Advertisement

ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟೈರಿನ್ ಅನಿಲ…ಏನಿದು ಗೊತ್ತಾ?

08:29 AM May 08, 2020 | Nagendra Trasi |

ಮಣಿಪಾಲ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೈಜಾಗ್ ನಲ್ಲಿ ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಅನಿಲ ಸೋರಿಕೆಯಿಂದ ದೊಡ್ಡ ದುರಂತ ಸಂಭವಿಸಿದೆ. ಈ ಘಟಕದಲ್ಲಿ ವಿಷಾನಿಲ ಸ್ಟೈರಿನ್ (Styrene)ಅನಿಲ ಸೋರಿಕೆಯಾಗಿದೆ. ಈ ಅನಿಲ ಯಾವುದಕ್ಕೆ ಬಳಸುತ್ತಾರೆ, ಇದು ಎಷ್ಟೊಂದು ಅಪಾಯಕಾರಿ ಎಂಬ ಸಂಕ್ತಿಪ್ತ ವಿವರ ಓದಿ…

Advertisement

ಎಲ್ ಜಿ ಪಾಲಿಮರ್ಸ್ ಪ್ಲ್ಯಾಂಟ್ ನಲ್ಲಿ ವಿದ್ಯುತ್ ಫ್ಯಾನ್ ಬ್ಲೇಡ್ಸ್, ಕಪ್ಸ್ ಹಾಗೂ ಮೇಕಪ್ ಗೆ ಬೇಕಾಗುವ ಉತ್ಪನ್ನಗಳನ್ನು ತಯಾರಿಸುತ್ತಾರೆ. ಈ ಉತ್ಪನ್ನ ತಯಾರಿಸಲು ಪ್ಲ್ಯಾಂಟ್ ನಲ್ಲಿ ಸ್ಟಿರಿನ್ ಬಳಸುತ್ತಾರೆ. ಸ್ಟೈರಿನ್ ಸುಲಭವಾಗಿ ಹೊತ್ತಿ ಉರಿಯಬಲ್ಲ ಹಾಗೂ ಬೆಂಕಿ ಹಿಡಿದ ನಂತರ ಈ ಅನಿಲ ಅಪಾಯಕಾರಿ ವಿಷಾನಿಲವಾಗುತ್ತದೆ ಎಂದು ವರದಿ ವಿವರಿಸಿದೆ.

ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟೈರಿನ್ ಅನಿಲ ಬಳಸುತ್ತಾರೆ. ಫೈಬರ್ ಗ್ಲಾಸ್, ಪ್ಲಾಸ್ಟಿಕ್ ಕೊಳವೆ, ವಾಹನ ಭಾಗಗಳು, ಪ್ಲಾಸ್ಟಿಕ್ ಕುಡಿಯುವ ನೀರಿನ ಕಪ್ ಉತ್ಪಾದಿಸಲು ಈ ಸ್ಟೈರಿನ್ ಬಳಸುತ್ತಾರೆ. ಸ್ಟೈರಿನ್ ಬಣ್ಣರಹಿತವಾದ ದ್ರವವಾಗಿದೆ. ಇದು ಶೀಘ್ರವಾಗಿ ಆವಿಯಾಗುವ ಗುಣಹೊಂದಿದ್ದು, ಎಣ್ಣೆಯುಕ್ತ ದ್ರವರೂಪದಲ್ಲಿರುತ್ತದೆ.

ಸ್ಟೈರಿನ್ ಅನಿಲ ಎಷ್ಟು ಅಪಾಯಕಾರಿ ಗೊತ್ತಾ?
ಸ್ಟೈರಿನ್ ಅನಿಲ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. ಸ್ಟೈರಿನ್ ಅನಿಲದಿಂದ ಮನುಷ್ಯನ ಮೂತ್ರಪಿಂಡ, ಉಸಿರಾಟದ ತೊಂದರೆಗೆ ಕೂಡಲೇ ಕಾರಣವಾಗುತ್ತದೆ. ತಲೆನೋವು, ನಿಶ್ಯಕ್ತಿ, ವಾಂತಿ ಆರಂಭಗೊಳ್ಳುತ್ತದೆ. ಈ ಅನಿಲದ ಸಂಪರ್ಕಕ್ಕೆ ಬಂದ ಕೂಡಲ ಮನುಷ್ಯ, ಪ್ರಾಣಿ, ಪಕ್ಷಿ, ಹಾವುಗಳು ಸಾಯುತ್ತದೆ. ಮನುಷ್ಯನ ಜಠರ, ಶ್ವಾಸಕೋಶದ, ತಲೆಕೂದಲು ಉದುರುವುದು, ಮಾನಸಿಕ ಒತ್ತಡ, ನರಮಂಡಲದ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next