Advertisement

ನಮ್ಮ ಕಾಲಂ: ಯಾವುದು ಸ್ವಾವಲಂಬನೆಯ ಬದುಕು?

04:17 PM Aug 30, 2020 | Karthik A |

ಪ್ರೀತಿ, ನಂಬಿಕೆ, ಜೀವನ ನಡೆಸಲು ಬೇಕಾದ ಪ್ರಮುಖ ಅಂಶಗಳು.

Advertisement

ಅದರ ಜತೆಗೆ ಸ್ವಾಲಂಬನೆಯೂ ಕೂಡ ತುಂಬಾ ಮುಖ್ಯ. ಜೀವನ ಎಲ್ಲರದ್ದೂ ಬೇರೆ ಬೇರೆ ರೀತಿ ಇರುತ್ತದೆ.

ಅದು ಉತ್ತಮವಾಗುವುದು ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ನಿಂತಿದೆ. ಸ್ವಾವಲಂಬನೆ ಅದಕ್ಕೆ ಅಡಿಪಾಯ.

ಯಾರಹತ್ತಿರ ಕೇಳದಿದ್ದರೂ ಬೇಡಿಕೆಗಳ ಪಟ್ಟಿಯನ್ನು ಇಟ್ಟು ದೇವರ ಎದುರಿಗೆ ಇಡುತ್ತೇವೆ. ಅದೊಂದು ರೀತಿಯ ನೆಮ್ಮದಿಗೆ ಸಹಾಯವಾಗುತ್ತದೆ. ಅಥವಾ ನಮ್ಮ ಬೇಡಿಕೆಗಳ ಬಗ್ಗೆ ನಮ್ಮಗೆ ಸ್ಪಷ್ಟ ನಿರ್ಧಾರ ಮೂಡಿ ಅದನ್ನು ಪಡೆಯುವ ಹಾದಿ ನಮಗೆ ತಿಳಿಯುವಂತಾಗುತ್ತದೆ.

ದೈಹಿಕವಾಗಿ, ಮಾನಸಿಕವಾಗಿ ನ್ಯೂನತೆಗಳನ್ನು ಹೊಂದಿರುವವರು ಕೆಲವೊಂದು ಬಾರಿ ಮತ್ತೂಬ್ಬರನ್ನು ಅವಲಂಬಿಸಬೇಕಾಗುತ್ತದೆ. ಅವರಲ್ಲೂ ಸ್ವಾವಲಂಬಿಯಾಗಿ ಬದುಕುವ ಆಸೆಗಳಿರುತ್ತವೆ. ಕೆಲವೊಬ್ಬರು ಅದನ್ನು ಸಾಕಾರಗೊಳಿಸುತ್ತಾರೆ ಕೂಡ. ಆದರೆ ಅವಲಂಬನೆ ನಮ್ಮ ಸ್ವಾರ್ಥಕ್ಕೆ ಉಪಯೋಗವಾಗಬಾರದು. ಅಗತ್ಯ ವಿಷಯಗಳಿಗೆ ಮಾತ್ರ ಮತ್ತೂಬ್ಬರ ಬಳಿ ಸಹಾಯ ಯಾಚಿಸುವುದನ್ನು ರೂಢಿಸಿಕೊಳ್ಳಬೇಕು.

Advertisement

ನಾನು ನೋಡಿದ ಘಟನೆಯನ್ನು ವಿವರಿಸುತ್ತೇನೆ. ಒಮ್ಮೆ ಬಸ್‌ನಲ್ಲಿ ಒಬ್ಬ ಮದ್ಯ ವಯಸ್ಸಿನ ಕುರುಡ ಬಂದು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ತೆಗೆದುಕೊಂಡು ಹೋದ. ಪಾಪ ಕುರುಡ ಕೆಲಸವಾದರು ಯಾರು ಕೊಡುತ್ತಾರೆ ಎಂದು ಯೋಚನೆ ಬಂತು. ಆದರೆ ಮತ್ತೂಂದು ಕಡೆಯಲ್ಲಿ ಕುರುಡನೋರ್ವ ದಿನದ ಆದಾಯಕ್ಕಾಗಿ ಕುರುಕಲು ತಿಂಡಿಗಳನ್ನು ಮಾರುತ್ತಿದ್ದ. ಇಬ್ಬರೂ ಕುರುಡರೇ ಆದರೆ ಅವರು ಜೀವನ ನಡೆಸಲು ಆಯ್ಕೆ ಮಾಡಿಕೊಂಡ ದಾರಿಗಳು ವಿಭಿನ್ನವಾಗಿದೆ.

ಒಬ್ಬನು ಅವನಿಗೆ ಇರುವ ಕುರುಡುತನ ಎಂಬ ನ್ಯೂನತೆಯನ್ನು ಅನಿವಾರ್ಯವಾಗಿ ಪರಿವರ್ತಿಸಿಕೊಂಡಿದ್ದಾನೆ. ಇನ್ನೊಬ್ಬ ಅವನಿಗಿರುವ ನ್ಯೂನತೆಯನ್ನು ಸ್ವಾವಲಂಬಿಯಾಗಿ ಮೆಟ್ಟಿ ನಿಂತು ಜೀವನ ನಡೆಸುತ್ತಿದ್ದಾನೆ. ನಮಗಿರುವ ಸಮಸ್ಯೆಗಳಿಗೆ ಸ್ವತಂತ್ರ ಮನೋಭಾವ, ಸ್ವಾವಲಂಬನೆಯ ಚಿಂತನೆಗಳೇ ಪರಿಹಾರ.

 ಶಿವಲೀಲಾ ಗೊಳ್ಳಗಿ, ಎಸ್‌ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ  ಮಹಾವಿದ್ಯಾಲಯ ವಿಜಯಪುರ 

 

Advertisement

Udayavani is now on Telegram. Click here to join our channel and stay updated with the latest news.

Next