Advertisement

ಹಿಜಾಬ್ ವಿವಾದಕ್ಕೂ ಪಂಚರಾಜ್ಯ ಚುನಾವಣೆಗೂ ಏನು ಸಂಬಂಧ: ನಳಿನ್ ಕುಮಾರ್ ಕಟೀಲ್

01:18 PM Feb 15, 2022 | Team Udayavani |

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಗೂ ಹಿಜಾಬ್ ಅರ್ಜಿದಾರರಿಗೂ ಏನು ಸಂಬಂಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ‌.

Advertisement

ಇದನ್ನೂ ಓದಿ:ರಷ್ಯಾ-ಉಕ್ರೇನ್ ನಡುವೆ ಯುದ್ಧಕ್ಕೆ ಕ್ಷಣಗಣನೆ? ಕೂಡಲೇ ಉಕ್ರೇನ್ ಬಿಟ್ಟು ಹೊರಡಿ…ಭಾರತ ಕಳವಳ

ಈ ಸಂಬಂಧ ಟ್ವೀಟ್ ಮಾಡಿರುವ ಅವರು ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಿಜಾಬ್ ವಿವಾದದ ವಿಚಾರಣೆಯನ್ನು ಫೆ.28ರ ವರೆಗೆ ಮುಂದೂಡುವಂತೆ ವಿದ್ಯಾರ್ಥಿಗಳ ಪರ ವಕೀಲರು ಈಗ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ಹಿಂದಿರುವ ಶಕ್ತಿಗಳು ಯಾರು ?
ಹಿಜಾಬ್ ಗೂ ಪಂಚರಾಜ್ಯಗಳ ಚುನಾವಣೆಗೂ ಏನು ಸಂಬಂಧ ? ಎಂದು ಪ್ರಶ್ನಿಸಿದ್ದಾರೆ. ವಿಚಾರಣೆ ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರು ಅಪ್ರಾಪ್ತರು. ಈ ಅಪ್ರಾಪ್ತ ವಿದ್ಯಾರ್ಥಿನಿಯರು ಹಿಜಾಬ್ ವಿವಾದವನ್ನು ಪಂಚರಾಜ್ಯಗಳ ಚುನಾವಣೆ ಗೆ ಥಳುಕು ಹಾಕುತ್ತಿದ್ದಾರೆ ಎಂದರೆ ಅರ್ಥವೇನು ?

ಈ ವಿದ್ಯಾರ್ಥಿನಿಯರು ಬೇರೆಯವರ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಗಳು ಎಂದು ಅರ್ಥವಲ್ಲವೇ ? ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ.

Advertisement

ಕಾಂಗ್ರೆಸ್ ಈ ವ್ಯೂಹದ ಮೆದುಳು. ಎಸ್ ಡಿಪಿಐ ಅದರ ದೇಹ.ಮೂಲಭೂತವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ವ್ಯವಸ್ಥಿತ ಸಂಚು. ಹಿಜಾಬ್ ವಿವಾದ ಸಂಬಂಧ ವಿದ್ಯಾರ್ಥಿನಿಯರ ಪರ ವಾದ ಮಾಡುತ್ತಿರುವ ವಕೀಲರ ಪೈಕಿ‌ ಒಬ್ಬರು ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನ್ಯಾಯವಾದಿಗಳ ಸಮಿತಿ ಅಧ್ಯಕ್ಷರು. ಈಗ ಈ ವಿವಾದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡುತ್ತಿದೆ ಎಂದರೆ ಇದೊಂದು ಕಾಂಗ್ರೆಸ್ ಪ್ರೇರಿತ ‘ಟೂಲ್ ಕಿಟ್’ ಭಾಗವಲ್ಲವೇ ? ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next