Advertisement
ತಾಲೂಕಿನ ತೋರಣಗಲ್ಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಆಯೋಜಿಸಿದ್ದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದೆ 371(ಜೆ) ತರಲು ವಿರೋಧಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅದನ್ನು ಜಾರಿಗೊಳಿಸಿತು.
Related Articles
Advertisement
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾತನಾಡಿ, ಎಲ್ಲಿ ಹೋದರೂ ನಾನು ವಾಲ್ಮೀಕಿ ಎನ್ನುತ್ತೀರಿ, ಉಗ್ರಪ್ಪ, ತುಕಾರಾಂ ವಾಲ್ಮೀಕಿಯಲ್ಲವೇ. ವಾಲ್ಮೀಕಿ ಸಮುದಾಯದಲ್ಲಿ ಯಾವ ವ್ಯಕ್ತಿಯನ್ನು ಬೆಳೆಯಲು ಬಿಟ್ಟಿದ್ದೀರಿ. ಅಧಿಕಾರಕ್ಕಾಗಿ ಹಲವಾರು ಬಾರಿ ರಾಜೀನಾಮೆ ನೀಡಿದ್ದೀರಿ. ನೀವು ನೀಡಿದ ರಾಜೀನಾಮೆ ಸ್ಥಳೀಯರಿಗೆ ಉದ್ಯೋಗ ಕೊಡಿಸಲು, ತುಂಗಭದ್ರಾ ನದಿಯ ಹೂಳೆತ್ತಲೋ, ರಸ್ತೆ ನಿರ್ಮಿಸಲೊ, ರೈತರ ಸಾಲಮನ್ನಾಕ್ಕಾಗಿಯೋ ಹೇಳಿ, ಯಾವುದಕ್ಕೆ ರಾಜೀನಾಮೆ ನೀಡಿದ್ದೀರಿ. ಬರೀ ರಾಜಕೀಯ ಲಾಭಕ್ಕಾಗಿ ಎಂದು ಕುಟುಕಿದರು.
ಆದರೆ ನಿಜವಾದ ವಾಲ್ಮೀಕಿಗಳಾದ ನಾವು ಸಂವಿಧಾನಬದ್ದ ಹಕ್ಕುಗಳನ್ನು ವಾಲ್ಮೀಕಿ ಸಮಾಜಕ್ಕೆ ಕೊಡಿಸಿದ್ದೇವೆ. ಬೆಂಗಳೂರಿನಲ್ಲಿ 2.5 ಎಕರೆ ಭೂಮಿಯಲ್ಲಿ ವನ ಸ್ಥಾಪಿಸಿದ್ದೇವೆ. ವಿಧಾನಸೌಧದ ಮುಂದೆ ವಾಲ್ಮೀಕಿ ಪುತ್ಥಳಿ ಸ್ಥಾಪಿಸಿದ್ದೇವೆ. ನೂರಾರು ಸಮಾಜದ ನಾಯಕರನ್ನು ಬೆಳೆಸಿದ್ದೇವೆ. ಆದರೆ ನೀವು ಮಾಡಿದ್ದೇನು. ಬರೀ ಕುಟುಂಬದ ಸದಸ್ಯರೇ ಸ್ಪರ್ಧಿಸಬೇಕು. ನಮ್ಮ ಕೈಯಲ್ಲಿಯೇ ಇರಬೇಕು ಎನ್ನುದು. ಆದರೆ ವಾಲ್ಮೀಕಿ ಹೇಳಿದ್ದು ಸಮಪಾಲು, ಸಮಬಾಳು, ವರ್ಗರಹಿತ, ವರ್ಣರಹಿತ, ಜಾತಿ ರಹಿತ ಸಮಾನತೆಯ ರಾಮರಾಜ್ಯ ಅಂತಹ ಕೆಲಸ ಮಾಡುವವರು ನಾವು ನಿಜವಾದ ವಾಲ್ಮೀಕಿಗಳು ಎಂದು ಜಾತಿ ರಾಜಕಾರಣ ಟೀಕಿಸುವ ಮೂಲಕ ಟಾಂಕ್ ನೀಡಿದರು.
ಶಾಸಕ ಈ.ತುಕಾರಾಂ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಶಿವಪ್ಪ, ಮಾಜಿ ಸಚಿವ ಅಮರೇಗೌಡ ಬೈಯಾಪುರ, ಡಿಸಿಸಿ ಅಧ್ಯಕ್ಷ ಶಿವಯೋಗಿ, ಕೆ.ಎಸ್.ಎಲ್. ಸ್ವಾಮಿ, ಸಿರಾಜ್‌ಶೇಖ್, ಆಶಾಲತಾ ಸೊಮಪ್ಪ, ಸತೀಶ್, ಏಕಾಂಬರಪ್ಪ ಇನ್ನಿತರರಿದ್ದರು.