Advertisement
ರಾಮಾಯಣದ ಸಂದರ್ಭದಲ್ಲಿ ಲಕ್ಷ್ಮಣ ಹಾಗೂ ಶತ್ರುಘ್ನರು ಈ ನಕ್ಷತ್ರದಲ್ಲಿ ಹುಟ್ಟಿದ್ದರು ಎಂಬ ಉಲ್ಲೇಖವಿದೆ. ಮಹಾತ್ಮಾಗಾಂಧೀ, ಜವಾಹರಲಾಲ್ ನೆಹರು, ಹೃತ್ವಿಕ್ ರೋಶನ್ ಮುಂತಾದವರೆಲ್ಲ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರು. ಆಶ್ಲೇಷಾ ನಕ್ಷ¤ತ್ರದವರೆಲ್ಲ ತೊಂದರೆಯಾಗುತ್ತದೆ ಎಂದು ಹೇಳಬಾರದು. ಹೌದು, ನೆಲೆತಪ್ಪಿದ ಮನೋಸ್ಥಿತಿಗೆ, ಗೊಂದಲದೊಂದಿಗಿನ ಭಾವುಕತೆ, ಏಕಾಏಕಿ ಅತಂತ್ರತೆ ಹಾಗೂ ಆತಂಕಗಳೊಂದಿಗೆ ಚಡಪಡಿಸುವುದು, ತಮ್ಮನ್ನು ಸುರಕ್ಷಿತವಾಗಿಸಿಕೊಂಡಿರಲು ಇತರರನ್ನು ಮಾತಿನ ಮೂಲಕ, ಭಾವನೆಗಳ ಮೂಲಕ ದಾಳಿ ಗೊಳಪಡಿಸುವುದು, ಸೂಕ್ತವಲ್ಲದ ವಿಚಾರಣೆಗಳೊಂದಿಗೆ ಪ್ರಯೋಗ ನಡೆಸುತ್ತಿರುವುದು, ಇರುವುದನ್ನು ಇನ್ನೂ ಹೆಚ್ಚಿನ ನಿರೀಕ್ಷೆಯ ಜೊತೆ ಮಾಡಲು ತನಗೆ ತಾನೇ ಗೋಳಾಡಿಕೊಳ್ಳುವುದು ಇದರ ಜಾಯಮಾನ.
Related Articles
ಮಾನಸಿಕ ಏರುಪೇರುಗಳನ್ನು ಹೊಂದಲು ಸಾಧ್ಯತೆಗಳು ಜಾಸ್ತಿ. ಆಕಾಶವೇ ತಲೆಯ ಮೇಲೆ ಬಿದ್ಧವರಂತೆ ಇರುವುದು ಇವರ ಜಾಯಮಾನವಾಗಬಹುದು. ಖನ್ನತೆಯಿಂದ ಬಳಲುವ ಸಾಧ್ಯೆತೆಗಳು ಜಾಸ್ತಿ. ಮೋಸ ಹೋಗುವ ಪ್ರವೃತ್ತಿ ಜಾಸ್ತಿ. ಯಾರನ್ನೂ ಆರೈಕೆ ಮಾಡುವುದಕ್ಕೆ ಮುಂದಾಗದೇ ಇರುವ ಪ್ರವೃತ್ತಿ ಹೊಂದಬಹುದು. ಹೇಳಬೇಕಾದುದನ್ನು ಹಿತವಾಗಿ ಹೇಳದಿರಬಹುದು. ಯೋಜನೆಗಳನ್ನು ಹಾಕಿಕೊಳ್ಳದೇ ಕಾರ್ಯಪ್ರವೃತ್ತರಾಗಬಹುದು. ಹೀಗಾಗಿ ಅಪ್ರಿಯರಾಗುವ ಸಾಧ್ಯತೆ ಅಧಿಕ. ಸಾಮಾಜಿಕವಾದ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದು ಇವರಿಗೆ ಕಷ್ಟವಾಗಬಹುದು. ನಿಯಮಗಳ ಉಲ್ಲಂಘನೆಯನ್ನು ಮಾಡುವುದು ಇವರಿಗೆ ಪ್ರಿಯವಾದೀತು. ಉಪಕರಿಸಿದವರಿಗೇ ತಿರುಗಿ ಬೀಳುವ ಮನೋಭಾವ ಬರಬಹುದು. ನೀವು