Advertisement
ಹಣೆಗೆ ಬಿಂದಿ, ಕುತ್ತಿಗೆಯಲ್ಲಿ ಮಾಂಗಲ್ಯ, ಕೈಗೆ ಬಳೆ ಇಲ್ಲದೆ ವಿಧವೆಯರ ರೀತಿಯಲ್ಲಿ ಕಂಡು ಬಂದ ತನ್ನ ತಾಯಿ ಮತ್ತು ಪತ್ನಿಯನ್ನು ತನ್ನ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಕಂಡಾಗ ಜಾಧವ್ ಆಘಾತಕ್ಕೆ ಗುರಿಯಾಗಿ ತಾಯಿಯಲ್ಲಿ ಕೇಳಿದ ಪ್ರಶ್ನೆ, “ಅಮ್ಮಾ, ಬಾಬಾ (ತಂದೆ) ಹೇಗಿದ್ದಾರೆ ? ಅವರಿಗೇನಾಗಿದೆ?’.
Related Articles
Advertisement
“ಸಾವಿರಾರು ಅಮಾಯಕ ಪಾಕಿಸ್ಥಾನೀಯರನ್ನು ಕೊಂದ ನಿಮ್ಮ ಪತಿಯ ಬಗ್ಗೆ ನೀವು ಏನು ಹೇಳುತ್ತೀರಿ ?’ “ಕೊಲೆಗಾರನಾಗಿರುವ ನಿಮ್ಮ ಮಗನನ್ನು ಭೇಟಿಯಾದ ಬಳಿಕ ನಿಮಗೇನು ಅನ್ನಿಸಿತು?” ಎಂಬ ಪ್ರಶ್ನೆಗಳನ್ನು ಪಾಕ್ ಪತ್ರಕರ್ತರು ಈ ಮಹಿಳೆಯರನ್ನು ತಿವಿಯುವ ರೀತಿಯಲ್ಲಿ, ದೈಹಿಕವಾಗಿ ಅವರ ಮೇಲೇರಿ ಹೋಗುವ ರೀತಿಯಲ್ಲಿ, ಕೇಳಿದರು.
ಜಾಧವ್ ಭೇಟಿಯಾದ ಬಳಿಕ ಈ ಮಹಿಳೆಯರು, ಅದರ ಮೊದಲಿಗಿಂತಲೂ ಹೆಚ್ಚಿನ ಮಾನಸಿಕ ಖನ್ನತೆ ಮತ್ತು ಕ್ಷೋಭೆಯನ್ನು ಅನುಭವಿಸಿದರು ಎಂದು ಇವರ ಸಂಬಂಧಿಯೋರ್ವರು ಭಾರತೀಯ ಮಾಧ್ಯಮಕ್ಕೆ ಹೇಳಿದ್ದಾರೆ.
ಜಾಧವ್, ಅವರ ತಾಯಿ ಮತ್ತು ಪತ್ನಿಯೊಂದಿಗೆ 22 ತಿಂಗಳ ಬಳಿಕ ನಡೆಸಿದ ಭಾವನಾತ್ಮಕ ಭೇಟಿಯನ್ನು ಪಾಕಿಸ್ಥಾನ ಕೇವಲ ತನ್ನ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಅತ್ಯಂತ ನೀಚತನವನ್ನು ತೋರಿತು ಎಂದು ಈ ಇಡಿಯ ಪ್ರಹಸನವನ್ನು ಸಂಸತ್ತಿನಲ್ಲಿ ಇಂದು ಗುರುವಾರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ವಿವರಿಸಿದರು.