರಳಿದ್ದರು.

ಬಿಜೆಪಿ ಪರವಾಗಿ ಪ್ರಧಾನಿ ಮೋದಿಯವರೇ ಚುನಾವಣಾ ಪ್ರಚಾರ ನಡೆಸಿ ಆನೆಬಲ ತಂದಿದ್ದರು. ಮೋದಿ ಮೋಡಿಗೆ ಪ್ರತಿಯಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಭಾವಿ ನಾಯಕರನ್ನು ಜಿಲ್ಲೆಗೆ ಕರೆಸುವುದಕ್ಕೆ ಸಾಧ್ಯವಾಗಿರಲಿಲ್ಲ.
ಅಭ್ಯರ್ಥಿ ಆಯ್ಕೆ ವಿಳಂಬವಾದ ಪರಿಣಾಮ ಬೂತ್‌ ಮಟ್ಟದಲ್ಲಿಯೂ ಪರಿಣಾಮಕಾರಿಯಾಗಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್‌ಗೆ
ಸಾಧ್ಯವಾಗಿರಲಿಲ್ಲ. ಬಿಜೆಪಿಯು ತಳಮಟ್ಟದಲ್ಲಿಯೂ ಮೂರು ಸುತ್ತಿನ ಪ್ರಚಾರ ನಡೆಸಿತ್ತು. ಅದರಲ್ಲಿಯೂ ಬಿಜೆಪಿ ಶಾಸಕರನ್ನು ಹೊಂದಿರುವ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಆಯಾ ಶಾಸಕರೇ ಪ್ರಚಾರದ ಹೊಣೆ ಹೊತ್ತಿದ್ದರು.

Advertisement

ಈ ಎಲ್ಲ ಅಂಶಗಳ ಹೊರತಾಗಿ ಕ್ಷೇತ್ರದಲ್ಲಿ ಪ್ರಚಾರದ ವೇಳೆಯೂ ಜಿಲ್ಲೆಯ ಹಿರಿಯ ಮತ್ತು ಪ್ರಮುಖ ನಾಯಕರ ಅಸಹಕಾರ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಲಿನ ಮಾಜಿ ಶಾಸಕರು ಅಥವಾ ಹಿರಿಯ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೇ ವಿನಾ ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಚುನಾವಣೆ ಸಭೆಗಳಲ್ಲಿ ಅಥವಾ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಕೂಡ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗಿರಬಹುದು ಎನ್ನುವ ವಿಶ್ಲೇಷಣೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next