Advertisement
“ಸಿಯಾಟಿಕಾ’ ಎಂಬುದು ಸಿಯಾಟಿಕ್ ನರದ ಜಾಲದಲ್ಲಿ ಕಾಣಿಸಿಕೊಳ್ಳುವ ಯಾವುದೇ ನೋವನ್ನು ವಿವರಿಸಲು ಉಪಯೋಗಿಸುವ ಸ್ಥೂಲ ಪದವಾಗಿದೆ. ಈ ನರ ಹರಡಿರುವ ಯಾವುದೇ ಕಡೆ ಅದಕ್ಕೆ ತೊಂದರೆ ಉಂಟಾದರೆ “ವಿದ್ಯುತ್ ಶಾಕ್’ನಂತಹ, “ಚುಚ್ಚಿದಂತಹ’, “ಸೆಳೆತದಂತಹ’ ಅಥವಾ “ಕಚಗುಳಿ ಇರಿಸಿದಂತಹ’ ಅನುಭವ ಉಂಟಾಗಬಹುದಾಗಿದ್ದು, ಇದು ಕೆಮ್ಮು, ದೇಹ ಬಾಗಿಸುವುದು, ತಿರುಚುವುದು ಅಥವಾ ಶ್ರಮದಂತಹ ಕ್ರಿಯೆಗಳಿಂದ ಉಲ್ಬಣಿಸಬಹುದಾಗಿದೆ.
Related Articles
Advertisement
ಸ್ನಾಯುಗಳು ಮತ್ತು ಬೆನ್ನಿನ ಸಂಧಿಗಳಿಂದ ಉಂಟಾಗುವ ಅನೇಕ ನೋವುಗಳು ಸಿಯಾಟಿಕಾದಂತೆಯೇ ಭಾಸವಾಗುತ್ತವೆ. ಉದಾಹರಣೆಗೆ, ಫೇಸೆಟ್ ಮತ್ತು ಸಾಕ್ರೊಲಿಕ್ ಸಂಧಿಗಳು, ಇವುಗಳಲ್ಲಿ ಪ್ರತಿಯೊಂದರಲ್ಲಿಯೂ ಬೆನ್ನಿನಿಂದ ಆರಂಭವಾಗಿ ತೊಡೆಯ ತನಕ ನೋವು ಹರಡಬಹುದು. ಆದರೆ ಸಿಯಾಟಿಕಾ ಎಂಬುದು ನಿರ್ದಿಷ್ಟವಾಗಿ ಕಾಲಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ನೋವಾಗಿದ್ದು, ಬೆನ್ನಿಗೆ ಹೆಚ್ಚು ಸಂಬಂಧಪಟ್ಟಿಲ್ಲ.
ಅಪಾಯ ಅಂಶಗಳೇನು?
ವಯಸ್ಸು, ಬೊಜ್ಜು ಮತ್ತು ಇವುಗಳ ಜತೆಗೆ ದೇಹದ ಮೂಲ ಸಾಮರ್ಥ್ಯ ದುರ್ಬಲವಾಗಿರುವುದು, ಕಳಪೆ ದೇಹಭಂಗಿಗಳು, ಅಸಮರ್ಪಕ ಭಾರ ಎತ್ತುವ ವಿಧಾನಗಳು, ಕೆಲವು ನಿರ್ದಿಷ್ಟ ವೃತ್ತಿಗಳು ಮತ್ತು ಗರ್ಭ ಧಾರಣೆ ಸಿಯಾಟಿಕಾ ನೋವು ಉಂಟಾಗುವುದಕ್ಕೆ ಪೂರಕವಾಗಬಹುದು.
ಸಿಯಾಟಿಕಾವನ್ನು ತಡೆಯುವುದು ಹೇಗೆ?
ದೇಹಭಂಗಿ, ಭಾರ ಎತ್ತುವ ವಿಧಾನಗಳು ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು, ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಪ್ಲಾಂಕ್ಸ್, ಸೂಪರ್‌ಮ್ಯಾನ್‌ನಂತಹ ವ್ಯಾಯಾಮ ತಂತ್ರಗಳು ಅಥವಾ ಯೋಗದಿಂದ ದೇಹಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.