ಮಾಡಿದ್ದು ತಪ್ಪು ಎಂದು ಅಂದು ಅನ್ಯರ ಬಗೆಗೆ ಕಹಿ ಭಾವನೆಯನ್ನು ತೊರೆಯಲಾಗದೆ ಬಳಲಬಹುದು. ಅನ್ಯರು ತನ್ನ ತಾಳಕ್ಕೆ ಕುಣಿಯಬೇಕೆಂಬ ಭಾವ ಹೊಂದಿರಬಹುದು. ಮಾತನಾಡುತ್ತ, ಆಡುತ್ತ ಎದುರಿಗಿದ್ದವರು ಆಕರ್ಷಿತರಾಗದೇ ಬಳಲಿಕೆಗೆ ತುತ್ತಾದರು ಎಂಬುದನ್ನು ಯೋಚಿಸಲಾರರು. ಯಾರ ಬಗೆಗೂ ಒಳ್ಳೆಯ ಮಾತು, ಪ್ರಶಂಸೆ ಮಾಡುವ ಗುಣ ಇವರಿಗೆ ತಿಳಿಯದು. ದೂರ ಸರಿದು ಇರಲು ಬಯಸುತ್ತಾರೆಯೇ ವಿನಾ ಹೊಂದಾಣಿಕೆ ಕಷ್ಟ. ಉಪಯೋಗವಾಗುವುದನ್ನು ಮಾಡುವುದು ಕಷ್ಟ. ಹಿಂದು ಮುಂದು ಯೋಚಿಸದೇ ಕಾರ್ಯತತ್ಪರ ಗೊಳ್ಳುವುದು ಗುಣವಾಗಬಹುದು. ಸರ್ರನೆ ದೂರವಾಗುಳಿಯಲು ಬಯಸುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯಾಗಿರುವುದು ಸ್ವಭಾವ, ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸುಳ್ಳಿಗೂ ಸಿದ್ಧ, ಸುಮ್ಮನೆ ಅನ್ಯರನ್ನು ಸಿಕ್ಕಿ ಹಾಕಿಸುವ ಗುಣ, ಒಳಗೊಳಗೇ ಮುಗಮ್ಮಾಗಿ ಇರುವುದು ಜಾಸ್ತಿ. ಥಟ್ಟನೆ ಕೋವಿಷ್ಟರಾಗುವುದು. ವಿನೀತರಾಗುವುದು ಕಷ್ಟ. ಮೊಂಡುತನ ಜಾಸ್ತಿ.
Advertisement
ಈ ಗುಣಗಳು ಬಂದೇ ಬರುವವೇ?
ಈ ನಕ್ಷತ್ರ ಸರ್ಪದ ತಣ್ಮನೆಯ ವಿಷ, ಬೌದ್ಧಿಕ ಶಕ್ತಿ ಎರಡನ್ನೂ ಒಳಗೊಂಡ ಪರಿಯಾದ್ದರಿಂದ ಕೆಂಡದ ಕಾವು ಹೊಂದಿದ ಕುಜಗ್ರಹ, ಅಡೆತಡೆ ತರುವ ಕೇತು ವಿಘ್ನಗಳನ್ನು ನಿರ್ಮಿಸುವ ರೀತಿ, ನಿಧಾನವಾಗಿಸುವ ಶನೈಶ್ಚರ, ಕಾರ್ಯಕ್ಷಮತೆ ನೀಡುವ ಗುಣ ಹೊಂದಿದ್ದರೂ ಕಾಂತಿಗೆ ಭಂಗತರುವ ಸೂರ್ಯರು ಮುಖ್ಯವಾಗಿ ಬುಧ ಗ್ರಹ, ಚಂದ್ರ ಗ್ರಹಗಳನ್ನು ಅಂತೆಯೇ ರಾಹುವನ್ನು ಹೇಗೆ ಸಂವೇದಿಸುತ್ತಾರೆ ಎಂಬುದರ ಮೇಲೆ ಆಶ್ಲೇಷಾ ನಕ್ಷತ್ರದವರು ಅಪಾರವಾದ ಶಕ್ತಿ ಅಥವಾ ದೌರ್ಬಲ್ಯಗಳು ಹೇಗೆ ರೂಪಿತವಾಗುತ್ತವೆ ಎಂಬುದನ್ನು ನಿರ್ಧರಿಸಬೇಕು.
