Advertisement
ಸಮಸ್ಯೆ ಗುರುತಿಸುವುದು ಹೇಗೆ? ಹೊರ ಕವರ್‌ಗೆ ಹಾನಿ
ಆ್ಯಕ್ಸಲರೇಟರ್ ಹೊರ ಕವರ್ ಸ್ಟೀಲ್‌ನಿಂದಾಗಿದ್ದು ಅದರ ಮೇಲ್ಭಾಗ ಪ್ಲಾಸ್ಟಿಕ್ ಕವರ್ ಇರುತ್ತದೆ. ಈ ಸ್ಟೀಲ್ ಕವರ್‌ಗೆ ಹಾನಿಯಾದರೆ, ಒಳಗಿರುವ ಕೇಬಲ್‌ಗೂ ಕೆಲವೊಮ್ಮೆ ಹಾನಿಯಾಗುತ್ತದೆ. ಹಲವು ವರ್ಷಗಳ ಬಳಕೆ ಅಥವಾ ಒಳಭಾಗದಲ್ಲಿ ಉಜ್ಜಾಟದಿಂದಾಗಿ ಕೇಬಲ್‌ಗೆ ಸಮಸ್ಯೆಯಾಗಬಹುದು.
ಆ್ಯಕ್ಸಲರೇಟರ್ ತಿರುವಿದರೂ, ಬೈಕ್ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದಾದರೆ ಕೇಬಲ್ ಸಮಸ್ಯೆಯೂ ಕಾರಣವಿರಬಹುದು. ಇಂತಹ ಸಂದರ್ಭದಲ್ಲಿ ಬೈಕ್ ಸ್ಟಾಂಡ್ ಹಾಕಿ ಪಾರ್ಕ್ ಮಾಡಿ, ಕಾಬ್ಯುಯರೇಟರ್‌ನಲ್ಲಿ ಥಾಟಲ್ ತಿರುಗಿಸಲು ಯತ್ನಿಸಿ. ಈಗ ಸರಿಯಾಗಿದ್ದರೆ ಅದು ಕೇಬಲ್‌ನದ್ದೇ ಸಮಸ್ಯೆ. ಇಂತಹ ಸಂದರ್ಭದಲ್ಲಿ ಕೇಬಲ್ ಬದಲಾವಣೆ ಅನಿವಾರ್ಯ. ಕೇಬಲ್ ಬದಲಾವಣೆ ಹೇಗೆ?
ಬೈಕ್ ಅನ್ನು ಮೇನ್ ಸ್ಟಾಂಡ್‌ನಲ್ಲಿ ಪಾರ್ಕ್ ಮಾಡಿ ಕೇಬಲ್ ಹ್ಯಾಂಡಲ್ ಬಾರ್‌ಗೆ ಮತ್ತು ಕಾಬ್ಯುಯರೇಟರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈಗ ಹ್ಯಾಂಡಲ್‌ಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿರುವ ನಟ್ ಅನ್ನು ಸಡಿಸಲಗೊಳಿಸಿ. ಬಳಿಕ ಹ್ಯಾಂಡಲ್‌ನ ಗ್ರಿಪ್ ಅನ್ನು ತೆಗೆಯಿರಿ. ಗ್ರಿಪ್‌ನ ಒಳಗೆ ಕೇಬಲ್ ಸಂಪರ್ಕ ಇರುವುದು ಗೊತ್ತಾಗುತ್ತದೆ. ಬಳಿಕ ಕಾಬ್ಯುìಯರೇಟರ್‌ನಲ್ಲಿ ಇರುವ ಸಂಪರ್ಕವನ್ನೂ ಎಳೆದು ತೆಗೆಯಿರಿ.
Related Articles
Advertisement
ದಾರಿ ಮಧ್ಯೆ ಸಮಸ್ಯೆಯಾದರೆ ಹೀಗೆ ಮಾಡಿಆ್ಯಕ್ಸಲರೇಟರ್ ಕೇಬಲ್ ತುಂಡಾಗಿದೆ. ಬೈಕ್ ನಿಂತೋಗಿದೆ. ಏನು ಮಾಡೋದು? ಟೆನ್ಶನ್ ಬೇಡ. ಇದಕ್ಕೆ ಸುಲಭ ಉಪಾಯವಿದೆ. ಒಂದು ವೇಳೆ ಕೇಬಲ್ ಹ್ಯಾಂಡ್ ಗ್ರಿಪ್ ಸೇರುವ ಜಾಗದಲ್ಲಿ ತುಂಡಾಗಿದೆ ಎಂದಾದರೆ ಸಣ್ಣ ಬಟ್ಟೆಯ ಚೂರು ಇದ್ದರೆ ಅದಕ್ಕೆ ಬಿಗಿದು, ಗ್ರಿಪ್‌ಗೆ ಸುತ್ತಿ ಗ್ರಿಪರ್ ಅನ್ನು ಮೊದಲಿನಂತೆಯೇ ಬಳಸಬಹುದು. ಒಂದು ವೇಳೆ ಕೇಬಲ್ ಸಂಪರ್ಕ ಕಡಿದುಕೊಂಡಿದ್ದರೆ, ಮೈನ್ ಸ್ಟಾಂಡ್ ಹಾಕಿ ಪಾರ್ಕ್ ಮಾಡಿ. ಕಾಬ್ಯುಯರೇಟರ್ ಕೆಳಭಾಗದಲ್ಲಿ ಆ್ಯಕ್ಸಲರೇಷನ್ ಅಡ್ಜಸ್ಟ್ ಮಾಡುವ ಸ್ಪ್ರಿಂಗ್ ನಟ್ ಇರುತ್ತದೆ. ಇದನ್ನು ತುಸು ಬಿಗಿಗೊಳಿಸಿ. ಆಗ ಆರ್‌ಪಿಎಂ ಹೆಚ್ಚಾಗುತ್ತದೆ (ಅಕ್ಸಲರೇಟರ್ ನೀಡಿದಂತೆ) ಬಳಿಕ ಕ್ಲಚ್‌ನಲ್ಲೇ ನಿಭಾಯಿಸಿಕೊಂಡು ಚಾಲನೆ ಮಾಡಬಹುದು. ಗಮನಿಸಿ ಇದು ತುರ್ತು ಸಂದರ್ಭಕ್ಕೆ ಮಾತ್ರ ಪರಿಹಾರವಾಗಬಲ್ಲದು. - ಈಶ