ಗರ್ಭಧಾರಣೆಯ ಅವಧಿಯಲ್ಲಿ ದೇಹದ ಗುರುತ್ವಾಕರ್ಷಣೆಯ ಕೇಂದ್ರ ಬದಲಾಗುವುದು, ಮೂಲ ಸ್ನಾಯುಗಳು ವಿಸ್ತರಿಸಿ ದುರ್ಬಲವಾಗುವುದು, ಲಿಗಮೆಂಟಸ್ ಆಧಾರ ಮತ್ತು ಬೆನ್ನುಮೂಳೆಯ ಮೇಲೆ ಭಾರ ಹೆಚ್ಚುವುದರಿಂದ ಸಿಯಾಟಿಕಾ ಉಂಟಾಗುವುದಕ್ಕೆ ಪೂರಕವಾಗಬಹುದು.
ಗರ್ಭಧಾರಣೆಗೆ ಮುನ್ನ ಮತ್ತು ಗರ್ಭ ಧರಿಸಿದ ಆರಂಭಿಕ ಅವಧಿಯಲ್ಲಿ ಸರಿಯಾದ ದೇಹ ಸದೃಢತೆಯನ್ನು ಕಾಪಾಡಿಕೊಳ್ಳುವುದು, ಸರಿಯಾದ ದೇಹತೂಕ ನಿರ್ವಹಣೆ ಮತ್ತು ಗರ್ಭಧಾರಣೆಯ ಅವಧಿಯಲ್ಲಿ ಮಾಡಬಹುದಾದ ಯೋಗಾಸನಗಳ ಅಭ್ಯಾಸ ಈ ಅವಧಿಯಲ್ಲಿ ಸಿಯಾಟಿಕಾ ತಡೆಗಟ್ಟಲು ಉತ್ತಮ ಮಾರ್ಗಗಳು.
ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ)
ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್ ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ. ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ) ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್‌ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ.
ಪರೀಕ್ಷೆ ಹೇಗೆ?
ಅನಾರೋಗ್ಯದ ಹಿನ್ನೆಲೆ, ಮಾಹಿತಿಯನ್ನು ವಿವರವಾಗಿ ಕಲೆಹಾಕುವುದು ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ತಪಾಸಣೆ ಮಾಡಲಾಗುತ್ತದೆ. ಎಕ್ಸ್‌ರೇಗಳು, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ರೋಗಪತ್ತೆಗೆ ಸಹಕರಿಸುತ್ತವೆ. ಆದರೆ ಇವು ಸ್ಥಿರ ಚಿತ್ರಣ ತಂತ್ರಜ್ಞಾನಗಳಾದ ಕಾರಣ ಭಂಗಿ ಸಂಬಂಧಿಯಾದ ಮೌಲ್ಯಾತ್ಮಕ ಮತ್ತು ಪ್ರಮಾಣಾತ್ಮಕ ವಿವರಗಳನ್ನು ಒದಗಿಸಲು ವಿಫಲವಾಗುತ್ತವೆ. ವ್ಯಕ್ತಿಯ “ನೋವು ಸೃಷ್ಟಿಯ ಮೂಲ’ ಮತ್ತು ಇತರ ಸಂಭಾವ್ಯ ಕಾರಣಗಳನ್ನು ಪ್ರತ್ಯೇಕಿಸಿ ಗುರುತಿಸುವ ಕಾರ್ಯವನ್ನು ಪೈನ್ ಮೆಡಿಸಿನ್ ಸ್ಪೆಶಲಿಸ್ಟ್ ಮತ್ತು ಆರ್ಥೊ -ಸ್ಪೈನ್ ಸ್ಪೆಶಲಿಸ್ಟ್‌ಗಳು ತಮ್ಮ ನೈಪುಣ್ಯದಿಂದ ಮಾಡುತ್ತಾರೆ.