Advertisement
ಕಳೆದ ಒಂದು ವಾರದಿಂದ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಈ ಮೊದಲು ನಿತ್ಯ 15 ರಿಂದ 20 ವಾಹನಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದವು. ಈಗ 80 ರಿಂದ 100 ವಾಹನಗಳು ನಮ್ಮಲ್ಲಿಗೆ ಪ್ರಮಾಣಪತ್ರಕ್ಕಾಗಿ ಬರುತ್ತಿವೆ. ಒಂದು ವಾಹ ನದ ಪರೀಕ್ಷೆಗೆ 5 ರಿಂದ 10 ನಿಮಿಷ ಆಗುತ್ತದೆ. ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ ಎಂದು ಬಸವೇಶ್ವರ ನಗರದ ಕೃಪಾನಿಕೇತನ ಸರ್ವೀಸ್ ಸ್ಟೇಷನ್ ಮತ್ತು ವಾಯುಮಾಲಿನ್ಯ ತಪಾಸಣೆ ಕೇಂದ್ರದ ಗಣೇಶ್ ಹೇಳುತ್ತಾ ರೆ.
ಎಲ್ಲ 1,022 ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿಗೂ ಸಾರಿಗೆ ಇಲಾಖೆಯೇ ದರ ನಿಗದಿಪಡಿಸಿರುತ್ತದೆ. ಅದರಂತೆ ದ್ವಿಚಕ್ರ ವಾಹನಗಳಿಗೆ 50 ರೂ., ಮೂರು ಚಕ್ರದ ವಾಹನಗಳಿಗೆ 60 ರೂ., ನಾಲ್ಕು ಚಕ್ರದ ವಾಹನ ಗಳಿಗೆ 75 ರೂ. ಹಾಗೂ ಭಾರೀ ವಾಹನಗಳಿಗೆ 120 ರೂ. ನಿಗದಿಪಡಿಸಲಾಗಿದೆ. ಈ ಕೇಂದ್ರ ಗಳು ಬೇಡಿಕೆ ಹೆಚ್ಚಿದೆಯೆಂದು ಬೇಕಾಬಿಟ್ಟಿ ವಸೂಲಿ ಮಾಡುವಂತಿಲ್ಲ. ಹಾಗೊಂದು ವೇಳೆ ಈ ನಿಯಮ ಉಲ್ಲಂ ಸಿದ್ದು ಕಂಡುಬಂದರೆ, ಅಂತಹ ಕೇಂದ್ರಗಳ ಪರವಾನಗಿಯನ್ನು ಅಮಾನತಿನಲ್ಲಿ ಇಡಲಿಕ್ಕೂ ಸಾರಿಗೆ ಇಲಾಖೆಗೆ ಅಧಿಕಾರ ಇದೆ ಎಂದು ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಶಿವರಾಜ್ ಬಿ. ಪಾಟೀಲ ತಿಳಿಸಿದರು. ಮಾಲಿನ್ಯ ತಪಾಸಣೆ ಕೇಂದ್ರಗಳು ಎಲ್ಲಿರುತ್ತವೆ?
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರಮಾಣೀಕೃತಗೊಂಡ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳು ಪೆಟ್ರೋಲ್ ಬಂಕ್ ಆವರಣ ಸೇರಿದಂತೆ ವಿವಿಧೆಡೆ ಸ್ಥಾಪನೆಗೊಂಡಿರುತ್ತವೆ. ಈ ಕೇಂದ್ರಗಳು ನೀಡುವ ಪ್ರಮಾಣ ಪತ್ರದ ಅವಧಿ ಆರು ತಿಂಗಳು.
Related Articles
ತಪಾಸಣೆ ಕೇಂದ್ರಗಳಿಗೆ ಬೇಡಿಕೆ ಬೆನ್ನಲ್ಲೇ ತಪಾಸಣೆ ಕೇಂದ್ರಗಳು ಬೇಕಾಬಿಟ್ಟಿ ಸುಲಿಗೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಸಾರಿಗೆ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವಾದರೆ ಪರಿಸ್ಥಿತಿಯ ದುರುಪಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ,
ನಕಲಿ ಪ್ರಮಾಣ ಪತ್ರಗಳ ಬಗ್ಗೆಯೂ ನಿಗಾ ವಹಿಸಬೇಕು ಎಂದು ವಾಹನ ಮಾಲೀಕರು ಒತ್ತಾಯಿಸುತ್ತಾರೆ.
