Advertisement
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಜೆಡಿಎಸ್ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೆಡಿಎಸ್ ನಲ್ಲಿದ್ದಾಗ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ್ರೀ, ಡಿಸಿಎಂ ಆಗಿದ್ರೀ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಟೀಕಿಸಿದರೆ ದೊಡ್ಡ ನಾಯಕನಾಗುತ್ತೇನೆಂದು ಸಚಿವ ಅಶ್ವತ್ಥ ನಾರಾಯಣ್ , ಆರ್.ಅಶೋಕ್ ಗೆ ಪರ್ಯಾಯವಾಗಿ ನಾಯಕನಾಗುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
Related Articles
Advertisement
ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರನ್ನು ಓವರ್ ಟೇಕ್ ಮಾಡಿ ಒಕ್ಕಲಿಗ ಸಮಾಜದ ಲೀಡರ್ ಎಂದು ತೋರಿಸಿಕೊಳ್ಳಲು ಹೊರಟಿದ್ದೀರಾ ? ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ ನಾಯಕರು ಎಷ್ಟು ಕಾರಣವೋ ನೀವು ಅಷ್ಟೇ ಮುಖ್ಯ. ರಾಜಕಾರಣದಲ್ಲಿ ನೂರಕ್ಕೆ ನೂರು ಯಾರೂ ಸರಿ ಇಲ್ಲ. ನನ್ನನ್ನೂ ಸೇರಿದಂತೆ ಯಾರೂ ಸರಿಯಿಲ್ಲ.ಕುಮಾರಸ್ವಾಮಿ ಏನು, ನೀನೇನು ಅನ್ನೋದು ರಾಜ್ಯದ ಜನಕ್ಕೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷದವರು ಪ್ರಾದೇಶಿಕ ಪಕ್ಷ ಇರಬಾರದು ಎಂದು ಏನೇನು ಮಾಡಿದ್ದೀರಿ ಅನ್ನೋದು ನಮಗೂ ಗೊತ್ತಿದೆ ಎಂದರು.
ಮನೆಗಳು ಕುಸಿದರೂ ಎಷ್ಟು ಜನಕ್ಕೆ ಪರಿಹಾರ ಸಿಕ್ಕಿದೆ.100 ಕೋಟಿ ರೂಪಾಯಿ ಸಾಲ ಮನ್ನಾ ಅನುದಾನ ಬಿಡುಗಡೆ ಆಗಿದ್ದರೂ ರೈತರಿಗೆ ಹಣ ತಲುಪಿಲ್ಲ. ನಾವು ಇದೆಲ್ಲವನ್ನೂ ಮಾತನಾಡುತ್ತಿದ್ದೀವಾ ?ಉನ್ನತ ಶಿಕ್ಷಣ ಸಚಿವರಾಗಿ ಇದೇನಾ ನಿಮ್ಮ ಸಂಸ್ಕಾರ ?ಟೀಕೆ ಮಾಡಬೇಡಿ ಎಂದು ಹೇಳಲ್ಲ. ಟೀಕೆ, ಭಾಷೆ ಮಾದರಿಯಾಗಿರಬೇಕು ಎಂದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಹಲವು ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಆರೋಪದ ತನಿಖೆಯ ಭಾಗವಾಗಿ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಆ.19 ರಂದು ಬೆಳಗ್ಗೆ 11.30ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸುತ್ತೇನೆ.ತಾವೇ ತಪ್ಪು ಮಾಡಿ ಮೈಸೂರು ಜನರನ್ನು ಅನಗತ್ಯವಾಗಿ ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆಯಾಗಿದೆ. ಸತ್ಯ ಮೇವ ಜಯತೇ ಎನ್ನುವ ಮಾತು ಈಗ ನಿಜವಾಗಿದೆ. ಇಷ್ಟೊತ್ತಿಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ಸಸ್ಪೆಂಡ್ ಮಾಡಬೇಕಾಗಿತ್ತು. ಈಗಲಾದರೂ ತನಿಖೆ ಚುರುಕುಗೊಂಡಿರುವುದು ಸಂತೋಷ ಎಂದರು.
ಎಸಿಬಿ ರದ್ದುಗೊಳಿಸಿ ಲೋಕಾಯುಕ್ಕೆ ಮಾನ್ಯತೆ ನೀಡಿರುವ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ.ಲೋಕಾಯುಕ್ತಕ್ಕೆ ಕೇವಲ ಮಾನ್ಯತೆ ಕೊಟ್ಟಿರುವುದು ಪೂರ್ಣ ಸಮಾಧಾನ ತಂದಿಲ್ಲ. ಲೋಕಾಯುಕ್ತಕ್ಕೆ ಪರಿಣಾಮಕಾರಿ ಆಗಿರುವ ಅಧಿಕಾರಿಗಳನ್ನು ನೇಮಕ ಮಾಡುವ ಅಗತ್ಯವಿದೆ ಎಂದರು.