Advertisement

ಜ್ಞಾನವ್ಯಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?

11:45 PM Oct 13, 2022 | Team Udayavani |

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತಾಗಿ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸಬೇಕು ಎಂಬ ಅರ್ಜಿ ಸಲ್ಲಿಕೆಯಾಗಿದ್ದು, ಇಂದು (ಅ. 14) ವಾರಾಣಸಿ ಜಿಲ್ಲಾ ಕೋರ್ಟ್‌ ತೀರ್ಪು ನೀಡಲಿದೆ. ಹಾಗಾದರೆ ಈ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?  ಇದನ್ನು ಏಕೆ ನಡೆಸಲಾಗುತ್ತದೆ? ಇಲ್ಲಿದೆ ಮಾಹಿತಿ…

Advertisement

ಕಾರ್ಬನ್‌ ಡೇಟಿಂಗ್‌ ಅಂದರೆ…

ಪುರಾತನ ವಸ್ತುವೊಂದು ಪತ್ತೆಯಾದಾಗ, ಅದು ಯಾವ ಕಾಲದ್ದು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪುರಾತತ್ವ ಇಲಾಖೆ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸುತ್ತದೆ. ಇದನ್ನು ಕೇವಲ ವಸ್ತುಗಳ ಮೇಲಷ್ಟೇ ಬಳಕೆ ಮಾಡುವುದಿಲ್ಲ, ಸಸಿಗಳು, ಸತ್ತ ಪ್ರಾಣಿಗಳು ಅಥವಾ ಅಸ್ಥಿಪಂಜರದ ಪಳೆಯುಳಿಕೆಗಳ ಮೇಲೂ ಪ್ರಯೋಗಿಸಲಾಗುತ್ತದೆ. ಅಂದರೆ ವಿಜ್ಞಾನಿಗಳು ವಸ್ತು ಅಥವಾ ಇನ್ನಿತರ ವಸ್ತುಗಳ ಮೇಲೆ ರೇಡಿಯೋ ಆಕ್ಟೀವ್‌ ಕಾರ್ಬನ್‌ ಡೇಟಿಂಗ್‌ ಪ್ರಯೋಗಿಸಿ ದಾಗ, ಅದರಲ್ಲಿ ಕಾರ್ಬನ್‌ 14 ಯಾವಾಗ, ಎಷ್ಟು ಪ್ರಮಾಣದಲ್ಲಿ ಇತ್ತು ಎಂಬುದು ಗೊತ್ತಾಗುತ್ತದೆ.

ಜಾಗತಿಕವಾಗಿ ಬಳಕೆ  :

ಈ ಕಾರ್ಬನ್‌ ಡೇಟಿಂಗ್‌ ಅನ್ನು ಜಗತ್ತಿನಾದ್ಯಂತ ಎಲ್ಲ ಪುರಾತತ್ವ ಇಲಾಖೆ ಸಂಶೋಧಕರು ಸೇರಿದಂತೆ ಇತರ ಇತಿಹಾಸ ತಜ್ಞರು ಬಳಕೆ ಮಾಡುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ಞರು ಮಾತ್ರ ಈ ವಿಧಾನವನ್ನು ಕಲ್ಲುಗಳ ಜೀವಿತಾವಧಿ ಕಂಡುಹಿಡಿಯಲು ಬಳಕೆ ಮಾಡಲ್ಲ. ಏಕೆಂದರೆ ಕಾರ್ಬನ್‌ ಡೇಟಿಂಗ್‌ 50 ಸಾವಿರ ವರ್ಷಗಳಿಂದ ಈಚಿಗಿನ ಕಲ್ಲುಗಳ ಜೀವಿತಾವಧಿ ಬಗ್ಗೆ ಹೇಳುತ್ತದೆ.