Advertisement
ಮೊಬೈಲ್ ವಾಹನಗಳಲ್ಲಿ ಉಚಿತಸಾರಿಗೆ ಇಲಾಖೆ ಅನುಮತಿ ನೀಡಿದ ಕೇಂದ್ರಗಳು ಮಾತ್ರವಲ್ಲ; ಮಾಲಿನ್ಯ ನಿಯಂತ್ರಣ ಮಂಡಳಿಯೂ ಮೊಬೈಲ್ ತಪಾಸಣ ಕೇಂದ್ರಗಳನ್ನು ರಾಜ್ಯದ ವಿವಿಧೆಡೆ ಸ್ಥಾಪಿಸಿದೆ. ಅವುಗಳ ಹೆಸರು “ಹಸುರು ವಾಹನ’. ವಿವಿಧೆಡೆ ಸುಮಾರು ಹತ್ತು “ಹಸುರು ವಾಹನ’ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ವಾಯುಮಾಲಿನ್ಯ ತಪಾಸಣೆ ಉಚಿತ. ಇವುಗಳು ನೀಡುವ ಪ್ರಮಾಣಪತ್ರದ ಅವಧಿ ಕೂಡ ಆರು ತಿಂಗಳು ಆಗಿರುತ್ತದೆ. ಪರೀಕ್ಷೆ ಪಾಸಾದ್ರಷ್ಟೇ ಪತ್ರ!
ವಾಯುಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ತಪಾಸಣೆಗೊಳಪಡಿಸುವ ವಾಹನಗಳಿಗೆಲ್ಲಾ ಪ್ರಮಾಣಪತ್ರ ಸಿಗುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗಬೇಕು. ಆಗ ಮಾತ್ರ ಪ್ರಮಾಣಪತ್ರ ದೊರೆಯಲಿದೆ. ಹೌದು, ಪ್ರತಿ ವಾಹನವು ಇಂತಿಷ್ಟೇ ಹೊಗೆ ಉಗುಳಬೇಕು ಹಾಗೂ ಅದರಲ್ಲಿನ ಧೂಳಿನ ಕಣಗಳ ಸಾಂದ್ರತೆ, ಕಾರ್ಬನ್ ಮೊನಾಕ್ಸೆ„ಡ್ ಮತ್ತಿತರ ಅಂಶಗಳು ಎಷ್ಟಿರಬೇಕು ಎಂಬ ಕುರಿತು ಮಾನ ದಂಡ ವಿದೆ. ಉದಾಹರಣೆಗೆ, ದ್ವಿಚಕ್ರ ವಾಹನವೊಂದರ ಪರೀಕ್ಷೆ ವೇಳೆ ಬಲೂನಿನಲ್ಲಿ ಹೊಗೆಯನ್ನು ಹಿಡಿದಿಟ್ಟಾಗ, ಅದರಲ್ಲಿನ ಧೂಳಿನ ಕಣಗಳ ಸಾಂದ್ರತೆ 200ರ ಗಡಿ ದಾಟಿರಬಾರದು. ಅದೇ ರೀತಿ, ಕಾರ್ಬನ್ ಮೊನಾಕ್ಸೆ„ಡ್ ಪ್ರಮಾಣ 0.5 ಎಂಎಂಜಿ ದಾಟುವಂತಿಲ್ಲ. ಹಾಗೊಂದು ವೇಳೆ ನಿಗದಿತ ಮಿತಿಯನ್ನು ದಾಟುವ ವಾಹನಗಳಿಗೆ ಪ್ರಮಾಣಪತ್ರ ನೀಡುವುದಿಲ್ಲ. ಬದಲಿಗೆ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುತ್ತದೆ. ಸರಿಪಡಿಸಿಕೊಂಡು ವಾಪಸ್ ಬಂದ ನಂತರ ಪ್ರಮಾಣಪತ್ರ ನೀಡಲಾಗುತ್ತದೆ. 1,022 ರಾಜ್ಯದಲ್ಲಿನ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳು
385 ಬೆಂಗಳೂರಿನಲ್ಲಿರುವ ಕೇಂದ್ರಗಳು
8am - 6 pm ಕೇಂದ್ರಗಳ ಕೆಲಸದ ಅವಧಿ
8am - 2 pm ರವಿವಾರ ಕೆಲಸದ ಅವಧಿ
ವಿಜಯಕುಮಾರ ಚಂದರಗಿ