Advertisement
ಏನಿದು ಡಿಜಿಟಲ್ ಕರೆನ್ಸಿ?ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಡಿಜಿಟಲ್ ಕರೆನ್ಸಿ ಕೂಡ ಒಂದು ಕಾನೂನುಬದ್ಧ ರೂಪಾಯಿ. ಅಂದರೆ ಈ ಹಣ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಇರುತ್ತದೆ. ಸರಳವಾಗಿ ಹೇಳುವುದಾದರೆ ಇದೊಂದು ಫಿಯಟ್ ಕರೆನ್ಸಿ. ಇದನ್ನು ಪರಸ್ಪರ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು.
ಡಿಜಿಟಲ್ ರೂಪದಲ್ಲಿರುವ ಹಣ ಕಳೆದುಹೋಗಲ್ಲ, ಇದನ್ನು ಹರಿಯಲೂ ಆಗುವುದಿಲ್ಲ, ದೀರ್ಘಾವಧಿವರೆಗೆ ಬಾಳಿಕೆ ಬರುತ್ತದೆ. ಆದರೆ, ಭೌತಿಕ ರೂಪದಲ್ಲಿರುವ ನೋಟು ಹರಿದು ಹೋಗುವ ಅಥವಾ ಕಳೆದುಹೋಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ನೋಟುಗಳನ್ನು ಪ್ರಿಂಟ್ ಮಾಡಬೇಕಾಗಿಲ್ಲವಾಗಿರುವುದರಿಂದ ಇದರ ವೆಚ್ಚವೂ ಸರಕಾರಕ್ಕೆ ಉಳಿಯುತ್ತದೆ. ನಗದು ರೂಪಕ್ಕೆ ಬದಲಾಯಿಸಿಕೊಳ್ಳಬಹುದೇ?
ಹೌದು, ಆರ್‌ಬಿಐ ಜಾರಿಗೆ ತರಲಿರುವ ಡಿಜಿಟಲ್ ರುಪಿಯನ್ನು ನಗದು ರೂಪಕ್ಕೆ ವರ್ಗಾವಣೆ ಮಾಡಿಕೊಳ್ಳಬಹುದು. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಅಲ್ಲದೆ ಡಿಜಿಟಲ್ ರುಪಿಯಿಂದಾಗಿ ಭಾರತದ ಡಿಜಿಟಲ್ ಆರ್ಥಿಕತೆಯೂ ಬೆಳವಣಿಗೆ ಕಾಣುತ್ತದೆ. ಈ ಹಣಕ್ಕೆ ಹೆಚ್ಚಿನ ಭದ್ರತೆಯೂ ಇರುತ್ತದೆ ಎಂದಿದ್ದಾರೆ.
Related Articles
1 ಡಿಜಿಟಲ್ ಕರೆನ್ಸಿಯು ಭೌತಿಕ ನೋಟಿನ ಎಲೆಕ್ಟ್ರಾನಿಕ್ ರೂಪವಷ್ಟೇ. ಇದನ್ನು ಸಂಪರ್ಕರಹಿತ ವಹಿವಾಟಿಗೆ ಬಳಕೆ ಮಾಡಬಹುದು. ಆದರೆ, ಕ್ರಿಪ್ಟೋ ಕರೆನ್ಸಿಯನ್ನು ಬೇಧಿಸಲಾಗದ ಅತ್ಯಂತ ಸುರಕ್ಷಿತ ವ್ಯವಸ್ಥೆಯಲ್ಲಿ ಇರಿಸಲಾಗಿರುತ್ತದೆ.
Advertisement
2ಡಿಜಿಟಲ್ ಕರೆನ್ಸಿಗೆ ಆರ್‌ಬಿಐನಿಂದ ಮಾನ್ಯತೆ ಇರುತ್ತದೆ. ಆದರೆ, ಕ್ರಿಪ್ಟೋ ಕರೆನ್ಸಿಗೆ ಯಾವುದೇ ಮಾನ್ಯತೆ ಇರುವುದಿಲ್ಲ.
3ಡಿಜಿಟಲ್ ಕರೆನ್ಸಿಯ ಮೌಲ್ಯ ಸ್ಥಿರವಾಗಿರುತ್ತದೆ. ಯಾವುದೇ ದೇಶಕ್ಕೆ ಹೋದರೂ ಒಪ್ಪಿಕೊಳ್ಳಲಾಗುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿ ರೇಟ್ ಬದಲಾವಣೆಯಾಗುತ್ತಿರುತ್ತದೆ. ಎಲ್ಲ ಕಡೆಗಳಲ್ಲೂ ಇದನ್ನು ಒಪ್ಪಿಕೊಳ್ಳುವುದಿಲ್ಲ.
4ಡಿಜಿಟಲ್ ಕರೆನ್ಸಿಯ ಮಾಹಿತಿ ಕಳುಹಿಸುವವರು, ಪಡೆದುಕೊಳ್ಳಲಿರುವವರು ಮತ್ತು ಬ್ಯಾಂಕ್‌ಗೆ ಮಾತ್ರ ಗೊತ್ತಿರುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿಯ ಮಾಹಿತಿ ಎಲ್ಲರಿಗೂ ಗೊತ್ತಿರುತ್ತದೆ.
5ಡಿಜಿಟಲ್ ಕರೆನ್ಸಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಬಲವಾದ ಪಾಸ್‌ವರ್ಡ್ ಬೇಕಾಗುತ್ತದೆ. ಅದೇ ಕ್ರಿಪ್ಟೋ ಕರೆನ್ಸಿಗೆ ಎನ್‌ಕ್ರಿಪ್ಶನ್(ಬೇಧಿಸಲಾಗದ ಭದ್ರತೆ)ನ ಭದ್ರತೆ ನೀಡಲಾಗಿರುತ್ತದೆ.