Advertisement

ಹೇಗೆ ಕಂಡು ಹಿಡಿಯಲಾಗುತ್ತದೆ?  :

ಇಂಗಾಲದ ಹೊರತಾಗಿ, ಪೊಟ್ಯಾಸಿ ಯಮ್‌ -40 ಸಹ ವಿಕಿರಣಶೀಲ ಕಾಲನಿರ್ಣಯಕ್ಕಾಗಿ ವಿಶ್ಲೇಷಿಸಬಹು ದಾದ ಒಂದು ಧಾತುವಾಗಿದೆ. ಪೊಟ್ಯಾಸಿ ಯಮ್‌ -40 ಅರ್ಧಾಯುಷ್ಯ 1.3 ಬಿಲಿಯನ್‌ ವರ್ಷಗಳಷ್ಟಿದೆ, ಅದೇ ರೀತಿ, ಯುರೇನಿಯಂ -235  704 ಮಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ ಮತ್ತು 14 ಬಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿರುವ ಥೋರಿಯಂ -232 ಅನ್ನು ಬಂಡೆಗಳಂತಹ ಭೂವೈಜ್ಞಾನಿಕ ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಸಹ ಬಳಸಲಾಗುತ್ತದೆ.

ಕಾರ್ಬನ್‌ 14 ಅಂದರೇನು? :

ಎಲ್ಲ ಜೀವಿಗಳು ಸೂರ್ಯನಿಂದ ಭೂಮಿಯ ವಾತಾವರಣದ ಮೂಲಕ ಬರುವ ಕಾಸ್ಮಿಕ್‌ ಕಿರಣಗಳನ್ನು ಎದುರಿಸುತ್ತವೆ. ಈ ಕಾಸ್ಮಿಕ್‌ ಕಿರಣಗಳಲ್ಲಿ ಕೆಲವು ವಾತಾವರಣದಲ್ಲಿನ ಪರಮಾಣುವಿಗೆ ಢಿಕ್ಕಿ ಹೊಡೆಯುತ್ತವೆ. ನಾವು ಹೀರಿಕೊಳ್ಳುವ ಕಾರ್ಬನ್‌ -14 ಪರಮಾಣುಗಳನ್ನು ಹೊಂದಿರುವ ದ್ವಿತೀಯಕ ಕಾಸ್ಮಿಕ್‌ ಕಿರಣವನ್ನು ಸೃಷ್ಟಿಸುತ್ತವೆ. ಕಾರ್ಬನ್‌-14 ವಿಕಿರಣಶೀಲವಾಗಿದ್ದು, ಸುಮಾರು 5,700 ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ. ಇದು ವಿಕಿರಣಶೀಲ ಮಾದರಿಯ ಪರಮಾಣು ನ್ಯೂಕ್ಲಿಯಸ್‌ಗಳು ಅರ್ಧದಷ್ಟು ಕೊಳೆಯಲು ಬೇಕಾಗುವ ಸಮಯವಾಗಿದೆ. ಕಾರ್ಬನ್‌ -14 ಪರಮಾಣುಗಳು ಆಮ್ಲಜನಕವನ್ನು ಸಂಧಿಸಿದಾಗ, ಅವು ಇಂಗಾಲದ ಡೈಆಕ್ಸೈಡ್‌ ಅನ್ನು ರೂಪಿಸುತ್ತವೆ, ಇದನ್ನು ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಈ ಸಸ್ಯವನ್ನು ನಮ್ಮ ವ್ಯವಸ್ಥೆಗೆ ಕಾರ್ಬನ್‌ -14 ಅನ್ನು ಸೇರಿಸುತ್ತವೆ. ಕಾರ್ಬನ್‌ -14 ಕೊಳೆಯುತ್ತಲೇ ಇದ್ದರೂ ನಮ್ಮ ಕೊನೆಯ ಉಸಿರು ಇರುವವರೆಗೂ ಅವುಗಳನ್ನು ನಿರಂತರವಾಗಿ ಸೇರಿಸಲಾಗುತ್ತಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next