ಇಂದಿನಿಂದ ಸಿಮ್ ಕಾರ್ಡ್ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ಅನ್ವಯವಾಗಲಿದೆ. ಸಿಮ್ ಕಾರ್ಡ್ ಡೀಲರ್‌ಗಳು ಇನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು, ದೃಢೀಕರಣಕ್ಕೆ(ಕೆವೈಸಿ) ಒಳಗಾಗಬೇಕು. ತಪ್ಪಿದಲ್ಲಿ 10 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಕೆವೈಸಿ ಪ್ರಕ್ರಿಯೆಗೆ ಒಳಪಡದೇ ಸಿಮ್ ಖರೀದಿಯೂ ಇನ್ನು ಸಾಧ್ಯವಿಲ್ಲ. ಹಾಗೆಯೇ, ದೊಡ್ಡ ಪ್ರಮಾಣದಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸುವುದಕ್ಕೂ ಕೆಲವು ನಿರ್ಬಂಧ ವಿಧಿಸಲಾಗಿದೆ.
Advertisement
ಸಾಲದ ನಿಯಮಆರ್ಬಿಐ ಜಾರಿ ಮಾಡಿರುವ ಸಾಲ ಸಂಬಂಧಿ ನಿಯಮಗಳು ಇಂದಿನಿಂದ ಜಾರಿಯಾಗಲಿವೆ. ಅದರಂತೆ, ಸಾಲ ನೀಡುವ ವೇಳೆ ಬ್ಯಾಂಕುಗಳು ಗ್ರಾಹಕನಿಂದ ಪಡೆಯುವ ಆಸ್ತಿಯ ದಾಖಲೆಗಳನ್ನು ಸಾಲ ಮರುಪಾವತಿಸಿದ ಒಂದು ತಿಂಗಳೊಳಗಾಗಿ ಗ್ರಾಹಕನಿಗೆ ವಾಪಸ್ ನೀಡಬೇಕು. ತಪ್ಪಿದಲ್ಲಿ ಬ್ಯಾಂಕು ಆ ಗ್ರಾಹಕನಿಗೆ 5 ಸಾವಿರ ರೂ.ಗಳವರೆಗೆ ದಂಡ ಪಾವತಿಸಬೇಕು.
ಡಿ.1ರಿಂದ ಮಲೇಷ್ಯಾಗೆ ತೆರಳಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ಭಾರತೀಯರು ಮತ್ತು ಚೀನಾ ನಾಗರಿಕರು ಮಲೇಷ್ಯಾದಲ್ಲಿ 30 ದಿನಗಳ ಕಾಲ ವೀಸಾವಿಲ್ಲದೆ ತಂಗಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ. ಗೂಗಲ್ ಖಾತೆ ಡಿಲೀಟ್
ನಿಷ್ಕ್ರಿಯವಾಗಿರುವ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಟೆಕ್ ದಿಗ್ಗಜ ಗೂಗಲ್ ಘೋಷಿಸಿದೆ. ಅದರಂತೆ, 2 ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳನ್ನು ಅಳಿಸಿಹಾಕುವುದಾಗಿ ಈಗಾಗಲೇ ಬಳಕೆದಾರರಿಗೆ ಇಮೇಲ್ ಸಂದೇಶ ರವಾನಿಸಿದೆ. ಡಿ.1ರಿಂದ ಇದು ಜಾರಿಯಾಗಲಿದೆ.
Related Articles
ಐಪಿಒ(ಆರಂಭಿಕ ಷೇರು ಮಾರಾಟ) ಲಿಸ್ಟಿಂಗ್‌ಗೆ ಇದ್ದ ಕಾಲಮಿತಿಯನ್ನು ಸೆಬಿ ಡಿ.1ರಿಂದ ಅನ್ವಯವಾಗುವಂತೆ ಕಡಿತಗೊಳಿಸಿದೆ. ಐಪಿಒ ಪೂರ್ಣಗೊಂಡ ಬಳಿಕ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಲಿಸ್ಟಿಂಗ್‌ಗೆ ಈವರೆಗೆ 6 ದಿನಗಳ ಕಾಲಾವಕಾಶವಿತ್ತು. ಶುಕ್ರವಾರದಿಂದ ಇದು 3 ದಿನಗಳಿಗೆ ಇಳಿಯಲಿದೆ.
Advertisement
ಎಲ್‌ಪಿಜಿ ದರ ಪರಿಷ್ಕರಣೆಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಶುಕ್ರವಾರದಿಂದ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು. ಜಿ20 ಅಧ್ಯಕ್ಷತೆ:
ಭಾರತದ ಜಿ20 ರಾಷ್ಟ್ರಗಳ ಅಧ್ಯಕ್ಷತೆಯು ನ.30ರಂದು ಕೊನೆಗೊಂಡಿದ್ದು, ಶುಕ್ರವಾರದಿಂದ ಬ್ರೆಜಿಲ್ ಅಧಿಕೃತವಾಗಿ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ಪ್ರಧಾನಿ ಮೋದಿಯವರು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಅವರಿಗೆ ಅಧ್ಯಕ್ಷತೆಯ ದಂಡವನ್ನು ಹಸ್ತಾಂತರಿಸಿದ್ದರು.