Advertisement
ಬಾಟ್ಲಾ ಹೌಸ್ ಎಂದರೇನು?ಬಾಟ್ಲಾ ಹೌಸ್ ಎನ್‌ಕೌಂಟರ್ ಎಂದರೆ ಉಗ್ರರು ಅಡಗಿದ್ದ ದಿಲ್ಲಿಯ ಜಾಮಿಯಾನಗರದ ಅಪಾರ್ಟ್‌ಮೆಂಟ್ (ಎಲ್ 18 ಬಾಟ್ಲಾ ಹೌಸ್).
ದಿಲ್ಲಿಯ ಇಂಡಿಯಾ ಗೇಟ್, ಕರೋಲ್ ಬಾಗ್ ಹಾಗೂ ಕನೌಟ್ ಬಳಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 36 ಮಂದಿ ಸಾವನ್ನಪ್ಪಿದ್ದು 133ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ದಿಲ್ಲಿ ಸಹಿತ ದೇಶದ ಎಲ್ಲ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಗಡಿ ರಸ್ತೆಗಳು ಸೇರಿದಂತೆ ದೇಶದ ಹಲವೆಡೆ ಪೊಲೀಸರು ನಾಕಾಬಂದಿ ಹಾಕಿ ತಪಾಸಣೆ ಆರಂಭಿಸಿದ್ದರು. ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ವಾರದ ಬಳಿಕ ಸುಳಿವು
ಬಾಂಬ್ ಸ್ಫೋಟ ನಡೆದ ವಾರದ ಬಳಿಕ ಅಂದರೆ ಸೆಪ್ಟಂಬರ್ 19ರಂದು ಜಾಮಿಯಾನಗರದ ಬಾಟ್ಲಾ ಹೌಸ್ ಅಪಾರ್ಟ್‌ಮೆಂಟ್ ಮನೆಯೊಂದರಲ್ಲಿ ಸರಣಿ ಬಾಂಬ್ ಸ್ಫೋಟದ ಆರೋಪಿಗಳು ಅಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಬಾಟ್ಲಾ ಹೌಸ್‌ಗೆ ಮುತ್ತಿಗೆ ಹಾಕಿದ ದಿಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಉಗ್ರರು ಕೂಡ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಹತರಾದರು. ಆದರೆ ಎನ್‌ಕೌಂಟರ್ ನಡೆಸಿದ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಉಗ್ರರ ದಾಳಿಗೆ ಹುತಾತ್ಮರಾದರು. ಇನ್ನಿಬ್ಬರು ಪೊಲೀಸ್ ಪೇದೆಗಳು ತೀವ್ರವಾಗಿ ಗಾಯಗೊಂಡರು. 3 ಉಗ್ರರು ತಪ್ಪಿಸಿಕೊಂಡಿದ್ದರು.
ನೇಪಾಲದಲ್ಲಿ ಬಂಧನ: ಎನ್‌ಕೌಂಟರ್ ಸಮಯದಲ್ಲಿ ತಪ್ಪಿಸಿಕೊಂಡ ಅರಿಜ್ ಖಾನ್ ಅಲಿಯಾಸ್ ಜುನೈದ್‌ನನ್ನು 2018ರಲ್ಲಿ ನೇಪಾಲದಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯವು ಸೆಕ್ಷನ್ 302, 307 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆ ವಿಧಿಸಿತು.