ಹೊಸದಿಲ್ಲಿ: ಹೊಸತಾಗಿ ಉದ್ಘಾಟನೆಯಾಗಿರುವ ಸಂಸತ್ ಆವರಣದ ಒಳಭಾಗದಲ್ಲಿ ಒಂದು ಸಾಧನ ನೇತಾಡುತ್ತಿದೆ. ಅದೀಗ ಜನಾಕರ್ಷಣೆಯ ಕೇಂದ್ರ. ಅದನ್ನು ಫೌಕಾಲ್ಟ್ ಪೆಂಡ್ಯುಲಮ್ ಎಂದು ಕರೆಯಲಾಗುತ್ತದೆ. ಇದರ ವಿಶೇಷವೇನು ಗೊತ್ತಾ?
ಮೇಲ್ಫಾವಣಿಯಿಂದ ನೇತುಬಿಡಲಾಗಿರುವ ಅದು ನೆಲವನ್ನು ಸ್ಪರ್ಶಿಸುತ್ತದೆ. ಭೂಮಿಯ ತಿರುಗುವಿಕೆಯನ್ನು ಇದು ಸೂಚಿಸುತ್ತದೆ. ಭೂಮಿ ತನ್ನ ಅಕ್ಷದಲ್ಲಿ ಸುತ್ತುವಂತೆ, ಈ ಪೆಂಡ್ಯುಲಮ್ ಕೂಡ ತನ್ನ ಅಕ್ಷದಲ್ಲೇ ಈಕಡೆಯಿಂದ ಆಕಡೆ, ಆಕಡೆಯಿಂದ ಈಕಡೆ ಚಲಿಸುತ್ತದೆ. ವಿಜ್ಞಾನ ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿ ಇದನ್ನು ಸಂಸತ್ತಿನಲ್ಲಿ ಅಳವಡಿಸಿದೆ.
ಭೂಮಿ ಚಲಿಸುವುದು ನಮಗೆ ಗೊತ್ತಾಗುವುದಿಲ್ಲ. ಅದನ್ನು ಅರಿವು ಮಾಡಿಸುವುದೇ ಇದರ ಉದ್ದೇಶ. ಈ ಪೆಂಡ್ಯುಲಮ್ ಗಂಟೆಗೆ 1,670 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಒಟ್ಟು 22 ಮೀಟರ್ ಎತ್ತರವನ್ನು ಈ ತೂಗಾಡುವ ಸಾಧನ ಹೊಂದಿದೆ.