ಪ್ರಧಾನವಾಗಿ ನಕ್ಷತ್ರದ ಮೊದಲು ಪಾದವು ಧನಸ್ಸು ರಾಶಿಯನ್ನು ವ್ಯಾಪಿಸುವುದರಿಂದ ಒಳ್ಳೆಯಗನ್ನು ಪಡೆಯಲು ಶಕ್ತಿ ಪಡೆಯುತ್ತಾರೆ. ನಕ್ಷತ್ರದ ಎರಡನೇ ಪಾದವು ಸೂಕ್ತವಾದ ಆವರಣಗಳನ್ನು ಪಡೆದಿರದಿದ್ದರೆ ಶನೈಶ್ಚರನ ದೋಷಗಳಿಂದಾಗಿ ಧನ ನಾಶಕ್ಕೆ ಕಾರಣವಾಗುತ್ತದೆ. ಆಶ್ಲೇಷಾ ನಕ್ಷತ್ರದ 3ನೇ ಪಾದ ಸೂಕ್ತವಾಗಿರದಿದ್ದರೆ, ಆಗಲೂ ಶನೈಶ್ಚರನ ಬಾಧೆ ತಾಯಿಗೇ ತೊಂದರೆ ತರಬಲ್ಲದು. ಶನೈಶ್ಚರನು ಮಾತೃಕಾರಕನಾದ ಚಂದ್ರನನ್ನು ಹಿಂಸಿಸುವ ಸ್ಥಿತಿ ಇದ್ದಲ್ಲಿ ಈ ತೊಂದರೆಯ ಉದ್ಬವಿಸಬಹುದು. ಆಶ್ಲೇಷಾ ನಕ್ಷತ್ರದ ನಾಲ್ಕನೇ ಪಾದ ಸಮತೋಲನ ಕಳಕೊಂಡಿದ್ದರೆ ಅದು ತಂದೆಯ ವಿಚಾರದಲ್ಲಿ ಹಲವು ತೊಂದರೆಗಳನ್ನು ತಂದಿಡಬಹುದು. ಪಿತೃಕಾರಕನಾದ ಸೂರ್ಯನು ಬಾಧೆ ಹೆಚ್ಚು ಮಾಡಲು ಸಾಧ್ಯವಿರುತ್ತದೆ. ಆದರೆ ಸೂಕ್ತವಾಗಿ ತೊಂದರೆಗಳು ಹರಳು ಗಟ್ಟಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಬೇಕು. ವಿನಾಕಾರಣ ತೊಂದರೆ ಇದ್ದಿರಬಹುದು ಎಂಬ ನಿರ್ಧಾರಕ್ಕೆ ಬರದಿರಿ. ಚಂದ್ರನ ಬಗೆಗೆ ಎಂದು ಸರಿಯಾಗಿ ತಿಳಿಯದೆಯೇ ಮುತ್ತು ಧರಿಸಲು ಹೋಗದಿರಿ. ಏನೇ ತೊಂದರೆ ಇದ್ದರೂ ನಿವಾರಿಸಿಕೊಳ್ಳಲು ಅವಕಾಶವಿರುತ್ತದೆ. ಸರಳವಾದ ಉಪಾಯಗಳು, ಮಂತ್ರ ಪಠಣ, ಸೂಕ್ತವಾದ ಯಂತ್ರಗಳಿಂದ ತೊಂದರೆಗಳು ದೂರವಾಗುತ್ತವೆ.
ಅನಂತ ಶಾಸ್ತ್ರಿ