Advertisement
ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಥವಾ ಗುರುತಿಸಲ್ಪಟ್ಟ ಅಭ್ಯರ್ಥಿಯು ತನ್ನ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಹಲವು ಅರ್ಜಿ ನಮೂನೆಗಳಲ್ಲಿ ಬಿ ಫಾರಂ ಸಹ ಒಂದು. ಇದರಲ್ಲಿ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ವಿಶೇಷ ಅಧಿಕಾರ ನೀಡಲ್ಪಟ್ಟ ಪದಾಧಿಕಾರಿಯ ಸಹಿ ಇರುತ್ತದೆ. ಆ ಸಹಿ ಇದ್ದಾಗ ಮಾತ್ರ ಅದು ಅಧಿಕೃತವೆನಿಸಿಕೊಳ್ಳುತ್ತದೆ. ಬಿ ಫಾರಂ ಮೂಲಕ ರಾಜಕೀಯ ಪಕ್ಷವೊಂದು ಇವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಚುನಾವಣಾಧಿಕಾರಿಗಳಿಗೆ ದೃಢೀಕರಣ ಕೊಡುತ್ತದೆ.ಬಿ ಫಾರಂನಲ್ಲಿ ಐದು ಭಾಗಗಳಿದ್ದು, ಅದೆಲ್ಲವನ್ನೂ ಭರ್ತಿ ಮಾಡಬೇಕು. ಜತೆಗೆ ಯಾವ ಕ್ಷೇತ್ರದ ಚುನಾವಣೆ ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸಲಾಗಿರುತ್ತದೋ, ಆ ಕ್ಷೇತ್ರದ 10 ಮಂದಿ ಮತದಾರರುಸೂಚಕರಾಗಿರಬೇಕು. ಒಂದು ಪಕ್ಷದಿಂದ ಕೆಲವು ಸಂದರ್ಭಗಳಲ್ಲಿ ಒಂದೇ ಬಿ ಫಾರಂನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ನಮೂದು ಮಾಡಲಾಗಿರುತ್ತದೆ. ಒಂದನೇ ಅಭ್ಯರ್ಥಿ ಅಧಿಕೃತ, ಎರಡನೇ ಅಭ್ಯರ್ಥಿಯನ್ನು “ಡಮ್ಮಿ ಕ್ಯಾಂಡಿಡೆಟ್’ ಎಂದು ಕರೆಯಲಾಗುತ್ತದೆ.
Advertisement
ಬಿ ಫಾರಂ ಎಂದರೇನು?
11:49 PM Mar 24, 2019 | Vishnu Das |