Advertisement
ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, B.1.1.7 ಮತ್ತು 501Y.V2 ಸೇರಿದಂತೆ SARS-CoV-2 ನ ಹೊಸ ರೂಪಾಂತರಗಳ ವಿರುದ್ಧ ಮಾಡೆರ್ನಾ ಲಸಿಕೆಯ ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಹೇಳಿದೆ.
Related Articles
Advertisement
ಇದಲ್ಲದೆ, ಭಾರತೀಯ ಔಷಧಿ ಉತ್ಪಾದಕ ಸಂಸ‍್ಥೆ ಸಿಪ್ಲಾ ಗೆ ಮಾಡೆರ್ನಾದ ಕೋವಿಡ್ -19 ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೇಶದಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಕೂಡ ತಿಳಿಸಿದೆ.
ಭಾರತದಲ್ಲಿ ಈಗಾಗಲೇ ಮೂರು ಕೋವಿಡ್ ಲಸಿಕೆಗಳಾದ ಆಕ್ಸ್ ಫರ್ಡ್ ಯೂನಿವರ್ಸಿಟಿ ಸಂಶೋಧಿಸಿದ ಹಾಗೂ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶೀಲ್ಡ್, ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿದ ಹಾಗೂ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್, ರಷ್ಯಾದ ಗಮಲೇಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಸಂಶೋಧಿಸಿ ಉತ್ಪಾದಿಸುತ್ತಿರುವ ಸ್ಪಟ್ನಕ್ ವಿ ಕೋವಿಡ್ ಲಸಿಕೆಗಳನ್ನು ಭಾರತದಾದ್ಯಂತ ಲಸಿಕೆ ಅಭಿಯಾನಗಳಲ್ಲಿ ನೀಡಲಾಗುತ್ತಿದೆ. ಈಗ ಆ ಸಾಲಿಗೆ ಅಮೆರಿಕಾ ಮೂಲದ ಮಾಡೆರ್ನಾ ಕೋವಿಡ್ ಲಸಿಕೆಯೂ ಸೇರ್ಪಡೆಗೊಂಡಿದೆ.
ಇದನ್ನೂ ಓದಿ : ಸಿಇಟಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪ್ರಾಧಿಕಾರಕ್ಕೆ 2 ಲಕ್ಷ ಸರ್ಜಿಕಲ್ ಮಾಸ್ಕ್ ಕೊಡುಗೆ